ರಾಯಚೂರು:ವಿಧಿಯ ಆಟ ಕೆಲವೊಮ್ಮೆ ಎಷ್ಟು ಘೋರವಾಗಿರುತ್ತದೆ ಎಂಬುದಕ್ಕೆ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ನಡೆದ ಘಟನೆಯೊಂದ ಉದಾಹರಣೆ ಆಗಿದೆ. ಇಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ವರ ನಿನ್ನೆ ಸಂಜೆಯೇ ಕೊನೆಯುಸಿರೆಳೆದಿರುವುದು ವಿಧಿಯ ಕ್ರೂರತ್ವಕ್ಕೆ ಸಾಕ್ಷಿಯಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜವಳಗೇರಾ ಗ್ರಾಮದ ನಿವಾಸಿ ಹುಲುಗಪ್ಪ (36) ಇಂದು ಮದುವೆ ಮಂಟಪದಲ್ಲಿ ಹೊಸ ಬಾಳಿನ ನಿರೀಕ್ಷೆಯಲ್ಲಿ ಖುಷಿಯಲ್ಲಿರುತ್ತಿದ್ದ. ಆದರೆ, ನಿನ್ನೆ ಸಂಜೆ ಏಕಾಏಕಿ ಬಂದೆರಗಿದ ಹೃದಯಾಘಾತದಿಂದ ಹುಲುಗಪ್ಪ ಮೃತಪಟ್ಟಿದ್ದು, ಸಂಭ್ರಮದಲ್ಲಿರಬೇಕಾದ ಮದುವೆ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ.
ಇದನ್ನೂ ಓದಿ:ಆನ್​ಲೈನ್​ ಕ್ಲಾಸ್​ಗೆಂದು ಮಗಳಿಗೆ ಮೊಬೈಲ್​ ಕೊಟ್ಟು ಕೆಟ್ಟ ತಂದೆ: ಅಶ್ಲೀಲ ವಿಡಿಯೋ ಪತ್ತೆ!
ಮೃತ ಹುಲುಗಪ್ಪ ರಾಮತ್ನಾಳ ಗ್ರಾಮ ಪಂಚಾಯಿತಿಯಲ್ಲಿ ಎಸ್​ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಇಂದು ಸಿಂಧನೂರು ತಾಲುಕಿನ ಗೋರೆಬಾಳ ಗ್ರಾಮದ ಶರಣಬಸವೇಶ್ವರ ದೇಗುಲದಲ್ಲಿ ಮದುವೆ ನಡೆಯಬೇಕಿತ್ತು. ಆದರೆ, ವಿಧಿಯಾಟದಲ್ಲಿ ಹುಲುಗಪ್ಪ ಅಸುನೀಗಿದ್ದು, ಜವಳಗೇರಾ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
VIDEO| ನನ್ನ ಹೊಸ ವಿಡಿಯೋಗೆ ಕೆಟ್ಟ ಕಾಮೆಂಟ್​ಗಳು ಹರಿದುಬರುತ್ತಿವೆ: ಬಾಲಿವುಡ್​ ಗಾಯಕಿಯ ಅಳಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − four =
Remember me
