ರಾಯಚೂರು:ರಾಜ್ಯದಲ್ಲಿ ಉಪ ಚುನಾವಣೆಯ ಕಾವು ಜೋರಾಗಿದ್ದು, ಜನರ ಮತಗಳನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ರಾಯಚೂರು ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್​ ಗೌಡ ಪಾಟೀಲ್​ ಪ್ರಖ್ಯಾತ ಗಾಯಕಿಯನ್ನೇ ಚುನಾವಣಾ ಪ್ರಚಾರಕ್ಕೆ ಕರೆತಂದಿದ್ದಾರೆ.
ನಿಮಗೆಲ್ಲ ನಟ ದರ್ಶನ್​ ಅಭಿನಯದ ರಾಬರ್ಟ್​ ಚಿತ್ರದ ಕಣ್ಣು ಹೋಡಿಯಾಕಾ ಹಾಡಿನ ಬಗ್ಗೆ ತಿಳಿದಿದೆ. ಈ ಹಾಡು ಕನ್ನಡಕ್ಕಿಂತ ತೆಲಗಿನಲ್ಲೇ ಸದ್ದು ಮಾಡಿದ್ದು ಹೆಚ್ಚು. ಅದಕ್ಕೆ ಕಾರಣ ಗಾಯಕಿ ಮಂಗ್ಲಿ ಅವರ ಕಂಠಸಿರಿ.
ಇದನ್ನೂ ಓದಿರಿ:ಹಾಸನದಲ್ಲಿ ಬಿಜೆಪಿ ಕಾರ್ಯಕರ್ತನ ಮನೆ ಮೇಲೆ ಜೆಡಿಎಸ್ ಬೆಂಬಲಿಗರಿಂದ ಕಲ್ಲು ತೂರಾಟ..!
ಮಂಗ್ಲಿ ಅವರು ಹಾಡಿದ “ಕಣ್ಣೇ ಅದಿರಿಂದಿ” ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಸಿಕ್ಕಾಪಟ್ಟೆ ಹಿಟ್ ಆಯಿತು. ವಿಶೇಷವೆಂದರೆ ಮಂಗ್ಲಿ ಅವರಿಗೆ ತುಂಬಾ ಜನಪ್ರಿಯವನ್ನು ಈ ಹಾಡು ತಂದುಕೊಟ್ಟಿದೆ. ಈ ಹಾಡಿನಿಂದ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಂಡಿರುವ ಮಂಗ್ಲಿ, ಕನ್ನಡಿಗರ ಮನೆ ಮಗಳಷ್ಟು ಚಿರಪರಿಚಿತರಾಗಿದ್ದಾರೆ.
ಹೀಗಾಗಿ ಮಂಗ್ಲಿ ಅವರನ್ನು ಬಿಜೆಪಿ ಅಭ್ಯರ್ಥಿ ಪ್ರತಾಪ್​ ಗೌಡ ಪಾಟೀಲ್​ ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದ್ದಾರೆ. ನಾಳೆ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಂಡಾಗಳಲ್ಲಿ ಮಂಗ್ಲಿ ಅವರು ಪ್ರತಾಪ್​ ಗೌಡ ಪರ ಮತಯಾಚನೆ ಮಾಡಲಿದ್ದಾರೆ.(ದಿಗ್ವಿಜಯ ನ್ಯೂಸ್​)
ರಾಹುಲ್​ ಡ್ರಾವಿಡ್​ ಕೋಪಕ್ಕೆ ಧೋನಿ ಹೆದರಿದ್ದರು! ಹಳೆಯ ಘಟನೆ ಮೆಲುಕು ಹಾಕಿದ ಸೆಹ್ವಾಗ್​

ಕಾಡಿನವರಲ್ಲ, ನಗರ ನಕ್ಸಲರದ್ದೇ ದೊಡ್ಡ ಸಮಸ್ಯೆ!

ವಾಸ್ತವ ತೆರೆದಿಟ್ಟಿತು ರವಿ ಡಿ. ಚನ್ನಣ್ಣನವರ್ ಲೇಖನ: ಜನಮತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
