ರಾಯಚೂರು:ಬರೋಬ್ಬರಿ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದೇವದುರ್ಗ ಹಾಗೂ ಮಾನ್ವಿ ಠಾಣೆಯ ಪೊಲೀಸ್​ ಇನ್ಸ್​ಪೆಕ್ಟರ್ ಬಸವರಾಜ ಕಾಕರಗಲ್ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸಿರವಾರದಲ್ಲಿರುವ ವೈನ್ ​ಶಾಪ್ ಮೇಲೆ ಯಾವುದೇ ದೂರು ದಾಖಲಿಸದಿರುವುದಕ್ಕೆ ಎರಡು ಲಕ್ಷ ರೂ.ಗೆ ಇನ್ಸ್​ಪೆಕ್ಟರ್​ ಬಸವರಾಜ ಅವರು ಬೇಡಿಕೆ ಇಟ್ಟಿದ್ದರು. ವೈನ್ ಶಾಪ್ ಮಾಲೀಕ ಹನುಮಂತನಿಂದ ಒಂದು‌ ಲಕ್ಷ ರೂ. ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ರೆಡ್​ಹ್ಯಾಂಡ್​ ಆಗಿ ಬಸವರಾಜ ಸಿಕ್ಕಿಬಿದ್ದಿದ್ದಾರೆ.
ನಿನ್ನೆ (ಫೆ.1) ಸಂಜೆ ‌ಮಲ್ಲಟ ಬಳಿ ಲಂಚ ಪಡೆಯುವ ವೇಳೆ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಇನ್ಸ್​ಪೆಕ್ಟರ್ ನಾಗರಾಜ ಮೇಕಾ ನೇತೃತ್ವದಲ್ಲಿ ದಾಳಿ ನಡೆದಿದೆ. ಸದ್ಯ ಇನ್ಸ್​ಪೆಕ್ಟರ್​ ಬಸವರಾಜನನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿ ವಿಚಾರಣೆಗೆ ಒಳಪಡಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಪೆಟ್​ ಶಾಪ್​ಗೆ ಹೋಗಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಇಂಜಿನಿಯರಿಂಗ್​ ವಿದ್ಯಾರ್ಥಿಗಳು! ವಿಡಿಯೋ ವೈರಲ್​

ಬಳ್ಳಾರಿಯಲ್ಲಿ ಸಹೋದರರ ಸವಾಲ್​! ಜನಾರ್ದನ ರೆಡ್ಡಿಗೆ ಸೋಮಶೇಖರ ರೆಡ್ಡಿ ಮಾತಿನ ಪಂಚ್​

ದೇಶದ ಮೊದಲ ತೃತೀಯಲಿಂಗಿ ಗರ್ಭಧಾರಣೆ! ಫೋಟೋ ಶೇರ್​ ಮಾಡಿ ಸಂತಸ ಹಂಚಿಕೊಂಡ ದಂಪತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
