ಬಳ್ಳಾರಿ:ಚಿತ್ರರಂಗದ ಸ್ಟಾರ್ ನಟರನ್ನ ಭೇಟಿಯಾಗೋದು ಅಷ್ಟು ಸಲೀಸಲ್ಲ. ಆದರೂ ಒಮ್ಮೆ ಪ್ರಯತ್ನ ಮಾಡೋಣ ಅಂತಾ ಇಲ್ಲೊಬ್ಬ ಅಭಿಯಾನಿ ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಲು ಬರೋಬ್ಬರಿ 400 ಕೀಲೋ ಮೀಟರ್ ಪಾದಯಾತ್ರೆ ನಡೆಸುತ್ತಿದ್ದಾರೆ.

ಟಾಲಿವುಡ್​ ಪವರ್​ಸ್ಟಾರ್ ಪವನ್​ ಕಲ್ಯಾಣ್​ ಭೇಟಿಗಾಗಿ ಬಳ್ಳಾರಿಯ ಲಾಲ ಕಮಾನ್ ನಿವಾಸಿ ಬಿ.ಚಂದ್ರಶೇಖರ ಎಂಬುವರು ಬಳ್ಳಾರಿಯಿಂದ ಹೈದರಾಬಾದ್​ವರೆಗೂ ಪಾದಯಾತ್ರೆ ನಡೆಸುತ್ತಿದ್ದಾರೆ.
ಕಳೆದ ಸೋಮವಾರ ಪಾದಯಾತ್ರೆ ಆರಂಭಿಸಿರುವ ಚಂದ್ರಶೇಖರ ಇಂದು ಹೈದರಾಬಾದ್​ನ ಶಾದ್ ನಗರ ತಲುಪಿದ್ದು, ಇಂದು ಸಂಜೆ ಪವರ್​ಸ್ಟಾರ್ ಪವನ್​ ಕಲ್ಯಾಣ್​ ಹಾಗೂ ರಾಮ್​ಚರಣ್​ರನ್ನು ಭೇಟಿಯಾಗಲಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಪವನ್​ ಕಲ್ಯಾಣ್​ರನ್ನ ಭೇಟಿಯಾಗಲು ಪ್ರಯತ್ನಿಸಿದ್ದರು. ಆದರೆ, ಚಂದ್ರಶೇಖರ್​ಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಬಳ್ಳಾರಿಯಿಂದ ಹೈದರಾಬಾದ್​ವರೆಗೂ ಪಾದಯಾತ್ರೆ ಮೂಲಕ ತೆರಳಿ ನೆಚ್ಚಿನ ನಟನನ್ನ ಭೇಟಿಯಾಗುತ್ತಿರುವುದು ವಿಶೇಷವಾಗಿದೆ.(ದಿಗ್ವಿಜಯ ನ್ಯೂಸ್​)
ಹನಿಮೂನ್​ ವೇಳೆ ಬೆನ್ನು ಹುಷಾರು! ದೀಪಕ್​ ಚಹರ್​ಗೆ ಎಚ್ಚರಿಕೆ ನೀಡಿದ ಸಹೋದರಿ ಮಾಲತಿ

ಇವರೇನು ಮನುಷ್ಯರಾ? ರಾಕ್ಷಸರ?… ಕಿರುಕುಳ ತಾಳಲಾರದೇ ವಿಷ ಸೇವಿಸಿ ಸಾವಿನ ಹಾದಿ ಹಿಡಿದ ಗರ್ಭಿಣಿ

ಎಣ್ಣೆ ಬಿಡ್ತಿಲ್ಲ, ದುಡ್ಡು ಉಳಿತಿಲ್ಲ… ಹುಂಜಕ್ಕೆ ಒಂದೇ ಒಂದು ಪೆಗ್​ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಮಾಲೀಕ!

Sign in to your account
Please enter an answer in digits:2 × 4 =
Remember me
