ರಾಯಚೂರು:ರಾಜ್ಯದ ಐದು ಜಿಲ್ಲೆಗಳ 315 ಅಂಗನವಾಡಿಗಳಲ್ಲಿ ಸಾಮಾಜಿಕ ಸುರಕ್ಷಾ ಜನವೇದಿಕೆಯಿಂದ ಅಧ್ಯಯನ ಕೈಗೊಳ್ಳಲಾಗಿದ್ದು, ಬಹುತೇಕ ಅಂಗನವಾಡಿಗಳಲ್ಲಿ ಹಲವು ಮೂಲಭೂತ ಸೌಕರ್ಯದ ಕೊರತೆಗಳು ಹಾಗೂ ವಿವಿಧ ಸಮಸ್ಯೆಗಳು ಕಂಡುಬಂದಿವೆ ಎಂದು ವೇದಿಕೆಯ ಸದಸ್ಯ ರವೀಂದ್ರ ಜಾನೇಕಲ್ ಹೇಳಿದರು.
ಇದನ್ನೂ ಓದಿ:ರಸ್ತೆ ಸಂಚಾರದಿಂದ ನರಕಯಾತನೆ: ದುರಸ್ತಿಗೆ ಮನವಿ
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ರಾಯಚೂರು ಸೇರಿದಂತೆ ವಿಜಯಪುರ, ಹಾವೇರಿ, ಉತ್ತರ ಕನ್ನಡ, ಬೆಂಗಳೂರು ನಗರದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಅಧ್ಯಯನ ನಡೆಸಲಾಗಿದ್ದು, ಸ್ವಂತ ಕಟ್ಟಡ ಇಲ್ಲದ, ಶಿಥಿಲಾವಸ್ಥೆಯಲ್ಲಿರುವ ಕೇಂದ್ರಗಳು ಹೆಚ್ಚಿವೆ. ಜತೆಗೆ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ನೀಡಲಾಗುವ ಪೌಷ್ಠಿಕ ಆಹಾರ ತಯಾರಿಕೆ ಜವಾಬ್ದಾರಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ನೀಡಿರುವ ಪರಿಣಾಮ ಪೌಷ್ಠಿಕ ಆಹಾರ ಕಳಪೆ ಗುಣಮಟ್ಟದಾಗಿದೆ ಎಂದು ಆರೋಪಿಸಿದರು.
ಪೂರಕ ಪೌಷ್ಠಿಕ ಆಹಾರ ಉತ್ಪಾದನಾ ಮತ್ತು ತರಬೇತಿ ಕೇಂದ್ರ(ಎಂಎಸ್‌ಪಿಸಿ)ಗಳು ಪುಷ್ಠಿ ಮತ್ತು ಮಿಲೆಟ್ ಲಾಡುಗಳು ಹಾಗೂ ರವೆ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಬಿಐಎಸ್‌ಗೆ ಕಳುಹಿಸಿ ಅಲ್ಲಿ ತಯಾರಿಸಿದ ಆಹಾರಗಳನ್ನು ಪ್ಯಾಕ್ ಮಾಡುವ ಕೆಲಸ ಮಾತ್ರ ಮಾಡುತ್ತಿದೆ. ಆದರೆ ತಯಾರಿಸಿದ ಆಹಾರ ಎಷ್ಟು ಪೌಷ್ಠಿಕತೆಯಿಂದ ಕೂಡಿದೆ ಎಂಬುದರ ಬಗ್ಗೆ ಗಮನಹರಿಸುತ್ತಿಲ್ಲ ಎಂದು ದೂರಿದರು.
ಸರ್ಕಾರ ಕೂಡಲೇ ಅಂಗನವಾಡಿ ಸಮಸ್ಯೆಗಳ ಕುರಿತು ಗಮನಹರಿಸಬೇಕಾಗಿದ್ದು, ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಚಾರ್ಲಿ, ಸದಾನಂದ, ಖಾಸಿಂ, ಈಶಮ್ಮ, ಗಂಗಮ್ಮ, ಸರಿತಮ್ಮ, ಚಂದ್ರು ಸೇರಿದಂತೆ ಇತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 5 =
Remember me
