ಗೋಕರ್ಣ:ಎಲ್ಲ ಜೀವಿಗಳೂ‌ ಬಯಸುವುದು ಸುಖವನ್ನು. ಆದರೆ ಸುಖವನ್ನು ಬಯಸುವುದು ಮಾತ್ರ ನಮ್ಮ ಕೈಯಲ್ಲಿದೆ. ಬಯಸಿದುದನ್ನು ಪಡೆಯುವುದು ನಮ್ಮ ಕೈಮೀರಿದೆ. ರಾಮಾಯಣವು ಇರುವ ಸುಖವನ್ನಲ್ಲದೆ, ಇಲ್ಲದ, ಕೈಮೀರಿದ ಸುಖವನ್ನೂ ಕೊಡಿಸುತ್ತದೆ ಎಂದು ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
ಅವರು ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಶ್ರೀಗಳೇ ಧರ್ಮಭಾರತೀ ಪತ್ರಿಕೆಯಲ್ಲಿ ಬರೆದಿರುವ ಭಾವರಾಮಾಯಣವನ್ನು ರಾಮಾರ್ಪಣಗೊಳಿಸಿ ಮಾತನಾಡುತ್ತಾ, ರಾಮಾಯಣವನ್ನು ಓದುವಾಗಲೇ ಶಬ್ದಗಳಲ್ಲಿ ಹೇಳಲಾರದ ಸುಖದ ಅನುಭವವಾಗುತ್ತದೆ. ರಾಮಾಯಣವು ತೋರಿದ ಹಾದಿಯಲ್ಲಿ ನಡೆದಾಗ ಜೀವನದಲ್ಲಿ ಸುಖಗಳು ಒದಗಿ ಬರುತ್ತವೆ. ರಾಮಾಯಣದ ಅವಲೋಕನವು ಪುಣ್ಯವನ್ನು ತಂದುಕೊಡುತ್ತದೆ. ಹೀಗೆ ರಾಮಾಯಣದ ಅನುಸಂಧಾನದಿಂದ ಮುಬ್ಬಗೆಯ ಸುಖಗಳ ಪ್ರಾಪ್ತಿಯಾಗುತ್ತದೆ ಎಂದರು.
ಇದನ್ನೂ ಓದಿ:VIDEO | ನೀವೇ ಸಿಎಂ ಎಂದು ಗೊತ್ತಾಗಿಲ್ಲ! ಬೆಳ್ಳಂಬೆಳಗ್ಗೆ ಚಹಾ ಅಂಗಡಿಯವನಿಗೆ ಶಾಕ್ ಕೊಟ್ಟ ಮುಖ್ಯಮಂತ್ರಿ
ರಾಮಾಯಣದ ಓದಿನಿಂದ ಜೀವಿಯು ಬಯಸುವ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳು ಲಭಿಸುತ್ತವೆ. ನಾಲ್ಕು ಪುರುಷಾರ್ಥಗಳನ್ನು ಹೊರತುಪಡಿಸಿ ಜೀವಿ ಏನನ್ನೂ ಬಯಸುವುದಿಲ್ಲ. ಏನನ್ನೇ ಬಯಸಿದರೂ ಅದು ಪುರುಷಾರ್ಥಗಳಲ್ಲೇ ಬರುತ್ತದೆ. ಹಾಗಾಗಿ ಪುರುಷಾರ್ಥವನ್ನು ಕೊಡುವುದರ ಮೂಲಕ ರಾಮಾಯಣ ಎಲ್ಲವನ್ನೂ ಕೊಟ್ಟಂತಾಯಿತು ಎಂದು ನುಡಿದರು.
ಇಂದು ಜಗತ್ತು ಹಣದ ಹಿಂದೆ ಓಡುತ್ತಿದೆ. ರಾಮಾಯಣವನ್ನು ಪಠಿಸಿದರೆ ಸಂಪತ್ತೆ ನಮ್ಮೆಡೆಗೆ ಹರಿದು ಬರುತ್ತದೆ. ರಾಮಾಯಣ ನಮ್ಮನ್ನು ಮತ್ತು ರಾಮಾವತಾರಿ ವಿಷ್ಣುವನ್ನು ಹತ್ತಿರವಾಗಿಸುತ್ತದೆ. ವಿಷ್ಣುವಿನ ಜೊತೆ ಲಕ್ಷ್ಮಿಯೂ ಇರುತ್ತಾಳೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:VIDEO | ಹೃದಯಾಘಾತದಿಂದ ಜಿಮ್​ನಲ್ಲಿ ಮೃತಪಟ್ಟ ಕಾನ್​ಸ್ಟೇಬಲ್!
