ಹುಬ್ಬಳ್ಳಿ:ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಯಲಿರುವ ಹುಬ್ಬಳ್ಳಿಗೆ ಎಐಸಿಸಿ ವರಿಷ್ಠ ರಾಹುಲ್​ ಗಾಂಧಿ ಕೆಲವು ನಿಮಿಷಗಳ ಹಿಂದೆ ಆಗಮಿಸಿದ್ದು, ಸಭೆ ನಡೆಯಲಿರುವ ಖಾಸಗಿ ಹೋಟೆಲ್​ಗೆ ಕೆಪಿಸಿಸಿ ನಾಯಕರೊಂದಿಗೆ ಪ್ರವೇಶ ಮಾಡಿದ್ದಾರೆ.
ವಿಮಾನ ನಿಲ್ದಾಣದಿಂದ ಅವರನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿಕೊಂಡು ಹೋಟೆಲ್​ಗೆ ಕರೆದುಕೊಂಡು ಬಂದಿದ್ದಾರೆ. ಹೆಚ್ಚೂಕಡಿಮೆ ಒಂದೂವರೆ ಗಂಟೆ ತಡವಾಗಿ ರಾಹುಲ್ ಗಾಂಧಿ ಆಗಮಿಸಿದ್ದರಿಂದ ರಾತ್ರಿ 8 ಗಂಟೆಗೆ ನಡೆಯಬೇಕಿದ್ದ ಸಭೆ ಇನ್ನೇನು ಆರಂಭಗೊಳ್ಳಲಿದೆ.
ಗೋಕುಲ ರಸ್ತೆಯ ಫಾರ್ಚೂನ್​ ಹೋಟೆಲ್​​ನಲ್ಲಿ ಸಭೆ ನಡೆಯಲಿದ್ದು, ಹೋಟೆಲ್​ಗೆ ಕಾಂಗ್ರೆಸ್ ನಾಯಕರು ಪ್ರವೇಶಿಸಲು ಮುಂದಾದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಆದರೆ ಪಾಸ್ ಇದ್ದವರನ್ನು ಮಾತ್ರ ಬಿಡುತ್ತಿದ್ದು, ತಮ್ಮನ್ನೂ ಒಳ ಬಿಡುವಂತೆ ಕೆಲ ನಾಯಕರು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದೂ ಕಂಡುಬಂತು. ಇನ್ನು ಮುಂಚಿತವಾಗಿ ರೂಮ್ ಬುಕ್ ಮಾಡಿರುವ ಗ್ರಾಹಕರು ಕೂಡ ಈ ವೇಳೆ ಪರದಾಡುವಂತಾಗಿತ್ತು. ಹೋಟೆಲ್​ನಲ್ಲಿ ತಮಗೆ ಪ್ರೆಸಿಡೆನ್ಷಿಯಲ್​ ಸೂಟ್​ ಬೇಡ ಎಂದು ಹೇಳಿರುವ ರಾಹುಲ್ ಗಾಂಧಿ, ಸಾಮಾನ್ಯ ರೂಮ್​ ಬುಕ್ ಮಾಡುವಂತೆ ಸೂಚಿಸಿದರು.
ಇದನ್ನೂ ಓದಿ:ಸಿದ್ದರಾಮೋತ್ಸವಕ್ಕೆ ಹೊರಟ ವಾಹನ ಅಪಘಾತ; ಒಂದು ಸಾವು, ನಾಲ್ವರಿಗೆ ಗಂಭೀರ ಗಾಯ..
ರಾಹುಲ್​ ಗಾಂಧಿ, ವೇಣುಗೋಪಾಲ್ ಮತ್ತು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಈ ಸಭೆಯಲ್ಲಿ ಭಾಗವಹಿಸಲಿದ್ದು, ಮುಂದಿನ ಚುನಾವಣಾ ತಂತ್ರಗಳ ಕುರಿತು ಪ್ರಮುಖವಾಗಿ ಚರ್ಚೆ ಆಗಲಿದೆ ಎನ್ನಲಾಗಿದೆ. ಸಭೆ ಆರಂಭವೇ ತಡವಾಗಿರುವುದರಿಂದ, ಸಭೆಯ ಚರ್ಚೆಯ ವಿವರಗಳು ಮಧ್ಯರಾತ್ರಿಯ ಸುಮಾರಿಗೆ ಹೊರಬೀಳಲಿವೆ ಎಂದು ನಿರೀಕ್ಷಿಸಲಾಗಿದೆ.
ವಿಮಾನಕ್ಕೆ ಡಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲೇ ಬಚಾವಾದ ಕಾರು!
ತಿಗಣೆ ಮದ್ದಿಗೆ ಬಲಿಯಾದ್ಲು 6 ವರ್ಷದ ಬಾಲಕಿ; ನಿಜಕ್ಕೂ ಆಗಿದ್ದೇನು? ತಪ್ಪಿತಸ್ಥರು ಯಾರು?
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − five =
Remember me
