ರಾಯಚೂರು:ಚಿಪ್ಸ್​ ಅಥವಾ ಕುರ್​ಕುರೆ ರೀತಿಯ ಪ್ಯಾಕೆಟ್​ ಒಳಗೆ ಒಂದೊಂದು ಚಾಕೊಲೇಟ್​ ಅಥವಾ ಕೈಗೆ ಅಂಟಿಸಿಕೊಳ್ಳುವ ಸ್ಟಿಕರ್ಸ್​ ಸಿಗುವುದನ್ನು ನಾವು ನೋಡಿದ್ದೇವೆ. ಆದರೆ, ಅದೇ ಕುರ್​ಕುರೆ ಥರದ ಪ್ಯಾಕೆಟ್​ನಲ್ಲಿ 500 ರೂಪಾಯಿಯ ಗರಿ ಗರಿ ನೋಟು ಸಿಗುತ್ತದೆ ಅಂದರೆ ನೀವು ನಂಬುತ್ತೀರಾ? ನಂಬಲು ಅಸಾಧ್ಯವಾದರೂ ಇದು ಸತ್ಯವಾಗಿದೆ.
ಹೌದು, ಕುರ್​​​ಕುರೆ ಥರದ ಪ್ಯಾಕೆಟ್​​​ ಖರೀದಿ ಮಾಡಿ ಸುಮಾರು 20 ಸಾವಿರಕ್ಕೂ ಹೆಚ್ಚು ಹಣವನ್ನು ರಾಯಚೂರು ಜಿಲ್ಲೆಯ ಜನ ಪಡೆದಿದ್ದಾರೆ. ಜಿಲ್ಲೆಯ ಲಿಂಗಸಗೂರು ತಾಲೂಕಿನ ಹನೂರು ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಕುರ್​ಕುರೆ ರೀತಿಯ ಪ್ಯಾಕೆಟ್​ ತೆಗೆದುಕೊಳ್ಳಲು ಇದೀಗ ಜನ ಮುಗಿಬಿದ್ದಿದ್ದಾರೆ.
ಕುರ್​ಕುರೆ ಥರದ ಪ್ಯಾಕೆಟ್​ನಲ್ಲಿ ಹಣ ಬರುವುದನ್ನು ಖಚಿತಪಡಿಸಿಕೊಂಡು ಜನರು ಖರೀದಿಗೆ ಮುಗಿ ಬಿದ್ದಿದ್ದಾರೆ. 5 ರೂಪಾಯಿ ಪ್ಯಾಕೆಟ್​ನಲ್ಲಿ 500 ರೂ. ಬಂದಿದ್ದನ್ನು ಕಂಡು ಜನ ಸಂತಸಗೊಂಡಿದ್ದಾರೆ. ಫ್ಲಿಂಗ್ಸ್​ ಪಂಜಾಬ್​ ತಡ್ಕಾ (Flings Punjab Tadka) ಹೆಸರಿನ ಬ್ರಾಂಡ್​ನ ಪ್ಯಾಕೆಟ್​ನಲ್ಲಿ ಹಣ ಪತ್ತೆಯಾಗಿದೆ.
ಬಹುಶಃ ತಮ್ಮ ಉತ್ಪನ್ನದ ಜಾಹಿರಾತು ಹಾಗೂ ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಕಂಪನಿಯೇ ಪ್ಯಾಕೆಟ್​ನಲ್ಲಿ ಹಣವಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಖಚಿತ ಕಾರಣ ಏನು ಎಂಬುದು ಯಾರಿಗೂ ತಿಳಿದಿಲ್ಲ. ತನಿಖೆಯ ಬಳಿಕವಷ್ಟೇ ಈ ಬಗ್ಗೆ ಖಚಿತ ಮಾಹಿತಿ ತಿಳಿಯಲಿದೆ. ಸದ್ಯ ಕುರ್​ಕುರೆ ಥರದ ಪ್ಯಾಕೆಟ್​ ತೆಗೆದುಕೊಳ್ಳಲು ಜನರು ಮಾತ್ರ ಮುಗಿಬಿದ್ದಿದ್ದಾರೆ.(ದಿಗ್ವಿಜಯ ನ್ಯೂಸ್​)
ಹೊಸಪೇಟೆ ವಿದ್ಯಾರ್ಥಿಗಳ ಕೈಯಲ್ಲಿ ಯುರೇಶಿನ್​ ಗ್ರಿಫನ್​ ವಲ್ಚರ್​! ಎಲ್ಲಿ ಸಿಕ್ತು ಅಂತಾ ಕೇಳಿದ್ರೆ ಬಂದಿದ್ದು ಅಚ್ಚರಿ ಉತ್ತರ

ವಿದ್ವಾಂಸರನ್ನೇ ದಿಗ್ಭ್ರಮೆಗೊಳಿಸಿದ್ದ 2500 ವರ್ಷ ಹಳೆಯ ಸಂಸ್ಕೃತ ವ್ಯಾಕರಣ ಸಮಸ್ಯೆ ಬಗೆಹರಿಸಿದ ಭಾರತೀಯ ವಿದ್ಯಾರ್ಥಿ!

ಕಡೂರಿನಲ್ಲಿ ಹೊಸ ಬೋರ್​ವೆಲ್​ ಕೊರೆಯುವಾಗ ಹಳೆಯ ಬೋರ್​ವೆಲ್​ನಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರು!

Sign in to your account
Please enter an answer in digits:4 + nineteen =
Remember me
