ಕಲಬುರಗಿ:‘ರಾಜ್ಯದಲ್ಲಿ ಇರುವುದು ಕಳ್ಳ ಸರ್ಕಾರ. ಈ ಸರ್ಕಾರವನ್ನು ಜನರು ಆಯ್ಕೆ ಮಾಡಿದಲ್ಲ. ಶಾಸಕರನ್ನು ಹಣದಿಂದ ಖರೀದಿಸಿ ಸರ್ಕಾರ ರಚಿಸಿ, ಪ್ರತಿ ಸರ್ಕಾರಿ ಕೆಲಸದಲ್ಲೂ 40 ಪರ್ಸೆಂಟ್ ಕಮಿಷನ್ ಪಡೆದಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಜೇವರ್ಗಿಯಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಸುರಿವ ಮಳೆಯ ನಡುವೆಯೇ ಮಾತನಾಡಿದ ಅವರು, ಈ ಸರ್ಕಾರಕ್ಕೆ 40 ಪರ್ಸೆಂಟ್ ಸರ್ಕಾರ ಎಂದು ಕರೆಯಬೇಕು. ಗುತ್ತಿಗೆದಾರ ಸಂಘಟನೆಯವರು 40 ಪರ್ಸೆಂಟ್ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರೂ ಇದುವರೆಗೂ ಯಾವುದೇ ಪ್ರತ್ಯುತ್ತರ ಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.
ನಮ್ಮ ಸರ್ಕಾರ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಮೂರು ವರ್ಷ 40 ಪರ್ಸೆಂಟ್ ಕಮಿಷನ್ ಪಡೆದಿದ್ದಾರೆ. ಬಿಜೆಪಿಗೆ 40ರ ಸಂಖ್ಯೆ ತುಂಬ ಇಷ್ಟ. 40ರ ಸಂಖ್ಯೆಯ ಮೇಲೆ ಅವರಿಗೆ ಪ್ರೀತಿ, ಒಲವಿದೆ. ಹೀಗಾಗಿ, ಬಿಜೆಪಿಗೆ ಈ ಚುನಾವಣೆಯಲ್ಲಿ ಕರ್ನಾಟಕದ ಜನರು 40 ಸಿಟ್‌ಗಳನ್ನು ಮಾತ್ರ ಕೊಡಬೇಕು. ಕಾಂಗ್ರೆಸ್‌ಗೆ ಕಡಿಮೆ ಎಂದರೂ 150 ಸಿಟ್‌ಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಒದಿ:ತಮಿಳುನಾಡಿನಲ್ಲಿ ಬಾಂಬ್​ ಎಸೆದು ಬಿಜೆಪಿ ಮುಖಂಡನ ಹತ್ಯೆ!
ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ಕೊಡಲು ಆಗುವುದಿಲ್ಲ ಎಂದು ಎಲ್.ಕೆ ಅಡ್ವಾಣಿ ಅವರು ಹೇಳಿದ್ದರು. ನಾವು ಅಧಿಕಾರಕ್ಕೆ ಬಂದ ಬಳಿಕ ಅದನ್ನು ಅನುಷ್ಠಾನಕ್ಕೆ ತಂದಿದ್ದೇವೆ.ಇದರಿಂದ ಸಾವಿರಾರು ಎಂಜಿನಿಯರ್, ವೈದ್ಯರು, ವಕೀಲರಿಗೆ ಉದ್ಯೋಗದ ಅವಕಾಶ ಸಿಕ್ಕಿದೆ. ಆದರೆ, ಬಿಜೆಪಿ ಸರ್ಕಾರ 371 ಜೆ ಅನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಕೆಕೆಆರ್‌ಡಿಬಿಗೆ ₹3 ಸಾವಿರ ಕೋಟಿ ಅನುದಾನ ನೀಡಲಾಗಿತ್ತು. ಶೇ 12ರಷ್ಟು ಅನುದಾನ ಮಾತ್ರ ಬಳಕೆಯಾಗಿದೆ. 50 ಸಾವಿರ ಉದ್ಯೋಗಳು ಭರ್ತಿಯಾಗದೆ ಉಳಿದಿವೆ. ನಾವು ಅಧಿಕಾರಕ್ಕೆ ಬಂದರೆ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಈ ಭಾಗಕ್ಕೆ ಐಐಟಿ, ಐಐಎಂ ತರುತ್ತೇವೆ. ಪ್ರತಿ ವರ್ಷ ₹5 ಸಾವಿರ ಕೋಟಿ ಅನುದಾನ ಕೊಡುತ್ತೇವೆ. ಪ್ರತಿ ಗ್ರಾಮ ಪಂಚಾಯಿತಿಗೆ ₹1 ಕೋಟಿ ನೀಡಲಾಗುವುದು ಎಂದು ಭರವಸೆ‌ ನೀಡಿದ್ದಾರೆ.
ರಾಜ್ಯದ ಜನರಿಗೆ ನಾಲ್ಕು ಭರವಸೆಗಳನ್ನು ಕೊಟ್ಟಿದ್ದೇವೆ. ಪ್ರಧಾನಿ ಮೋದಿ ಅವರು ಈ ಭರವಸೆಗಳನ್ನು ಈಡೇರಿಸುವುದು ಅಸಾಧ್ಯ ಎನ್ನುತ್ತಾರೆ. ಬಿಜಿಪಿಯ ಶಾಸನದ ಪ್ರಕಾರ ಇಂತಹ ಯೋಜನೆಗಳು ಈಡೇರಿಸಲು ಸಾಧ್ಯವಿಲ್ಲ. ಏಕೆಂದರೆ ಅವರು 40 ಪರ್ಸೆಂಟ್ ಕಳ್ಳವು ಮಾಡುತ್ತಾರೆ. 40 ಪರ್ಸೆಂಟ್ ಕದಿಯುವುದರಿಂದ ಇಂತಹ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
