ಬೆಂಗಳೂರು:ಸೇನೆಗೆ ಯುವ ಹುಮ್ಮಸ್ಸು, ಹೊಸತನದ ತೇಜಸ್ಸು ತುಂಬಲು ಉದ್ದೇಶಿತ ‘ಅಗ್ನಿಪಥ್ ಯೋಜನೆ’ಯಡಿ ಅಗ್ನಿವೀರರ ನೇಮಕದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಗಾದೆ, ನೀಡಿರುವ ಹೇಳಿಕೆ ಅಸಂಬದ್ಧವೆಂದು ಬಿಜೆಪಿ ಪೂರ್ವ ಸೈನಿಕ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯ ಶಿವಲಿಂಗಯ್ಯ ಆಕ್ಷೇಪಿಸಿದರು.
ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸೈನಿಕರ ಸರಾಸರಿ ವಯಸ್ಸು 32, ನೆರೆಯ ಪಾಕಿಸ್ತಾನದಲ್ಲಿ 28 ಇದೆ. ಕಾರ್ಗಿಲ್ ಯುದ್ಧದ ಬಳಿಕ ತಜ್ಞ ಸುಬ್ರಮಣ್ಯ ಶಿಾರಸು ಪ್ರಕಾರ ಸರಾಸರಿ ವಯಸ್ಸನ್ನು ಇಳಿಸಲು ನಿರ್ಧರಿಸಲಾಗಿದೆ.
ಪಿಯುಸಿ ತೇರ್ಗಡೆಯಾದವರನ್ನು ಅಗ್ನಿವೀರರೆಂದು ನೇಮಿಸಲಾಗುತ್ತದೆ. ಆರು ತಿಂಗಳ ತರಬೇತಿ, ಮೂರುವರೆ ವರ್ಷ ಸೇವೆ ನಂತರ 13 ಲಕ್ಷ ರೂ. ನಗದು ಪುರಸ್ಕಾರ ಸಿಗುತ್ತದೆ. ಸೇವೆ ಮುಗಿಸಿ ಹೊರ ಬಂದಾಗ ಗರಿಷ್ಠ 21 ರಿಂದ 25 ವರ್ಷ ವಯಸ್ಸಾಗಿರುತ್ತದೆ.
ವ್ಯಾಪಾರ, ನವೋದ್ಯಮ, ಹೆಚ್ಚಿನ ವ್ಯಾಸಂಗಕ್ಕೂ ಅವಕಾಶವಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆ ಹುದ್ದೆಗಳ ಭರ್ತಿ ಸಂದರ್ಭದಲ್ಲಿ ಶೇಕಡ 10ರಷ್ಟು ಅವಕಾಶವಿದೆ. ಅರ್ಹತೆ ಪಡೆದವರು ಸೇನೆಯಲ್ಲಿ ಸೇವೆಗೆ ಮರು ನೇಮಕವಾಗಲಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಇಲಾಖೆ ಹುದ್ದೆಗಳ ನೇಮಕ ವೇಳೆ ಮಾಜಿ ಸೈನಿಕರ ಕೋಟಾದಲ್ಲಿ ಅವಕಾಶ ಪಡೆಯಬಹುದಾಗಿದೆ ಎಂದರು.
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಒಂದು ಶ್ರೇಣಿ ಒಂದು ಪಿಂಚಣಿ ಜಾರಿಗೆ ತಂದರು. ಭೂಮಿ, ಸಮುದ್ರ, ಆಕಾಶ, ಬಾಹ್ಯಾಕಾಶಕ್ಕೂ ಯುದ್ಧ ವಿಸ್ತರಿಸಿರುವ ಕಾರಣ ಸೇನೆಗೆ ಅತ್ಯಾಧುನಿಕ ಶಸಾಸ, ತಂತ್ರಜ್ಞಾನ, ವಿಶೇಷ ಸೌಲಭ್ಯಗಳ ಬಲ ತುಂಬಿದ್ದಾರೆ ಎಂದು ಶಿವಲಿಂಗಯ್ಯ ವಿವರಿಸಿದರು.
ಸಮಿತಿ ಮತ್ತೊಬ್ಬ ಸದಸ್ಯ ಸುಬೇದಾರ್ ಬಸವರಾಜ ಬಿರಾದಾರ್ ಅವರು ತಾತ್ಕಾಲಿಕವಾಗಿ ಸೇನೆಗೆ ಸೇರ್ಪಡೆ ಅವಕಾಶ ಹಿಂದೆಯೂ ಇತ್ತು. ಈಗ ಹೊಸ ಹೆಸರಿಡಲಾಗಿದೆಯಷ್ಟೇ. ಸೇನಾ ಕಾರ್ಯಕ್ಕೆ ಯುವಶಕ್ತಿ ಬಲ, ಅನುಭವಿಗಳ ಮಾರ್ಗದರ್ಶನದ ಬೆಂಬಲ ಸಿಗುತ್ತದೆ ಎಂದರು.
ಪಕ್ಷದ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ ಮಾತನಾಡಿ ಅಗ್ನಿವೀರರನ್ನು ಬಳಸಿ ಬೀಸಾಡುವ ಕಾಗದಕ್ಕೆ ಹೋಲಿಸಿ, ದೇಶದ ಯುವಜನರಿಗೆ ರಾಹುಲ್ ಗಾಂಧಿ ಅಪಮಾನಿಸಿರುವುದು ಖಂಡನೀಯ. ದೇಶದ ಯುವ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 13 =
Remember me
