ರಾಯಚೂರು:ಪತ್ನಿಯ ಮೇಲೆ ಅನೈತಿಕ ಸಂಬಂಧ ಆರೋಪ ಹೊರಿಸಿ, ಆಕೆಯ ಮೇಲಿನ ಸಿಟ್ಟಿಗೆ ಏನೂ ಅರಿಯದ ಇಬ್ಬರು ಕಂದಮ್ಮಗಳನ್ನು ಪಾಪಿ ತಂದೆ ಕತ್ತು ಹಿಸುಕಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ದೇವದುರ್ಗ ತಾಲೂಕಿನ ಜಕ್ಲೇರ್ ದೊಡ್ಡಿಯಲ್ಲಿ ನಡೆದಿದೆ.
ಶಿವರಾಜ್ (3) ರಾಘವೇಂದ್ರ (5) ಕೊಲೆಯಾದ ಮಕ್ಕಳು. ನಿಂಗಪ್ಪ ತಿರುಮಲಯ್ಯ ಕೊಲೆ ಮಾಡಿದ ಪಾಪಿ ತಂದೆ. ಪತ್ನಿ ಶೀಲ ಶಂಕಿಸಿ ತನ್ನಿಬ್ಬರು ಮಕ್ಕಳನ್ನು ತನ್ನ ಕೈಯ್ಯಾರ ಕೊಲೆ ಮಾಡಿದ್ದಾನೆ. ಫೆ. 11ರಂದು ರಾತ್ರಿ 8.30ಕ್ಕೆ ಈ ಭೀಕರ ಹತ್ಯೆ ನಡೆದಿದೆ.
ಗಂಡ ನಿಂಗಪ್ಪ ತಿರುಮಲ್ಲಯ್ಯ ವಿರುದ್ಧ ಪತ್ನಿ ದೂರು ನೀಡಿದ್ದು, ತನ್ನ ಮೇಲೆ ಅಕ್ರಮ ಸಂಬಂಧ ಆರೋಪ ಹೊರಿಸಿ, ನಿಂದಿಸಿದ್ದಲ್ಲದೆ, ಎರಡೂ ಮಕ್ಕಳು ನನಗೆ ಹುಟ್ಟಿಲ್ಲ, ಅವರನ್ನು ಸಾಯಿಸುತ್ತೇನೆ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದನು. ಇದಾದ ಬಳಿಕ ಮಕ್ಕಳಿಬ್ಬರನ್ನು ಕೆ. ಇರಬಗೇರಾದಿಂದ ಜಕ್ಲೇರದೊಡ್ಡಿಗೆ ಕರೆದೊಯ್ದು, ತನ್ನ ಕೈಗಳಿಂದ ಕುತ್ತಿಗೆಯನ್ನು ಹಿಸುಕಿ ಮಕ್ಕಳಿಬ್ಬರು ಕೊಲೆ ಮಾಡಿದ್ದು, ನನ್ನ ಗಂಡನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಪತ್ನಿ ಉಲ್ಲೇಖಿಸಿದ್ದಾಳೆ.
ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.(ದಿಗ್ವಿಜಯ ನ್ಯೂಸ್​)
ಶೇ.50 ರಿಯಾಯಿತಿ ಆಫರ್​: 9 ದಿನದಲ್ಲಿ 120 ಕೋಟಿ ರೂ. ದಂಡ ಸಂಗ್ರಹ, ನ್ಯಾ. ಬಿ. ವೀರಪ್ಪ ಸಲಹೆ ಫಲಪ್ರದ

ಪತ್ನಿಗೆ ವಾಟ್ಸ್​ಆ್ಯಪ್​ ಮೆಸೇಜ್​ ಕಳುಹಿಸಿ ಬೆಂಗ್ಳೂರಲ್ಲಿ ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾದ ಇನ್​ಸ್ಪೆಕ್ಟರ್

ಕಣ್ಣಿಗೊಂದು ಸವಾಲ್​: ಸಾಧ್ಯವಾದ್ರೆ ಕೇವಲ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರೋ ಬೆಕ್ಕು ಪತ್ತೆ ಹಚ್ಚಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
