ಹುಬ್ಬಳ್ಳಿ:‘ಪ್ರೀತಿಯ ಅಪ್ಪ-ಅಮ್ಮ, ನನ್ನ ಸಾವಿಗೆ ನಾನೇ ಕಾರಣ. ಜೀವನದಲ್ಲಿ ಜಿಗುಪ್ಸೆ ಹೊಂದಿ ಮಾನಸಿಕ ಅಸ್ವಸ್ಥನಾಗಿದ್ದೇನೆ. ನನ್ನ ಕಿಡ್ನಿ ಮಾರಿಯಾದರೂ ನಿಮಗೆ ಹಣ ಕೊಡಬೇಕು ಎಂದುಕೊಂಡಿದ್ದೆ. ಆದರೆ, ಯಾರೂ ಕಿಡ್ನಿ ತೆಗೆದುಕೊಳ್ಳಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ…’ ಎಂದು ಡೆತ್​ನೋಟ್​ ಬರೆದಿಟ್ಟ 22 ವರ್ಷದ ಯುವಕ, ರೈಲಿಗೆ ತಲೆಕೊಟ್ಟು ಮೃತಪಟ್ಟಿದ್ದಾನೆ.
ಗದಗ ಜಿಲ್ಲೆ ನರಗುಂದ ತಾಲೂಕು ರೆಡ್ಡೇರ ನಾಗನೂರು ಗ್ರಾಮದ ಅಡಿವೆಪ್ಪ ಭರಮಪ್ಪ ಹಾದಿಮನಿ(22) ಮೃತ ದುರ್ದೈವಿ. ಮನೆಯ ಹಿರಿಯ ಮಗನಾದ ಅಡಿವೆಪ್ಪ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದ. ಪಿಯುಸಿ ಪರೀಕ್ಷೆಯಲ್ಲಿ ಶೇ.96 ಅಂಕ ಗಳಿಸಿದ್ದ ಅಡಿವೆಪ್ಪ, ಬಿಎಸ್​ಸಿ ಬಾಹ್ಯ ವ್ಯಾಸಂಗ ಮಾಡುತ್ತಿದ್ದ. ಸದ್ಯ ದಾವಣಗೆರೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ.ಇದನ್ನೂ ಓದಿರಿಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ
ಮನೆಯ ಕಷ್ಟಗಳ ನಿವಾರಣೆಗಾಗಿ ಕಿಡ್ನಿ ದಾನ (ಮಾರಾಟ) ಮಾಡಲೂ ಮುಂದಾಗಿದ್ದ. ಹಣಕಾಸಿನ ತೊಂದರೆಯಿಂದ ಮಾನಸಿಕ ಆಘಾತಕ್ಕೊಳಗಾಗಿದ್ದ. ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ಮಾನಸಿಕವಾಗಿ ನೊಂದಿದ್ದ ಆತ, ಡೆತ್​ನೋಟ್​ ಬರೆದಿಟ್ಟು ಹಾವೇರಿ ಜಿಲ್ಲೆ ಸವಣೂರು ತಾಲೂಕು ಯಲವಿಗಿ ನಿಲ್ದಾಣದ ಮಂಗಳವಾರ ತಡರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತನ ದೇಹದಿಂದ ತಲೆ ಬೇರ್ಪಟ್ಟಿದ್ದು, ಕಿಮ್ಸ್​ನಲ್ಲಿ ಶವಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ ಡೆತ್ ನೋಟ್ ಬರೆದು ಜೇಬಿನಲ್ಲಿ ಇಟ್ಟುಕೊಂಡಿದ್ದ.
ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​

ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 5 =
Remember me
