ಬೆಂಗಳೂರು:ಸ್ಯಾಂಡಲ್​ವುಡ್​ನ ‘ಮಾದಕ’ ನಟಿ ರಾಗಿಣಿ ದ್ವಿವೇದಿ ಜತೆಗೆ ನಾಲ್ವರು ಡ್ರಗ್ಸ್​ ಪೆಡ್ಲರ್​ಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿದೆ.
ಡ್ರಗ್ಸ್​ ಕೇಸ್​ನಲ್ಲಿ ನಟಿಯರಾದ ಸಂಜನಾ ಮತ್ತು ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸುಮಾರು 10 ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿದ್ದ ನಟಿಯರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಸೋಮವಾರ ಸಂಜೆ ವಿಡಿಯೋ ಕಾನ್ಫರೆನ್ಸ್​ ಮೂಲಕ ರಾಗಿಣಿ ಮತ್ತು ಸಂಜನಾರನ್ನು ಸಿಸಿಬಿ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಧೀಶರು ರಾಗಿಣಿ ಮತ್ತು ಅವರ ಜತೆಗೆ ಐವರು ಡ್ರಗ್ಸ್​ ಪೆಡ್ಲರ್​ಗಳಿಗೆ 14 ದಿನ ಅಂದರೆ ಸೆ.28ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಸಂಜನಾರನ್ನು ಮತ್ತಷ್ಟು ವಿಚಾರಣೆ ನಡೆಸಬೇಕಿದ್ದು, ಕಸ್ಟಡಿಗೆ ಒಪ್ಪಿಸುವಂತೆ ಸಿಸಿಬಿ ಮನವಿ ಮಾಡಿತು. ಇದಕ್ಕೆ ಒಪ್ಪಿದ ನ್ಯಾಯಾಧೀಶರು ಸಂಜನಾರನ್ನು ಮತ್ತೆ 3 ದಿನ ಸಿಸಿಬಿ ಕಸ್ಟಡಿಗೆ ನೀಡಿದ್ದಾರೆ.
ಇದನ್ನೂ ಓದಿರಿ‘ಪ್ರಶಾಂತ್​ ಸಂಬರಗಿ ನನ್ನ ಜತೆಗೂ ಪಾರ್ಟಿಗಳಿಗೆ ಬಂದಿದ್ದ, ಜತೆಗೊಬ್ಬ ನಟಿಯನ್ನೂ ಕರೆತರುತ್ತಿದ್ದ’
ಸೋಮವಾರ ಬೆಳಗ್ಗೆಯೇ ಇಬ್ಬರು ನಟಿಯರ ರ್ಯಾಪಿಡ್ ಟೆಸ್ಟ್ ಮುಕ್ತಾಯವಾಗಿದ್ದು, ಕರೊನಾ ಟೆಸ್ಟ್​ನಲ್ಲಿ ವರದಿ ನೆಗೆಟಿವ್ ಬಂದಿದೆ. ವೈದ್ಯಕೀಯ ಪರೀಕ್ಷೆ ಮುಗಿಸಿದ ಬಳಿಕ ರಾಗಿಣಿ ಮತ್ತು ಸಂಜನಾರನ್ನು ಮಡಿವಾಳದ ಎಫ್​ಎಸ್​ಎಲ್​ಗೆ ಕರೆತಂದ ಪೊಲೀಸರು, ಊಟದ ನಂತರ ಮತ್ತೊಮ್ಮೆ ವಿಚಾರಣೆ ನಡೆಸಿದರು. ಸಂಜೆ 4ಕ್ಕೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಮತ್ತೆ ಸಿಸಿಬಿ ಕಸ್ಟಡಿಗೆ ಕೊಡುವ ಸಾಧ್ಯತೆ ಕಡಿಮೆ ಇರುವುದನ್ನು ಅರಿತ ಪೊಲೀಸರು ಜೈಲಿಗೆ ನಟಿಮಣಿಯರ ಆಗಮನದ ಹಿನ್ನೆಲೆ ಮಧ್ಯಾಹ್ನ 2ರ ಸುಮಾರಿನಲ್ಲೇ ಪರಪ್ಪನ ಅಗ್ರಹಾರ ಜೈಲಿನ ಬಳಿ ಬಿಗಿಬಂದೋಬಸ್ತ್​ ಏರ್ಪಡಿಸಿದ್ದರು.
ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟಿ ರಾಗಿಣಿ ಜಾಮೀನು ಅರ್ಜಿಯನ್ನು ಇದೇ ತಿಂಗಳ 16ಕ್ಕೆ ಕೋರ್ಟ್ ಮುಂದೂಡಿದೆ. ಇವರ ಜತೆಗೆ, ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಇತರ ಆರೋಪಿಗಳಾದ ಶಿವಪ್ರಕಾಶ್, ರಾಹುಲ್ ,ವೈಭವ್ ಜೈನ್, ವಿನಯ್ ಕುಮಾರ್ ಅವರ ಅರ್ಜಿಯ ವಿಚಾರಣೆಯನ್ನೂ ಕೋರ್ಟ್​ ಮುಂದೂಡಿದೆ. ಸಂಜನಾ ಸದ್ಯ ಜಾಮೀನು ಕೋರಿ ಅರ್ಜಿ ಸಲ್ಲಿಸಿಲ್ಲ.
ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…

‘ಈ ಫೋಟೋ ಏನನ್ನು ಹೇಳುತ್ತೆ? ಜನ್ಮಜನ್ಮಾಂತರದ ಸಂಬಂಧ ಅನ್ನುತ್ತೆ’

ಡ್ರಗ್ಸ್​ ಕೇಸ್​: ಜಮೀರ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ಸಚಿವ ಸುಧಾಕರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + seven =
Remember me
