ಬೆಂಗಳೂರು:ಮಹಾ ವಂಚಕ ಯುವರಾಜ್​ ಖಾತೆಯಿಂದ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಹಣ ವರ್ಗಾವಣೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿರುವ ನಟಿ ರಾಧಿಕಾಗೆ ಪ್ರಮುಖ ಮೂರು ವಿಷಯಗಳು ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ
ನಟಿ ರಾಧಿಕಾಗೆ ನುಂಗಲಾರದ ತುತ್ತಾಗಿರುವ ಮೂರು ವಿಚಾರಗಳೆಂದರೆ, ಮೊದಲನೆಯದು ಆಡಿಯೋ ಕ್ಲಿಪ್, ನಂತರ ಹಣದ ವರ್ಗಾವಣೆ ಮತ್ತು ಅಗ್ರಿಮೆಂಟ್. ಈ ಮೂರು ಆಯಾಮಗಳಲ್ಲೇ ರಾಧಿಕಾರ ವಿಚಾರಣೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ:ಮಾನವನ ಹೆಬ್ಬೆರಳು ಅಂದುಕೊಂಡು ಪೊಲೀಸರನ್ನು ತಕ್ಷಣ ಕರೆಸಿದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​! ​
ಆಡಿಯೋ ಕ್ಲಿಪ್ ಕುರಿತು ತನಿಖೆ ನಡೆಯುತ್ತಿರುವಾಗಲೇ ಇನ್ನೇರಡು ವಿಚಾರ ಕುರಿತು ಖುದ್ದು ರಾಧಿಕಾರೇ ಬಾಯ್ಬಿಟ್ಟಿದ್ದರು. ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡುವ ಭರದಲ್ಲಿ ರಾಧಿಕಾ ಮಹಾನ್ ಎಡವಟ್ಟು ಮಾಡಿಕೊಂಡರಾ? ಎಂಬ ಪ್ರಶ್ನೆ ಮೂಡತೊಡಗಿದೆ. ಏಕೆಂದರೆ, ಸಿಸಿಬಿ ಹುಡುಕುತ್ತಿದ್ದುದ್ದನ್ನೇ ರಾಧಿಕಾ ಸುದ್ದಿಗೋಷ್ಠಿಯಲ್ಲಿ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಖುದ್ದು ಹಣದ ವರ್ಗಾವಣೆ ಮತ್ತು ಅಗ್ರಿಮೆಂಟ್ ಬಗ್ಗೆ ರಾಧಿಕಾ ಹೇಳಿಕೆ ನೀಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಬಿ ನೋಟಿಸ್ ನೀಡಿದೆ ಎಂದು ಹೇಳಲಾಗಿದೆ. ಈ ಮೂರು ವಿಚಾರಕ್ಕೆ ಸಂಬಂಧಿಸಿದ ಸಾಕ್ಷ್ಯಾಧರ ಸಹ ಸಿಸಿಬಿ ಬಳಿ ಇದೆ ಎನ್ನಲಾಗಿದೆ. ಇದರ ಆಧಾರದಲ್ಲಿಯೇ ರಾಧಿಕಾ ವಿಚಾರಣೆ ನಡೆಯುತ್ತಿದ್ದು, ಅಪ್ಪಿ-ತಪ್ಪಿ ವಿಚಾರಣೆಯಲ್ಲಿ ಎಡವಟ್ಟು ಮಾಡಿಕೊಂಡ್ರೆ ರಾಧಿಕಾ ಇದೇ ಕೇಸ್ ನಲ್ಲಿ ಲಾಕ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಸುಖಾಂತ್ಯ: ಅಪ್ರಾಪ್ತೆಯ ದುರಂತ ಸಾವಿಗೆ ಕೊನೆಗೂ ಸಿಕ್ಕಿತು ನ್ಯಾಯ!
ಮಹಾ ವಂಚಕನ ಮೊಬೈಲ್​ನಲ್ಲಿ ನಟಿಯರು, ಮಾಡೆಲ್​ಗಳ 108 ಫೋಟೋ ಪತ್ತೆ: ಇದರ ಹಿಂದಿನ ಉದ್ದೇಶವೇನು?

ಚಿಕನ್​ ಶಾಪ್​ನ ಮೂರು ಚಾಕುವಿನಲ್ಲಿ ಬರ್ಡ್​ ಫ್ಲೂ ವೈರಸ್​ ಪತ್ತೆ: ಕೋಳಿ, ಮೊಟ್ಟೆಗಳು ಸೀಜ್​..!

ಸಂಜೆ ಹೊರಕ್ಕೆ ಹೋಗದಿದ್ರೆ ರೇಪ್​ ಆಗ್ತಿರಲಿಲ್ಲ: ಮಹಿಳಾ ಆಯೋಗದ ಸದಸ್ಯೆ ಹೇಳಿಕೆಗೆ ಭುಗಿಲೆದ್ದ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − two =
Remember me
