ಬೆಂಗಳೂರು:‘‘ನಾನು ಖಿನ್ನತೆಯಿಂದ ಬಳಲಿದರೆ ಅಥವಾ ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ನೇರವಾಗಿ ಐಪಿಎಸ್ ಅಧಿಕಾರಿ ರೂಪಾ ಅವರೇ ಕಾರಣ’’ ಎಂದು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಹೇಳಿದ್ದಾರೆ.
ನಿಗಮದ ಸರ್ವಸದಸ್ಯರ ಸಭೆ ಮೇ 27ರಂದು ನಡೆದ ಸಂದರ್ಭದಲ್ಲಿ ಅವರು ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ರೂಪಾ ಮೌದ್ಗಿಲ್ ಅವರ ಮಧ್ಯೆ ಗಲಾಟೆಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ರಾಘವೇಂದ್ರ, ‘‘ನಾನು ಸುದ್ದಿಗೋಷ್ಠಿ ನಡೆಸಬೇಕು ಎಂದುಕೊಂಡಿದ್ದೆ. ಆದರೆ ನಿಗಮದ ಮರ್ಯಾದೆ ಹೋಗಬಾರದು ಎಂದುಕೊಂಡು ರದ್ದುಪಡಿಸಿದ್ದೇನೆ. ನಾನೇನಾದರೂ ಮುಂದಿನ ದಿನಗಳಲ್ಲಿ ಖಿನ್ನತೆಗೆ ಜಾರಿದರೆ ಅಥವಾ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ರೂಪಾ ಅವರೇ ಕಾರಣ ಎಂಬುದನ್ನು ಈಗಲೇ ಎಲ್ಲರೆದುರಿಗೆ ಸ್ಪಷ್ಟಪಡಿಸುತ್ತಿದ್ದೇನೆ’’ ಎನ್ನುತ್ತಾರೆ.
ಈ ರೀತಿಯ ಮಾತುಗಳಿಗೆ ಅಡ್ಡಿಪಡಿಸುವ ರೂಪಾ ‘‘ಈಗ ಎಜಿಎಂ ನಡೆಸುತ್ತೀರೋ ಇಲ್ಲವೋ’’ ಎಂದು ಸತತವಾಗಿ ರಾಘವೇಂದ್ರ ಅವರ ಮಾತುಗಳಿಗೆ ಅಡ್ಡಿ ಮಾಡುತ್ತಾರೆ. ಅಷ್ಟಾಗಿಯೂ ರಾಘವೇಂದ್ರ ತಮ್ಮ ಮಾತನ್ನೇ ಮುಂದುವರಿಸಿದಾಗ ರೂಪಾ, ಆ ಸಭೆಯಿಂದ ಎದ್ದು ಹೊರನಡೆಯುತ್ತಾರೆ. ಈ ದೃಶ್ಯಗಳೆಲ್ಲವೂ ಇರುವ ವಿಡಿಯೋವೊಂದು ಈಗ ವೈರಲ್ ಆಗಿದೆ.
ಅಂದ ಹಾಗೆ, ಅಧ್ಯಕ್ಷ ರಾಘವೇಂದ್ರ ಮತ್ತು ಎಂ.ಡಿ. ರೂಪಾ ಮಧ್ಯೆ ಕಳೆದ ಹಲವು ದಿನಗಳಿಂದ ಗಲಾಟೆ ನಡೆಯುತ್ತಿದೆ. ಪರಸ್ಪರ ಆರೋಪ – ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಗುರುವಾರ ಈ ಗಲಾಟೆ ಮುಖ್ಯ ಕಾರ‌್ಯದರ್ಶಿ ಕಚೇರಿಯ ಮೆಟ್ಟಿಲನ್ನೂ ಹತ್ತಿದೆ. ಇಬ್ಬರೂ ತಮ್ಮ ತಮ್ಮ ವಾದವನ್ನು ಮುಖ್ಯ ಕಾರ್ಯದರ್ಶಿಗೆ ತಲುಪಿಸಿದ್ದಾರೆ. ಈ ಜಗಳ ಇನ್ನೂ ಯಾವ ಮಟ್ಟಕ್ಕೆ ಹೋಗುತ್ತದೆಯೋ ಕಾದುನೋಡಬೇಕಿದೆ.
ಆಂಧ್ರ ಲಾರಿಯಲ್ಲಿ ರಕ್ತ ಚಂದನ, TN ನೋಂದಣಿ ಕಾರಿನಲ್ಲಿ ಎಸ್ಕಾರ್ಟ್.. ಕರ್ನಾಟಕದಲ್ಲಿ ತಗ್ಲಾಕಂಡ ಕಿಲಾಡಿಗಳು!
Sign in to your account
Please enter an answer in digits:four + twenty =
Remember me
