ನವದೆಹಲಿ:ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಕಾಂಗ್ರೆಸ್ ಸದುಪಯೋಗಪಡಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಬೇಕೇ ಹೊರತು ನಾಯಕತ್ವದ ಬಗ್ಗೆ ಅನಗತ್ಯ ಚರ್ಚೆ ಮಾಡುತ್ತ ದೊರೆತಿರುವ ಅವಕಾಶ ಕಳೆದುಕೊಳ್ಳಬಾರದೆಂದು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ. ಕಾಂಗ್ರೆಸ್​ನಲ್ಲಿ ಬಣ ರಾಜಕೀಯ ತಾರಕಕ್ಕೇರಿದ್ದ ಹಿನ್ನೆಲೆಯಲ್ಲಿ ಇಬ್ಬರನ್ನೂ ದೆಹಲಿಗೆ ಕರೆಸಿ ರಾಹುಲ್ ಮಾತುಕತೆ ನಡೆಸಿದರು. ಚುನಾವಣೆಗೆ ಇನ್ನೂ 2 ವರ್ಷವಿದ್ದು, ನಾಯಕತ್ವ ವಿಚಾರವೇ ಈಗ ಅಪ್ರಸ್ತುತ. ನೀವಿಬ್ಬರೂ ಪಕ್ಷದ ಆಸ್ತಿಯಿದ್ದಂತೆ. ನಿಮ್ಮ ಸೇವೆಗೆ ನ್ಯಾಯ ಒದಗಿಸಲಾಗುವುದು. ಆದರೆ ಸದ್ಯ ಪಕ್ಷ ಸಂಘಟನೆ ಹಾಗೂ ಬಿಜೆಪಿ ವಿರೋಧಿ ವಾತಾವರಣ ಬಳಸಿಕೊಂಡು ಜನರನ್ನು ನಮ್ಮ ಕಡೆ ಸೆಳೆದುಕೊಳ್ಳಬೇಕು. ಎಷ್ಟೋ ಜ್ವಲಂತ ವಿಷಯಗಳು ನಮ್ಮ ಮುಂದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜನರಿಗೆ ಆಗುತ್ತಿರುವ ಅನ್ಯಾಯದ ಮನವರಿಕೆ ಮಾಡಿ ಎಂದು ಸಲಹೆ ನೀಡಿದ್ದಾರೆ.
ಬಂಡವಾಳ ಬಯಲು ಮಾಡಿ:ಕೋವಿಡ್ ವೈಫಲ್ಯ, ಬೆಲೆ ಏರಿಕೆ ವಿಷಯಗಳೂ ಚರ್ಚೆಗೆ ಬಂದಿವೆ. ಪೆಗಾಸಸ್ ಗೂಢಚರ್ಯು ವಿಷಯವನ್ನೂ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿ ಬಿಜೆಪಿ ಬಂಡವಾಳ ಬಯಲು ಮಾಡಬೇಕು ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ. ಸಭೆ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹಾಜರಿದ್ದರು.
ಸಿದ್ದು ಜತೆ ಪ್ರತ್ಯೇಕ ಸಭೆ:ಕಾಂಗ್ರೆಸ್ ನಾಯಕರ ಜತೆಗಿನ ಮೀಟಿಂಗ್ ಬಳಿಕ ರಾಹುಲ್ ಗಾಂಧಿ ಸಿದ್ದರಾಮಯ್ಯ ಜತೆಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಸ್ಥಿತಿಗತಿ ಹಾಗೂ ಪಕ್ಷಕ್ಕೆ ಮುಂದೆ ಇರುವ ಅವಕಾಶಗಳ ಬಗ್ಗೆ ಸಿದ್ದರಾಮಯ್ಯರಿಂದಲೇ ಪ್ರತ್ಯೇಕ ಮಾಹಿತಿ ಕಲೆಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆಯಲ್ಲಿ ಪಕ್ಷವನ್ನು ಯಾರು ಮುನ್ನಡೆಸಬೇಕು ಎನ್ನುವುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ಪದೇಪದೆ ಚರ್ಚೆ ಅಗತ್ಯವೇ ಇಲ್ಲ, ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸಿಎಂ ಯಾರಾಗಬೇಕು ಎನ್ನುವುದು ಶಾಸಕರು ತೀರ್ವನಿಸುತ್ತಾರೆ ಎಂದರು.
ರಾಜಕೀಯ ಪಕ್ಷ ಎಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸಹಜ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲ ಇದ್ದದ್ದೇ. ಇದನ್ನೆಲ್ಲ ತೀರಾ ದೊಡ್ಡದಾಗಿ ಬಿಂಬಿಸುವ ಅಗತ್ಯವೇ ಇಲ್ಲ. ರಾಹುಲ್ ನಮಗೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ನಾವದನ್ನು ಪಾಲಿಸಲಿದ್ದೇವೆ.
|ಸಿದ್ದರಾಮಯ್ಯಕಾಂಗ್ರೆಸ್ ಹಿರಿಯ ನಾಯಕ
ನಮ್ಮದು ಸಾಮೂಹಿಕ ನಾಯಕತ್ವ ನಂಬಿರುವ ಪಕ್ಷ. ಒಗ್ಗಟ್ಟಾಗಿ ಕೆಲಸ ಮಾಡಬೇಕು ಎನ್ನುವುದು ವರಿಷ್ಠರ ನಿಲುವೂ ಹೌದು.
|ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ಸಿಎಂ ಬಿಎಸ್​ವೈ ವಿರುದ್ಧ ಸ್ವಪಕ್ಷದಲ್ಲೇ ಸಂಚು? ರಾಜಕೀಯ ಆಟ ಆಡ್ತಿರೋ ಕಾಣದ ಕೈ ಯಾವುದು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
