ಶಶಿಧರ ಅಂಗಡಿ
ರಾಯಚೂರು:ಹಿಂದುಳಿದ, ಮಹತ್ವಾಕಾಂಕ್ಷೆ, ಅಭಿವೃದ್ಧಿ ಹೊಂದಬೇಕಾದ ಜಿಲ್ಲೆಯಲ್ಲಿ ಸರ್ಕಾರದ ಯೋಜನೆಗಳು ಬೆರಳೆಣಿಕೆಯಷ್ಟು ಸಿಕ್ಕರೂ ಅದರಲ್ಲೂ ಕಳಪೆ ಕಾಮಗಾರಿಗಳು ಕಂಡುಬರುತ್ತಿವೆ. ಸೂರತ್-ಚೆನ್ನೈ ಎಕ್ಸ್‌ಪ್ರೆಸ್ ವೇ ಹೆದ್ದಾರಿ ರಸ್ತೆಯಲ್ಲಿ ಬಿರುಕು ಬಿಟ್ಟಿರುವುದು ಇದಕ್ಕೆ ಸಾಕ್ಷಿ.
ದೇಶದ ಆರು ರಾಜ್ಯಗಳಲ್ಲಿ ಹಾದು ಹೋಗುವ ಈ ಹೆದ್ದಾರಿ ನಿರ್ಮಾಣಕ್ಕಾಗಿ 2021ರಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಯೋಜನೆ ರೂಪಿಸಿತ್ತು. ಅದರಂತೆ ಸೂರತ್ ಮತ್ತು ಚೆನ್ನೈ ನಡುವೆ ಸುಲಭ ಸಂಪರ್ಕ ಸಾಧಿಸಲು ಹೆದ್ದಾರಿ ನಿರ್ಮಾಣದ ನಿರ್ಧಾರ ತೆಗೆದುಕೊಳ್ಳಲಾಯಿತು. ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ಸಂಪರ್ಕ ಸಾಧಿಸುವ ಹೆದ್ದಾರಿ ಇದಾಗಿದೆ. ಸದ್ಯ ಹೆದ್ದಾರಿ ಪ್ರಗತಿಯ ಹಂತದಲ್ಲಿದ್ದು, 1271 ಕಿಮೀ ಉದ್ದದ ರಸ್ತೆ ಆರು ಲೇನ್‌ಗಳನ್ನು ಹೊಂದಿದೆ. ರಾಯಚೂರು ಜಿಲ್ಲೆಯಲ್ಲೂ ಹಾದು ಹೋಗುವ ಈ ಹೆದ್ದಾರಿಯಿಂದ ಜಿಲ್ಲೆಯಲ್ಲಿ ಆರ್ಥಿಕ ಅಭಿವೃದ್ಧಿ, ವ್ಯಾಪಾರ ವಹಿವಾಟಿಗೆ ಸಹಕಾರಿಯಾಗಲಿದೆ ಎಂಬ ಆಸೆಯಲ್ಲಿದ್ದ ಜಿಲ್ಲೆಯ ಜನರಿಗೆ ಇದೀಗ ಬೇಸರವೂ ಉಂಟಾಗಲಿದೆ. ಏಕೆಂದರೆ ಇನ್ನೂ ಪ್ರಗತಿಯಲ್ಲಿರುವ ಹೆದ್ದಾರಿ ಆಗಲೇ ಬಿರುಕು ಬಿಟ್ಟಿದೆ.
ರಾಯಚೂರು ತಾಲೂಕಿನ ಚಂದ್ರಬಂಡಾ ಹತ್ತಿರವಿರುವ ಹೆದ್ದಾರಿ ರಸ್ತೆ ಸಂಪೂರ್ಣ ಬಿರುಕು ಬಿಟ್ಟಿದೆ. ರಸ್ತೆ ಕಾಮಗಾರಿ ಸರಿಯಾದ ರೀತಿಯಲ್ಲಿ ಆಗದಿರುವ ಹಾಗೂ ಕಳಪೆ ಕಾಮಗಾರಿ ಆರೋಪ ಕೇಳಿಬರುತ್ತಿದೆ. ಕೇಂದ್ರ ಸರ್ಕಾರದಿಂದ ಆಗುತ್ತಿರುವ ಕಾಮಗಾರಿಗಳೂ ಕೂಡಾ ಕಳಪೆಯೇ? ಎಂಬ ಅನುಮಾನ ಮೂಡುವಂತೆ ಮಾಡಿದೆ.
