ರಾಯಚೂರು:ವಿಆರ್‌ಎಲ್ ಸಮೂಹ ಸಂಸ್ಥೆಯ ಚೇರಮನ್ ಡಾ.ವಿಜಯ ಸಂಕೇಶ್ವರರ ಜೀವನಾಧರಿತ ವಿಜಯಾನಂದ ಚಲನಚಿತ್ರಕ್ಕೆ ಜಿಲ್ಲೆಯಲ್ಲಿ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯ ಎಂಟು ಚಿತ್ರಮಂದಿರಗಳಲ್ಲಿ ಚಿತ್ರ ಶುಕ್ರವಾರ ಬಿಡುಗಡೆಗೊಂಡಿದ್ದು, ಜೀವನಾಧಾರಿತ ಕಥೆ ನಿರ್ದೇಶನ, ಛಾಯಾಗ್ರಹಣ, ಸಂಗೀತ ಸೇರಿದಂತೆ ಎಲ್ಲ ವಿಭಾಗಗಳ ಮೂಲಕ ಮನ ಗೆದ್ದಿದೆ ಎಂದು ಪ್ರೇಕ್ಷಕರು ಪ್ರಶಂಸೆ ವ್ಯಕ್ತಪಡಿಸಿದರು. ಒಂದು ಲಾರಿಯಿಂದ ದೇಶದಲ್ಲಿ ಅತಿದೊಡ್ಡ ಲಾಜಿಸ್ಟಿಕ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ಡಾ.ವಿಜಯ ಸಂಕೇಶ್ವರ ಜೀವನದ ಹಾದಿ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿದಾಯಕವಾಗಿದ್ದು, ಪ್ರತಿಯೊಬ್ಬರೂ ನೋಡಲೇ ಬೇಕು ಎಂದು ವೀಕ್ಷಕರು ಹೇಳಿದರು.
ಚಿತ್ರಕಥೆ, ಡಾ.ವಿಜಯ ಸಂಕೇಶ್ವರ ಪಾತ್ರದಲ್ಲಿ ಅಭಿನಯಿಸಿರುವ ನಟ ನಿಹಾಲ್ ಅಭಿನಯ ಹಾಗೂ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಎಲ್ಲ ಪಾತ್ರಧಾರಿಗಳು ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ನಿಹಾಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದು ಪ್ರೇಕ್ಷಕರು ತಿಳಿಸಿದರು. ರಾಯಚೂರಿನ ಮಿರಾಜ್ ಸಿನೆಮಾಸ್, ಸಿಂಧನೂರಿನ ಮಂಜುನಾಥ, ಲಿಂಗಸುಗೂರಿನ ಎಂಪೈರ್, ದೇವದುರ್ಗದ ಭರತ್, ಮಾನ್ವಿಯ ಅಪರ್ಣ, ಸಿರವಾರದ ಶಿವಮಾತಾ, ಮಸ್ಕಿಯ ಶರಣಬಸವೇಶ್ವರ ಹಾಗೂ ಪೋತ್ನಾಳದ ಎಸ್‌ಎ ಚಿತ್ರಮಂದಿರಗಳಲ್ಲಿ ವಿಜಯಾನಂದ ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ಆರಂಭ ದೊರೆತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