ಧರ್ಮಭಾರತೀ ಸಂಪಾದಕ ಕೃಷ್ಣಾನಂದ ಶರ್ಮಾ ಪ್ರಸ್ತಾವಿಕವಾಗಿ ಮಾತನಾಡುತ್ತಾ, ಶ್ರೀಗಳು ಸಂನ್ಯಾಸ ಸ್ವೀಕರಿಸಿ ಮೂವತ್ತು ವರ್ಷ ಸಂದಲಿದೆ. ಈ‌ ಹೊತ್ತಿನಲ್ಲಿ ಶ್ರೀಮಠದ ಅಂಗಸಂಸ್ಥೆ ಶ್ರೀಭಾರತೀ ಪ್ರಕಾಶನ ಪ್ರಕಟಿಸುವ ಧರ್ಮಭಾರತೀ ಪತ್ರಿಕೆಯಲ್ಲಿ ಪ್ರತಿ ತಿಂಗಳು ಶ್ರೀಗಳೇ ಪೂರ್ಣ ರಾಮಾಯಣವನ್ನು ಬರೆಯಲಿದ್ದಾರೆ. ಅದನ್ನು ಮೂವತ್ತು ಸಾವಿರಕ್ಕೂ ಹೆಚ್ಚು ಮನೆಗಳಿಗೆ ತಲುಪಿಸಲಾಗುತ್ತಿದೆ. ಈ ರಾಮಾಯಣ ಲೇಖನ ಪೂರ್ಣಗೊಂಡಾಗ ಪೂರ್ಣರಾಮಾಯಣ ಅಷ್ಟು ಮನೆಗಳಲ್ಲಿ ಶಾಶ್ವತವಾಗಿ ಇರಲಿದೆ ಎಂದು ಹೇಳಿದರು.
ರಾಮಚಂದ್ರಾಪುರಮಠ ಮಾಡಿದ ಅನೇಕ ಶಾಶ್ವತ ಕಾರ್ಯಗಳಲ್ಲಿ ಇದೂ ಒಂದಾಗಲಿದೆ. ಧರ್ಮಭಾರತಿಯ ಜೊತೆ ಶ್ರೀಸಂಸ್ಥಾ ಎನ್ನುವ ಶ್ರೀಮಠದ ವಾರ್ತಾ ಪತ್ರಿಕೆಯನ್ನು ಕೂಡ ಪ್ರತಿ ತಿಂಗಳು ಪ್ರಕಟಿಸಲಾಗುತ್ತದೆ. ಇದು ಪ್ರತಿದಿನ ನಡೆಯುತ್ತಿರುವ ಶ್ರೀಮಠದ ಲೋಕಕಲ್ಯಾಣಕಾರ್ಯಗಳ ಸಮಗ್ರ ಮಾಹಿತಿಯನ್ನು ಎಲ್ಲರಿಗೂ ಲಭ್ಯವಾಗಿಸಲಿದೆ ಎಂದರು.
ರಾಘವೇಶ್ವರ ಭಾರತೀ ಶ್ರೀಗಳು ಧರ್ಮಭಾರತೀ ಪತ್ರಿಕೆಯನ್ನು ರಾಮಾರ್ಪಣಗೊಳಿಸಿದರು. ನಂತರ ಪತ್ರಿಕೆಯನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಮತ್ತು ಶಿಷ್ಯಭಕ್ತರಿಗೆ ಅನುಗ್ರಹಿಸಿ, ರಾಮಾಯಣವನ್ನು ಆಧರಿಸಿ ಪಾಠವನ್ನು ಮಾಡಿದರು.
ವಿಶ್ವವಿದ್ಯಾಪೀಠದ ಲೋಕಸಂಪರ್ಕಾಧಿಕಾರಿ ಅಶ್ವಿನೀ ಉಡುಚೆ ಭಾವರಾಮಾಯಣದ ಮಹತ್ತ್ವವನ್ನು ವಿವರಿಸಿದರು. ಮಹಾಮಂಡಲದ ಅಧ್ಯಕ್ಷ ಆರ್. ಎಸ್ ಹೆಗಡೆ ಹರಗಿ, ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ಶ್ರೀಭಾರತೀ ಪ್ರಕಾಶನದ ಅಧ್ಯಕ್ಷ ಸಚಿನ್, ಉಪಸಂಪಾದಕ ಗಣೇಶ ಕೃಷ್ಣ ಹೆಗಡೆ, ಪ್ರಸರಣ ಮಾರ್ಗದರ್ಶಕ ಮಹೇಶ ಚಟ್ನಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಅಕ್ವೇರಿಯಂನಲ್ಲಿದ್ದ ಮೀನು ಸತ್ತಿದ್ದಕ್ಕೆ ತಾನೂ ಜೀವ ಬಿಟ್ಟ 8ನೇ ತರಗತಿ ವಿದ್ಯಾರ್ಥಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
