ರಾಯಚೂರು:ಕರೊನಾ ಸೋಂಕು ಹೇಗೆ, ಯಾವಾಗ, ಯಾವ ರೀತಿಯಲ್ಲಿ ಒಕ್ಕರಿಸಿಬಿಡುತ್ತದೆಯೋ ಹೇಳುವುದೇ ಕಷ್ಟ.ಅಂಥದ್ದೇ ಒಂದು ವಿಚಿತ್ರ ಹಾಗೂ ಆತಂಕಕಾರಿ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ.. ಇಲ್ಲಿಗೆ ಬಂದಿರುವ ಮಹಿಳೆಯೊಬ್ಬರು ಡ್ರೆಸ್‌ ಖರೀದಿಗೆ ಬಂದು 30 ಮಂದಿಗೆ ಸೋಂಕು ಹಚ್ಚಿಸಿಹೋಗಿರುವ ಘಟನೆ ಇದಾಗಿದೆ.
ಬಟ್ಟೆ ಅಂಗಡಿಗೆ ಬಂದಿದ್ದ ಮಹಿಳೆ, ಬಟ್ಟೆ ಖರೀದಿ ಮಾಡಿ ಹೋಗಿರುವುದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಮಹಿಳೆ ಕಂಟೈನ್‌ಮೆಂಟ್‌ ಝೋನ್‌ನಿಂದ ಬಂದಿದ್ದರು. ಅವರಿಗೆ ಕರೊನಾ ಸೋಂಕು ಇದ್ದರೂ ಬಟ್ಟೆ ಖರೀದಿಗೆ ಬಂದಿದ್ದರು ಎನ್ನಲಾಗಿದೆ.
ಆಕೆ ಬಂದು ಬಟ್ಟೆಗಳನ್ನು ಆಯ್ಕೆ ಮಾಡಿ ಖರೀದಿ ಮಾಡಿ ಹೋಗಿದ್ದಾರೆ. ಆಕೆ ಬಂದು ಹೋದ ಮೇಲೆ ಅಂಗಡಿಯಲ್ಲಿಯೇ ಇದ್ದ ಅಂಗಡಿ ಮಾಲೀಕ ಹಾಗೂ ಇಬ್ಬರು ಕೆಲಸಗಾರರಿಗೂ ಸೋಂಕು ತಗುಲಿದೆ! ನಂತರ ಅಂಗಡಿಯಲ್ಲಿ ಇದ್ದ ಹಾಗೂ ಈ ಮಳಿಗೆಗೆ ಬಂದು ಹೋದವರಿಗೂ ಸೋಂಕು ತಗುಲಿರುವ ವರದಿಯಾಗಿದೆ.
ಇದನ್ನೂ ಓದಿ:ಪ್ರಿಯತಮೆಯ ಮುಖಕ್ಕೆ ಸ್ಯಾನಿಟೈಸರ್‌ ಎರಚಿ ಬೆಂಕಿ ಹಚ್ಚಿದ!
ಒಟ್ಟಿನಲ್ಲಿ ಈ ಮಹಿಳೆಯಿಂದಾಗಿ 30 ಮಂದಿಗೆ ಸೋಂಕು ತಗುಲಿದ್ದು ಎಲ್ಲರೂ ಚಿಕಿತ್ಸೆ ಪಡೆಯುವಂತಾಗಿದೆ. ಅಂಗಡಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿರ್ಲಕ್ಷ್ಯವಹಿಸಿದ ಹಿನ್ನೆಲೆಯಲ್ಲಿ ಇಂಥದ್ದೊಂದು ಕೇಸ್‌ ಆಗಿರುವುದಾಗಿ ತಿಳಿದುಬಂದಿದೆ.
ಅಂಗಡಿ ಮಾಲೀಕರನ ವಿರುದ್ಧ ಕೋವಿಡ್‌ ನಿಯಮ ಉಲ್ಲಂಘನೆ ಆರೋಪದಡಿ ಕ್ರಿಮಿನಲ್‌ ಕೇಸ್‌ ದಾಖಲಾಗಿದ್ದು, ಅಂಗಡಿಯ ಲೈಸೆನ್ಸ್‌ ರದ್ದುಪಡಿಸಲು ಪೊಲೀಸ್‌ ಇಲಾಖೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿರುವುದಾಗಿ ವರದಿಯಾಗಿದೆ. ಸದ್ಯ ಅಂಗಡಿಯನ್ನು ಸೀಲ್‌ಡೌನ್‌ ಮಾಡಲಾಗಿದೆ.
ಮನೆಮಂದಿಗೆ ನೆಗೆಟಿವ್‌- ಸಾಕುಬೆಕ್ಕಿಗೆ ಪಾಸಿಟಿವ್‌! ತಜ್ಞರಿಗೂ ಸವಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 4 =
Remember me
