ಬೆಂಗಳೂರು:ಸ್ಯಾಂಡಲ್​ವುಡ್​ ಡ್ರಗ್ಸ್​ ಲಿಂಕ್​ನಲ್ಲಿ ಆರೋಪಿಗಳಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ದಿನಕ್ಕೊಂದು ಹೊಸ ಕ್ಯಾತೆ ತೆಗೆಯುತ್ತಿದ್ದಾರೆ. ರಾಗಿಣಿಯವರಂತೂ ಯೂರಿನ್​ ಬದಲು ನೀರು ಕೊಟ್ಟು ಕಿರಿಕ್​ ಮಾಡಿದರು..ನಮ್ಮ ಲೈಫೇ ಬರ್ನ್ ಆಯಿತು ಎಂದು ಅಲವತ್ತುಕೊಂಡರು.
ಇದೀಗ ನಟಿಮಣಿಯರಿಬ್ಬರೂ ತಮಗೆ ಅನಾರೋಗ್ಯ ಎಂದು ಹೇಳುತ್ತಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಇಬ್ಬರೂ ಏಕಕಾಲಕ್ಕೆ ಆರೋಗ್ಯ ಸರಿಯಿಲ್ಲ ಎನ್ನುತ್ತಿದ್ದಾರೆ. ಬೆಳಗ್ಗೆಯಿಂದಲೂ ಶೀತ, ಜ್ವರ, ಕೆಮ್ಮು ಎನ್ನುತ್ತ, ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನಲಾಗಿದೆ.ಇದನ್ನೂ ಓದಿ:ಶ್ರೀನಗರ ವಿಮಾನ ನಿಲ್ದಾಣದಲ್ಲಿ ಯೋಧ ಮತ್ತು ಇಬ್ಬರು ಬಾಲಕಿಯರು ಪೊಲೀಸ್ ವಶಕ್ಕೆ
14ನೇ ತಾರೀಖಿಗೆ ಇವರಿಬ್ಬರ ಪೊಲೀಸ್​ ಕಸ್ಟಡಿ ಅವಧಿ ಮುಗಿಯುತ್ತಿದ್ದು, ನಂತರ ಜೈಲು ಸೇರುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಅದರ ಮೊದಲೇ ಆಸ್ಪತ್ರೆ ಸೇರಲು ನಾಟಕವಾಡುತ್ತಿರಬಹುದಾ ಎಂಬ ಅನುಮಾನವೂ ಕಾಡುತ್ತಿದೆ. ಒಟ್ಟಾರೆ ಈ ಇಬ್ಬರೂ ನಟಿಯರು ತನಿಖಾಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. (ದಿಗ್ವಿಜಯ ನ್ಯೂಸ್​)
ದಂಗು ಬಡಿಸುತ್ತೆ ಜಮೀರ್​ ಆಪ್ತನ ಮತ್ತೊಂದು ರಹಸ್ಯ! ಇದು ಕ್ಯಾಸಿನೋ ‘ಶೇಖ್​’ನ ದೌಲತ್ತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 7 =
Remember me
