ಬೆಂಗಳೂರು:ಡ್ರಗ್ಸ್​ ಕೇಸ್​ನಲ್ಲಿ ಸ್ಯಾಂಡಲ್​ವುಡ್​ನ ಮಾದಕ ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಗಿಣಿಗೆ ಎರಡು ತಿಂಗಳಾದರೂ ಜಾಮೀನು ಸಿಕ್ಕಿಲ್ಲ.
ರಾಗಿಣಿ ಜೈಲು ಸೇರುತ್ತಿದ್ದಂತೆ ನಗರದ ಜ್ಯುಡಿಶಿಯಲ್ ಲೇಔಟ್​ನಲ್ಲಿರುವ ನಟಿಯ ಕನಸಿನ ಮನೆಯನ್ನೇ ಅವರ ತಂದೆ ಮಾರಾಟಕ್ಕೆ ಇಟ್ಟಿದ್ದರು. ಆದರೆ, ಮನೆ ಸೇಲ್ ಆಗಲಿಲ್ಲ. ಇದೀಗ ನಟಿಯ ಕಾರುಗಳನ್ನೇ ಮಾರಾಟಕ್ಕಿಟ್ಟಿದ್ದಾರೆ.
ಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಕೊಂಡಿರುವ ಮಗಳ ಕೋರ್ಟ್​, ವಕೀಲರ ಫೀಸು ಇತ್ಯಾದಿಗಳಿಗೆ ಹಣ ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಕನಸಿನ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದ ರಾಗಿಣಿ ತಂದೆ ರಾಕೇಶ್ ದ್ವಿವೇದಿ, ‘ಮನೆ ಸೇಲ್​ಗೆ ಇದೆ’ ಎಂಬ ಜಾಹೀರಾತನ್ನು ಖಾಸಗಿ ವೆಬ್​ಸೈಟ್​ ಒಂದಕ್ಕೆ ಈ ಹಿಂದೆ ನೀಡಿದ್ದರು.
ಸದ್ಯ ಹೈಕೋರ್ಟ್​​ನಲ್ಲೂ ನಟಿ ರಾಗಿಣಿಗೆ ಬೇಲ್ ರಿಜೆಕ್ಟ್ ಆಗಿದೆ. ಕಾನೂನು ಹೋರಾಟ ನಡೆಸಲು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಗಿಣಿ ತಂದೆ-ತಾಯಿ, ಇದೀಗ ಎರಡು ಕಾರುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಮುಂದೆ ಕಾನೂನಿನ ಹೋರಾಟಕ್ಕೆ ಹಣದ ಅವಶ್ಯಕತೆ ಇದೆ. ಹಾಗಾಗಿ ಕಾರು ಮಾರಲು ಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಯಚಂದ್ರ ಕೇಳಿದ್ದನ್ನ ಡಿಕೆಶಿ ಕೊಡ್ಲಿಲ್ವಂತೆ… ಅದಕ್ಕೆ ಶಿರಾದಲ್ಲಿ ಕಾಂಗ್ರೆಸ್​ ಸೋಲ್ತಂತೆ!

ಧ್ರುವ ಸರ್ಜಾ ಪ್ರೀತಿಯಿಂದ ತಂದ ತೊಟ್ಟಿಲಲ್ಲಿ ಜೂ.ಚಿರುವನ್ನು ಹಾಕದ ಮೇಘನಾ! ಬೇರೆ ತೊಟ್ಟಿಲು ತರಿಸಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 7 =
Remember me