ಕಳೆದ ಆ.30ರಂದು ಸಂಸದ ಜಿ.ಕುಮಾರ ನಾಯಕ ಅವರು ಹೆದ್ದಾರಿ ಕಾಮಗಾರಿ ಕುರಿತಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು ಮತ್ತು ಗುಣಮಟ್ಟದ ಹಾಗೂ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದರು. 2025ರ ಅಕ್ಟೋಬರ್ ಅಂತ್ಯದೊಳಗೆ ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಜಿಲ್ಲೆಯಲ್ಲಿ ಶೇ.95 ಕಾಮಗಾರಿ ಪೂರ್ಣಗೊಂಡಿದೆ. ರಸ್ತೆ ಸಂಚಾರ ಆರಂಭಿಸುವ ಮೊದಲು ಹೆದ್ದಾರಿಯ ಎಲ್ಲ ಕಡೆಗಳಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಿ ಅವ್ಯವಸ್ಥೆಯ ಬಗ್ಗೆ ಗಮನ ಹರಿಸಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸೂರತ್-ಚೆನ್ನೈ ಎಕ್ಸ್‌ಪ್ರೆಸ್‌ವೇ ರಾಷ್ಟ್ರೀಯ ಹೆದ್ದಾರಿಯು ಜಿಲ್ಲೆಯ ದೇವದುರ್ಗ ತಾಲೂಕಿನ ಬಸವಂತಪುರ ಗ್ರಾಮದಿಂದ ಆರಂಭವಾಗಿ ರಾಯಚೂರು ತಾಲೂಕಿನ ಸಿಂಗನೋಡಿ ಗ್ರಾಮದಲ್ಲಿ ಅಂತ್ಯಗೊಳ್ಳುತ್ತದೆ. ಒಟ್ಟು 40.6 ಕಿಮೀ ರಾಯಚೂರು ಜಿಲ್ಲೆಯಲ್ಲಿ ಹೆದ್ದಾರಿ ಹಾದು ಹೋಗಲಿದೆ. ಕರ್ನಾಟಕ ರಾಜ್ಯದ ಪ್ಯಾಕೇಜ್ ಮೂರರಲ್ಲಿ ಒಟ್ಟು 1079 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಮಾಂಟೆ ಕಾರ್ಲೋ ಲಿಮಿಟೆಡ್ ಕಂಪನಿಗೆ ಈ ಹೆದ್ದಾರಿ ನಿರ್ಮಾಣ ಮಾಡುತ್ತಿದೆ.
ರಸ್ತೆ ಬಿರುಕು ಬಿಟ್ಟಿರುವ ಬಗ್ಗೆ ಈಗಾಗಲೇ ಗುತ್ತಿದಾರರಿಗೆ ಪತ್ರ ಬರೆಯಲಾಗಿದೆ. ಶೀಘ್ರವೇ ರಸ್ತೆ ಸರಿಪಡಿಸಲು ಸೂಚನೆ ನೀಡಲಾಗಿದೆ.| ಮಿಲಿಂದ್ ಯೋಜನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಯೋಜನಾ ಅನುಷ್ಠಾನ ಘಟಕ, ರಾಯಚೂರು.
ಹೆದ್ದಾರಿ ರಸ್ತೆ ಬಿರುಕು ಬಿಟ್ಟಿರುವ ಕುರಿತು ಗಂಭೀರವಾಗಿ ಪರಿಗಣಿಸಿ ಸ್ಥಳ ಪರಿಶೀಲನೆ ಮಾಡಿ, ಕ್ರಮ ಕೈಗೊಳ್ಳಲಾಗುವುದು.| ಜಿ.ಕುಮಾರ ನಾಯಕ ಸಂಸದ, ರಾಯಚೂರು ಕ್ಷೇತ್ರ
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four × two =
Remember me
