ರಾಯಚೂರು:ವೀಕೆಂಡ್ ಕರ್ಫ್ಯೂ ವೇಳೆ ತರಕಾರಿ ಮಾರುತ್ತಿರುವ ಕಾರಣಕ್ಕೆ ಪಿಎಸ್ಐ ಒಬ್ಬರು ಬೂಟು ಕಾಲಲ್ಲಿ ತರಕಾರಿ ಸೊಪ್ಪು ಒದೆಯುವ ಮೂಲಕ ದರ್ಪ ಪ್ರದರ್ಶಿಸಿದ್ದಾರೆ.
ರಾಯಚೂರು ನಗರದ ಸದರ ಬಜಾರ್ ಠಾಣೆ ಪಿಎಸ್‌ಐ ಆಜಂ ವರ್ತನೆಯು ಸಾರ್ಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಜಿಲ್ಲಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ತುರ್ತು ಸೇವೆ ಹೊರತಾಗಿಸಿ ಯಾವುದೇ ವಹಿವಾಟು ನಡೆಸದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೂ ನಗರದ ತರಕಾರಿ ಮಾರುಕಟ್ಟೆ, ಭಂಗಿಕುಂಟಾ, ಚಂದ್ರಮೌಳೇಶ್ವರ ವೃತ್ತದಿಂದ ಪಟೇಲ್ ರಸ್ತೆ ಮಾರ್ಗದಲ್ಲಿ ರೈತರು, ವರ್ತಕರು ತರಕಾರಿ ಮಾರಾಟ ಮಾಡುತ್ತಿದ್ದರು. ಇದನ್ನು ಕಂಡು ಆಕ್ರೋಶಗೊಂಡ ಪಿಎಸ್‌ಐ ತರಕಾರಿಯನ್ನೆಲ್ಲ ಒದ್ದು ಚಲ್ಲಾಪಿಲ್ಲಿ ಮಾಡಿ ದರ್ಪ ಮೆರೆದಿದ್ದಲ್ಲದೇ ತರಕಾರಿ ಮಾರಾಟಗಾರರ ಮೇಲೆ ಲಾಠಿ ಬೀಸಿದ್ದಾರೆ.
ಈ ವೇಳೆ ಕೆಲ ಮಾರಾಟಗಾರರು ಅವರೊಂದಿಗೆ ವಾಗ್ವಾದ ನಡೆಸಿದ ಪ್ರಸಂಗ ಕೂಡ ನಡೆಯಿತು. ವ್ಯಾಪಾರ ವಹಿವಾಟಿಗೆ ಅವಕಾಶ ಇಲ್ಲದ ಕಾರಣ ತರಕಾರಿ ಮಾರಾಟ ಮಾಡಿದ್ದು ತಪ್ಪು. ಹಾಗಂತ ಬಡವರ ಮೇಲೆ ಪೊಲೀಸರು ಈ ರೀತಿ ದರ್ಪ ತೋರಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವನಿಕರದ್ದು.(ದಿಗ್ವಿಜಯ ನ್ಯೂಸ್​)
ಸೆಕ್ಸ್​ ಬಗ್ಗೆ ಮಾತಾಡೋ ಹುಡ್ಗಿರ್ಗೆ 5 ಲಕ್ಷ! 3 ವರ್ಷದಲ್ಲಿ 75 ಕೋಟಿ ಗಳಿಸಿ ತಗ್ಲಾಕೊಂಡ ಯೂಟ್ಯೂಬರ್​ ದಂಪತಿ

ಪ್ರತಿಪಕ್ಷಗಳ ಬಾಯಲ್ಲಿ ಕೋವಿಡ್‌ ಅಸ್ತ್ರವಾಗಲು ಬಿಡಬೇಡಿ- ಸಿಎಂಗಳಿಗೆ ನಡ್ಡಾ ಸೂಚನೆ

ಬಾಯ್​ಫ್ರೆಂಡ್​ಗಾಗಿ ಬರೋಬ್ಬರಿ 175 ಕೋಟಿ ರೂ. ಖರ್ಚು ಮಾಡಿದ ಶ್ರೀಲಂಕಾ ಬ್ಯೂಟಿ!

Sign in to your account
Please enter an answer in digits:1 + four =
Remember me
