ಬೆಂಗಳೂರು:ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಆಗಮಿಸಿರುವ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಇಂದು ತಾಯಿ ಸೋನಿಯಾ ಗಾಂಧಿ ಅವರ ಜತೆ ನಾಗರಹೊಳೆ ಅಭಯಾರಣ್ಯಕ್ಕೆ ಹೋಗಿದ್ದಾರೆ. ವಿಶೇಷವೆಂದರೆ, ಈ ಅಮ್ಮ-ಮಗ ಇನ್ನೊಂದು ತಾಯಿ-ಮಗುವಿನ ಸಂಕಷ್ಟಕ್ಕೆ ಮರುಗಿದ್ದಾರೆ.
ಅಭಯಾರಣ್ಯದಲ್ಲಿ ಆನೆಯೊಂದು ಗಾಯಗೊಂಡಿರುವ ತನ್ನ ಮರಿಯಾನೆಯ ಸ್ಥಿತಿಗೆ ಮರುಗುತ್ತಿರುವುದನ್ನು ನೋಡಿ ಸ್ಪಂದಿಸಿರುವ ರಾಹುಲ್​ ಗಾಂಧಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ಮೇಲೆ ತಿಳಿಸಲಾದ ಆನೆಮರಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ. ಅದಕ್ಕಾಗಿ ನಾನು ರಾಜಕೀಯ ಗಡಿಯನ್ನು ದಾಟಿ ಈ ಆನೆಮರಿಗೆ ಅನುಕಂಪದ ಮೇರೆಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಕೋರಿಕೊಳ್ಳುತ್ತಿದ್ದೇನೆ. ಸೂಕ್ತ ಚಿಕಿತ್ಸೆ ಸಿಕ್ಕರೆ ಈ ಆನೆಮರಿ ಬದುಕುಳಿಯಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ನೀವು ಅದಕ್ಕೆ ಚಿಕಿತ್ಸೆ ಕೊಡಿಸುವಿರಿ ಎಂದು ಆಶಿಸಿದ್ದೇನೆ ಎಂಬುದಾಗಿ ರಾಹುಲ್ ಪತ್ರದಲ್ಲಿ ತಿಳಿಸಿದ್ದಾರೆ.
A mother’s love.I felt so sad to see this beautiful elephant with her injured little baby fighting for its life.pic.twitter.com/65yMB37fCD— Rahul Gandhi (@RahulGandhi)October 5, 2022
A mother’s love.I felt so sad to see this beautiful elephant with her injured little baby fighting for its life.pic.twitter.com/65yMB37fCD
ನೀವು ಈ ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರಿಕೆ..​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + eleven =
Remember me
