ಬೆಂಗಳೂರು:ಡ್ರಗ್ಸ್ ಕೇಸ್‌ನಲ್ಲಿ 14 ದಿನಗಳ ನ್ಯಾಯಾಂಗ ವಶಕ್ಕೆ ನ್ಯಾಯಾಲಯ ಆದೇಶಿಸಿರುವ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ನಟಿ ರಾಗಿಣಿ ಮತ್ತು ಇತರ ನಾಲ್ವರು ಆರೋಪಿಗಳನ್ನು ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಿದ್ದಾರೆ.
ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ರಾಗಿಣಿ ದ್ವಿವೇದಿ, ರಾಹುಲ್ ತೋನ್ಸೆ, ನಿಯಾಜ್, ಪ್ರಶಾಂತ್ ರಾಂಕಾ ಮತ್ತು ಲೂಮ್ ಪೆಪ್ಪರ್‌ರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ಈ ಐವರನ್ನೂ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು. ಇನ್ನೊಬ್ಬ ನಟಿ ಸಂಜನಾರ ವಿಚಾರಣೆ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದರಿಂದ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದರು.ಇದನ್ನೂ ಓದಿ:‘ನಾನು ನಿನ್ನೆ ಯಮರಾಜನನ್ನು ಭೇಟಿಯಾದೆ…ಮೂರ್ಖ ಭಕ್ತರಿಗಾಗಿ ಭೂಮಿಗೆ ಬಂದೆ’: ಅನುರಾಗ್ ಕಶ್ಯಪ್​
ಸಂಜೆ ವೇಳೆಗೆ ರಾಗಿಣಿ ಸೇರಿದಂತೆ ಐವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಅವರ ಭದ್ರತೆಯೇ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಾಗಿಣಿಯನ್ನು ಮಹಿಳಾ ಕೈದಿಗಳ ಜತೆ ಇರಿಸಲಾಗುತ್ತದೆ. ಇವರೆಲ್ಲರೂ ಸಮಾಜದಲ್ಲಿ ಪ್ರತಿಷ್ಠಿತರಾಗಿದ್ದು, ಶ್ರೀಮಂತ ಮನೆತನದವರಾಗಿದ್ದು ಮೋಜು-ಮಸ್ತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಲುಕಿ ಜೈಲಿಗೆ ಬಂದವರು. ಇಂಥವರನ್ನು ಅಲ್ಲಿನ ಕೈದಿಗಳು ಸಿಟ್ಟು-ದ್ವೇಷದಿಂದ ನೋಡುತ್ತಾರೆ. ಕರೊನಾ ಹಿನ್ನೆಲೆಯಲ್ಲಿ ಪ್ರತ್ಯೇಕ ಸೆಲ್‌ಗಳಲ್ಲಿ ಇವರೆಲ್ಲರನ್ನು ಇರಿಸಲಾಗುತ್ತದೆ. ಆದರೂ ಸ್ನಾನ, ಶೌಚ, ಊಟ-ತಿಂಡಿಯ ವೇಳೆ ಇವರೆಲ್ಲ ಒಂದೆಡೆ ಸೇರುವುದು ಅನಿವಾರ್ಯ. ಆ ಸಂದರ್ಭದಲ್ಲಿ ಸಹ ಕೈದಿಗಳು ಅಸಹ್ಯಕರ ರೀತಿಯಲ್ಲಿ ಬೈದು ಅವಮಾನಿಸುತ್ತಾರೆ. ಆಗ ಜಗಳ, ಪರಸ್ಪರ ಹಲ್ಲೆ ಮುಂತಾದ ಘಟನೆಗಳು ನಡೆಯುತ್ತವೆ. ಹಿಂದೆಯೂ ಈ ರೀತಿ ಆಗಿರುವ ಉದಾಹರಣೆಗಳಿವೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.ಇದನ್ನೂ ಓದಿ:ವೃತ್ತಿ ಮಾರ್ಗದರ್ಶನಕ್ಕೆ ಕೆಎಲ್​​ಇ ವಿವಿಯಿಂದ ವೆಬಿನಾರ್; ವಿಜಯವಾಣಿ, ದಿಗ್ವಿಜಯ ನ್ಯೂಸ್​ ಸಹಯೋಗ…
ಈ ಹಿನ್ನೆಲೆಯಲ್ಲಿ ರಾಗಿಣಿ ಮತ್ತು ಇತರ ನಾಲ್ವರು ಆರೋಪಿಗಳ ಜತೆಗೆ ಇಬ್ಬಿಬ್ಬರು ಪೊಲೀಸರನ್ನೂ ಭದ್ರತೆಗೆ ನಿಯೋಜಿಸಲಾಗಿದೆ. ಆದರೆ ಸಹಕೈದಿಗಳು ಯಾವಾಗ ಎಲ್ಲಿ ಹೇಗೆ ದಾಳಿ ಮಾಡುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ ಎಂಬ ಚಿಂತೆ ಪೊಲೀಸರದು.
ರಾಗಿಣಿಯನ್ನು ತಬ್ಬಿಕೊಂಡು ಬೀಳ್ಕೊಟ್ಟ ಸಂಜನಾ: ಸಾಂತ್ವನ ಕೇಂದ್ರದಲ್ಲಿ ಗದ್ಗದಿತರಾದ ನಟಿಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
