ಬೆಂಗಳೂರು:ಡ್ರಗ್​ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿಗೆ ನಿನ್ನೆಯೂ ಬೇಲ್​ ಸಿಕ್ಕಿಲ್ಲ. ಹೈಕೋರ್ಟ್ ಕೂಡ ನಟಿಮಣಿಯರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಇದೀಗ ರಾಗಿಣಿ ತಂದೆ ರಾಕೇಶ್​ ದ್ವಿವೇದಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನ್ನ ಮಗಳು ತುಂಬ ಸ್ಟ್ರಾಂಗ್​ ಆಗಿದ್ದಾಳೆ. ಆಕೆ ಯಾವುದಕ್ಕೂ ಹೆದರೋದಿಲ್ಲ. ಅವಳು ಮುಗ್ಧ ಹುಡುಗಿ. ಪ್ರಕರಣದಲ್ಲಿ ನನ್ನ ಮಗಳದ್ದು ಯಾವುದೇ ತಪ್ಪು ಇಲ್ಲ ಎಂದು ಹೇಳಿದರು.
ರಾಗಿಣಿ ಮನೆಯಲ್ಲಿ ಇಲ್ಲದೆ 60 ದಿನಗಳು ಕಳೆದಹೋದವು. ಆಕೆ ನಿರಪರಾಧಿ ಆಗಿರುವುದರಿಂದ ನಾವು ಹೋರಾಟ ನಿಲ್ಲಿಸುವುದಿಲ್ಲ. ನಾವು ಸುಪ್ರೀಂಕೋರ್ಟ್​ ಹೋಗುವ ಮೊದಲು ವಕೀಲರ ಬಳಿ ಚರ್ಚೆ ಮಾಡುತ್ತೇವೆ. ಅವಳನ್ನು ಆರೋಪಮುಕ್ತಳನ್ನಾಗಿ ಮಾಡಿ ವಾಪಸ್​ ಕರೆದುಕೊಂಡು ಬರುವುದೇ ನಮ್ಮ ಗುರಿ ಎಂದರು.ಮಗಳು ರಾಗಿಣಿ ಇಲ್ಲದೆ ನನ್ನ ದೇಹದ ಒಂದು ಭಾಗವನ್ನೇ ಕಳೆದುಕೊಂಡಂತೆ ಆಗಿದೆ. ನನ್ನ ಕೈ ಕತ್ತರಿಸದಂತೆ ಆಗಿದೆ. ಖರ್ಚುವೆಚ್ಚಗಳನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ಹಾಗಾಗಿ ಮನೆ ಮಾರಾಟದಂತಹ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಅದು ವೈಯಕ್ತಿಕ ವಿಚಾರ ಎಂದು ತಿಳಿಸಿದರು.
ಕರೊನಾ ಸಮಯದಲ್ಲಿ ನನ್ನ ಮಗಳು ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾಳೆ. ಆದರೆ ಅದನ್ನು ಈಗ ಯಾರೂ ನೆನಪು ಮಾಡಿಕೊಳ್ಳುತ್ತಿಲ್ಲ. ಚಿತ್ರರಂಗದವರಾಗಲಿ ಅಥವಾ ರಾಜಕೀಯದವರಾಗಲಿ ನಮ್ಮನ್ನು ಸಂಪರ್ಕ ಮಾಡಿಲ್ಲ. ಸಂಪರ್ಕ ಬಿಡಿ, ಸಾಂತ್ವನವನ್ನೂ ಹೇಳಿಲ್ಲ. ಚಿತ್ರರಂಗದಲ್ಲಿ ಆಕೆಯಿಂದ ಸಹಾಯ ಪಡೆದವರು ಇಂದು ಅವಳನ್ನ ಮರೆತು ಹೋಗಿದ್ದಾರೆ. ಹಡಗು ಸಮುದ್ರದಲ್ಲಿ ಮುಳುಗಿದಾಗ ಇಲಿಗಳು ಹೇಗೆ ಚೆಲ್ಲಾಪಿಲ್ಲಿ ಆಗಿ ಓಡುತ್ತವೋ ಅದೇ ರೀತಿ ನಮ್ಮ ಪರಿಸ್ಥಿತಿ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
