ಬೆಂಗಳೂರು:‘ಕಳೆದ ಒಂದು ವರ್ಷದಿಂದ ನಟಿ ರಾಗಿಣಿ ದ್ವಿವೇದಿ ಮತ್ತು ಆವರ ಗೆಳೆಯ ರವಿಶಂಕರ್​ಗೆ ಕೊಕೇನ್ ಪೂರೈಕೆ ಮಾಡಿದ್ದೀನಿ… ನಾನು ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಬೇರೆ ಬೇರೆ ಜಾಗಗಳಲ್ಲಿ ಅಡಗಿಸಿ ಇಟ್ಟಿದ್ದೀನಿ. ಅವುಗಳನ್ನು ತೋರಿಸ್ತೀನಿ…’
ಹೀಗೆಂದು ಇತ್ತೀಚೆಗೆ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಡ್ರಗ್ಸ್​ ಪೆಡ್ಲರ್ ಲೂಮ್ ಪೆಪ್ಪರ್ ಸಾಂಬಾ​ ಹೇಳಿದ್ದಾನೆ.
ದಕ್ಷಿಣ ಆಫ್ರಿಕಾ ಮೂಲದ ಈತ, ಅಂತಾರಾಷ್ಟ್ರೀಯ ಡ್ರಗ್ಸ್​ ಪೆಡ್ಲರ್​. 2018ರಲ್ಲಿ ಸ್ಟಡಿ ವೀಸಾದಡಿ ಬೆಂಗಳೂರಿಗೆ ಬಂದಿದ್ದು, ವೀಸಾ ಅವಧಿಮುಗಿದರೂ ಇಲ್ಲೇ ಅಕ್ರಮವಾಗಿ ನೆಲೆಸಿದ್ದಲ್ಲೇ ಡ್ರಗ್ಸ್​ ದಂಧೆ ನಡೆಸುತ್ತಿದ್ದ. ಬಂಧನಕ್ಕೊಳಪಟ್ಟ ಆರಂಭದಲ್ಲಿ ‘ತನಗೆ ಆಫ್ರಿಕನ್ ಬಿಟ್ಟರೆ ಬೇರೆ ಯಾವುದೇ ಭಾಷೆ ಬರುವುದಿಲ್ಲ’ ಎಂದು ವಿಚಾರಣೆ ವೇಳೆ ತಗಾದೆ ತೆಗೆದಿದ್ದ. ರಾಗಿಣಿ ಆಪ್ತ ರವಿಶಂಕರ್ ಜತೆ ಆನ್​ಲೈನ್ ಮೂಲಕ ಇಂಗ್ಲಿಷ್​ನಲ್ಲಿ ಸಂವಹನ ನಡೆಸಿರುವ ದಾಖಲೆಗಳನ್ನು ಮುಂದಿಟ್ಟಾಗ ತೆಪ್ಪಗಾದ ಲೂಮ್ ಪೆಪ್ಪರ್, ಬಳಿಕ ತಾನಾಗಿಯೇ ಬಾಯ್ಬಿಟ್ಟಿದ್ದಾನೆ.ಇದನ್ನೂ ಓದಿರಿ‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’
‘2018ರಲ್ಲಿ ಸ್ಟಡಿ ವೀಸಾದಡಿ ಬೆಂಗಳೂರಿಗೆ ಬಂದೆ. ನನ್ನ ವೀಸಾ ಅವಧಿ ಮುಗಿದಿದೆ. ನಾನು ಯಾವುದೇ ಕೆಲಸ ಮಾಡುತ್ತಿಲ್ಲ ಮತ್ತುವ್ಯಾಸಂಗ ಮಾಡ್ತಿಲ್ಲ. ನನ್ನ ದೇಶದ ಹಲವಾರು ಮಂದಿ ಡ್ರಗ್ಸ್​ ವ್ಯವಹಾರ ನಡೆಸುತ್ತಿದ್ದಾರೆ. ಅವರು ಯಾರು ಅನ್ನೋದು ನನಗೆ ಗೊತ್ತಿದೆ’ ಎಂದು ವಿಚಾರಣೆಯಲ್ಲಿ ಲೂಮ್​ ಪೆಪ್ಪರ್​ ಹೇಳಿದ್ದಾನೆ.
‘ನಾನು ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಬೇರೆ ಬೇರೆ ಜಾಗಗಳಲ್ಲಿ ಅಡಗಿಸಿಟ್ಟಿದ್ದು, ಅದನ್ನು ತೋರಿಸುವೆ. 1 ಗ್ರಾಂ ಕೊಕೇನ್ ಅನ್ನು 6,000 ರೂಪಾಯಿಗೆ ಮಾರಾಟ ಮಾಡುತ್ತಿದ್ದೆ. ರಾಗಿಣಿ ಮತ್ತು ಅವರ ಗೆಳೆಯ ರವಿಶಂಕರ್​ ಕೂಡ ನನ್ನ ಬಳಿಯೇ ಡ್ರಗ್ಸ್​ ಪಡೆಯುತ್ತಿದ್ದರು’ ಎಂದು ಬಾಯ್ಬಿಟ್ಟಿದ್ದಾನೆ.(ದಿಗ್ವಿಜಯ ನ್ಯೂಸ್​)
ಸಿನಿ ತಾರೆಯರಿಗೆ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದವನು ಇವನೇ ನೋಡಿ

‘ಪ್ರಶಾಂತ್​ ಸಂಬರಗಿ ನನ್ನ ಜತೆಗೂ ಪಾರ್ಟಿಗಳಿಗೆ ಬಂದಿದ್ದ, ಜತೆಗೊಬ್ಬ ನಟಿಯನ್ನೂ ಕರೆತರುತ್ತಿದ್ದ’

ಸಂಬಳ ಕೇಳಿದ್ದಕ್ಕೆ ಗ್ರಾಮ ಸಹಾಯಕಿಯನ್ನು ಮಂಚಕ್ಕೆ ಕರೆದ ತಹಸೀಲ್ದಾರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − eight =
Remember me
