ಬೆಂಗಳೂರು:ಡ್ರಗ್ಸ್ ಕೇಸ್​ನಲ್ಲಿ ಬಂಧನಕ್ಕೊಳಪಟ್ಟಿರುವ ‘ಮಾದಕ’ ನಟಿ ರಾಗಿಣಿ ದ್ವಿವೇದಿ, ಮೆಡಿಕಲ್ ಟೆಸ್ಟ್ ವೇಳೆ ತನ್ನ ವರಸೆ ಬದಲಿಸಿ ಸಿಕ್ಕಿಬಿದ್ದಿದ್ದಾರೆ.
ಗುರುವಾರ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಟಿ ರಾಗಿಣಿಯನ್ನು ಡೋಪಿಂಗ್ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಲ್ಯಾಬ್ ಟೆಸ್ಟ್​ನಲ್ಲಿ ನಟಿಯ ಯೂರಿನ್ ರಹಸ್ಯ ಬಯಲಾಗಿದ್ದು, ”ಡೋಂಟ್​ ಚೀಟ್​ ರಾಗಿಣಿ” ಎಂದು ವೈದ್ಯರು ಮತ್ತು ಪೊಲೀಸರು ಖಡಕ್​ ವಾರ್ನಿಂಗ್ ಕೊಟ್ಟು ಇಂದು(ಶುಕ್ರವಾರ) ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದ್ದಾರೆ. ಯೂರಿನ್​ ಟೆಸ್ಟ್​ ವೇಳೆ ರಾಗಿಣಿ ಮಾಡಿದ ಕಿತಾಪತಿ ಏನು ಗೊತ್ತಾ?
ಇದನ್ನೂ ಓದಿರಿ‘ನಂಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ… ಗೊತ್ತಿರೋದು ನನ್ನ ಹೆಂಡ್ತಿ ಮಾತ್ರ’
ತಪ್ಪನ್ನ ಮುಚ್ಚಿಕೊಳ್ಳಲು ಯತ್ನಿಸಿದ ರಾಗಿಣಿ, ಯೂರಿನ್​ ಟೆಸ್ಟ್ ವೇಳೆ ಖತರ್ನಾಕ್​ ಐಡಿಯಾ ಉಪಯೋಗಿಸಿದ್ದಾರೆ. ಯೂರಿನ್ ಟೆಸ್ಟ್​ಗೆ ಕಳುಹಿಸುವಾಗಲೇ ಡ್ರಾಮಾಮಾಡದಂತೆ ಸಿಸಿಬಿ ಅಧಿಕಾರಿಗಳು ವಾರ್ನಿಂಗ್​ ಕೊಟ್ಟಿದ್ದರು. ಆದರೂ ರಾಗಿಣಿ ಯೂರಿನ್ ಬದಲು ನೀರು ತುಂಬಿಸಿ ಕೊಟ್ಟಿದ್ದರು. ಲ್ಯಾಬ್ ಟೆಸ್ಟ್​ನಲ್ಲಿ ನಟಿಯ ಯೂರಿನ್ ರಹಸ್ಯ ಬಯಲಾಗಿದ್ದು, ವೈದ್ಯರು- ಪೊಲೀಸರೇ ಶಾಕ್​ ಆದರು.
ಮೂತ್ರಕ್ಕೆ ನೀರು ಮಿಕ್ಸ್ ಮಾಡಿ ಯಾಮಾರಿಸಲು ಯತ್ನಿಸಿದ ರಾಗಿಣಿಗೆ ಮತ್ತೊಮ್ಮೆ ವಾರ್ನಿಂಗ್​ ಕೊಟ್ಟ ವೈದ್ಯರು ಮತ್ತು ಪೊಲೀಸರು, ‘ನೀವು ಬರೀ ನೀರು ತುಂಬಿ ಕೊಟ್ಟಲ್ಲಿ ಅಥವಾ ನೀರು ಮಿಕ್ಸ್ ಮಾಡಿ ಯೂರಿನ್ ನೀಡಿದ್ರೆ ಲ್ಯಾಬ್​ನಲ್ಲಿ ಎಲ್ಲವೂ ಗೊತ್ತಾಗುತ್ತೆ. ಈ ಡ್ರಾಮಾ ಬಿಟ್ಟು ಟೆಸ್ಟ್​ಗೆ ಮೂತ್ರ ಕೊಡಿ ಎಂದು ಎಚ್ಚರಿಸಿದರು. ಎರಡನೇ ಬಾರಿ ಸಂಗ್ರಹಿಸಿದ ಯೂರಿನ್​ನಲ್ಲಿ ನೀರು ಮಿಕ್ಸ್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಅಧಿಕಾರಿಗಳು ಬಳಿಕ ನಟಿಯನ್ನು ಕರೆದೊಯ್ದರು.
‘ಮಾದಕ’ ನಟಿಗಾಗಿ ಹೆಂಡತಿಯನ್ನೇ ತೊರೆದ ರವಿಶಂಕರ್​!

https://www.vijayavani.net/sanjana-galrani-marriage-photo-viral/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + eight =
Remember me
