ಬೆಂಗಳೂರು:ನಟ ಪುನೀತ್ ರಾಜ್​​ ಕುಮಾರ್​ ಎಂದರೆ ಇಡೀ ಕರ್ನಾಟಕದ ಅಭಿಮಾನಿಗಳು ಸೇರಿದಂತೆ ಕುಟುಂಬಕ್ಕೆ ಅಚ್ಚುಮೆಚ್ಚು ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಅಭಿಮಾನಿಗಳು ನೆಚ್ಚಿನ ನಟನ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದನ್ನು ನೋಡಿದ್ದೀರಿ. ಆದರೆ ಪುನೀತ್ ಅವರ ಕುಟುಂಬಸ್ಥರೇ ಅಪ್ಪು ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಅಪ್ಪು, ಪುನೀತ್ ,ಪವರ್ ಸ್ಟಾರ್ ಚಿತ್ರವನ್ನು ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಿದ್ದಾರೆ. ಇದೀಗ ರಾಘವೇಂದ್ರ ರಾಜು ಕುಮಾರ್ ಅಪ್ಪು ಹೆಸರು ಮಾತ್ರವಲ್ಲದೆ ಅವರ ಇಬ್ಬರು ಹಣ್ಣುಮಕ್ಕಳ ಹೆಸರನ್ನು ಟ್ಯೂಟ್ ಹಾಕಿಸಿಕೊಂಡಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಮಳೆಗಾಲದಲ್ಲಿ ಬಿದ್ದ ಮರ ತೆರವುಗೊಳಿಸಲು ಸಂಚಾರಿ ಪೊಲೀಸ್ ಸದಾ ಸನ್ನದ್ಧ!
ರಾಘಣ್ಣ ಎದೆಯ ಮೇಲೆ ಅಪ್ಪು, ಟೊಟೊ ಮತ್ತು ನುಕ್ಕಿ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಪವರ್ ಸ್ಟಾರ್ ದೊಡ್ಡ ಮಗಳು ವಂದಿತಾ ಅವರನ್ನು ಪ್ರೀತಿಯಿಂದ ಟೊಟೊ ಎಂದು ಕರೆಯುತ್ತಾರೆ. ಎರಡನೇ ಮಗಳು ಧೃತಿ ಅವರನ್ನು ನುಕ್ಕಿ ಎಂದು ಕರೆಯುತ್ತಾರೆ. ನಿಕ್ ನೇಮ್ ಅನ್ನೇ ಎದೆಯ ಮೇಲೆ ಹಾಕಿಸಿಕೊಂಡಿದ್ದಾರೆ ರಾಘವೇಂದ್ರ ರಾಜ್ ಕುಮಾರ್.
ತಮ್ಮನ ಮೇಲಿನ ಪ್ರೀತಿಯನ್ನು ರಾಘಣ್ಣ ಎದೆಯ ಮೇಲೆ ಅಚ್ಚೊತ್ತಿಸಿಕೊಳ್ಳುವ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇಸ್ಲಾಂಗೆ ಮತಾಂತರವಾಗುವಂತೆ ಒತ್ತಡ: ಗರ್ಭಿಣಿಗೆ ವಿಷಪ್ರಾಶನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × one =
Remember me
