ಕೋಲಾರ:ಕೋಲಾರದಲ್ಲಿ ಇಂದು ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹಾಗೂ ಅದಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಕಾಂಗ್ರೆಸ್ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅದಾನಿ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿರುವ ರಾಹುಲ್ ಗಾಂಧಿ “ಕೇವಲ ಒಬ್ಬ ಮನುಷ್ಯನ ಕೈನಲ್ಲಿ ಇದೆ. ಅದು ಅದಾನಿ ಕೈನಲ್ಲಿ. ಸಾವಿರಾರು ಕೋಟಿ ರೂಪಾಯಿ ಅವರ ಅಕೌಂಟ್ ಗೆ ಬರ್ತಿದೆ. ಅದಾನಿ ಅವರ ಕಂಪನಿಗಳಲ್ಲಿ ಚೈನಾದ ಡೈರೆಕ್ಟರ್ ಬಂದು ಕುಳಿತಿದ್ದಾನೆ. ಯಾಕೆ ಅಲ್ಲಿ ಕೂರಿಸಿಕೊಂಡಿದ್ದೀರ ಎನ್ನುವುದಕ್ಕೆ ಉತ್ತರ ನೀಡುತ್ತಿಲ್ಲ. ಆ ವಿಚಾರ ಬಂದಾಗ ಹಿಂದುಳಿದ ವರ್ಗಗಳ‌ಬಗ್ಗೆ ಮಾತನಾಡುತ್ತಾರೆ. ನಾನು ಹಿಂದುಳಿದ ವರ್ಗಗಳ ಬಗ್ಗೆ ಅವಮಾನ ಮಾಡಿದೆ ಎಂದು ಹೇಳುತ್ತಾರೆ.
ನಿಮ್ಮ ಸರ್ಕಾರದಲ್ಲಿ ಎಷ್ಟು ಜನ ಅಧಿಕಾರಿಗಳು ದಲಿತರು ಹಿಂದುಳಿದ ವರ್ಗಗಳಿವೆ ಎಂದು ತಿಳಿಸಿ.  ಜನಸಂಖ್ಯೆಗನುಗುಣವಾಗಿ ಅವಕಾಶಗಳನ್ನ ಕೊಡಿ. ರಾಜ್ಯದಲ್ಲಿ‌ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಲಿದೆ.  ಮೋದಿ ಅವರು ಕೇವಲ ಅದಾನಿಯಂತಹರಿಗೆ ಸಹಾಯ ಮಾಡಲು ಬರ್ತಿದ್ದಾರೆ. ನಮ್ಮ ನಕ್ಷ ಅಧಿಕಾರಕ್ಕೆ ಬಂದರೆ ಬಡವರಿಗೆ ರೈತರಿಗೆ ಮಹಿಳೆಯರಿಗೆ ಸಹಾಯ ಮಾಡುತ್ತೇವೆ. ಸಂತೋಷದ ವಿಚಾರ ಎಂದರೆ ಕಾಂಗ್ರೇಸ್ ರಾಜ್ಯದಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡುತ್ತದೆ. ಪೂರ್ಣ ಬಹುಮತದಿಂದ ಕಾಂಗ್ರೆಸ್ ಪಕ್ಷವನ್ನ ಆರಿಸಿ ಕಳಿಸಿ. 40% ಕಮಿಷನ್ ದುಡ್ಡು ಹೊಡೆದಿರುವಹದು ಸರ್ಕಾರವನ್ನ ಕೆಡವುವಂತಹ ಪ್ರಯತ್ನ ಮಾಡುತ್ತೇವೆ” ಎಂದಿದ್ದಾರೆ.
ಒಟ್ಟಿನಲ್ಲಿ ರಾಹುಲ್ ಗಾಂಧಿ, ವಾಗ್ದಾಳಿಯ ಭರದಲ್ಲಿ ಗಂಭೀರ ಆರೋಪ ಹೊರಿಸಿದ್ದು ಇದರಿಂದ ಯಾವೆಲ್ಲಾ ರೀತಿಯ ಪರಿಣಾಮಗಳು ಉಂಟಾಗಬಹುದು ಎನ್ನುವುದು ಕಾಲವೇ ಹೇಳಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
