ಬೆಂಗಳೂರು:ದೇಶದಲ್ಲಿ ಕಡಿಮೆ ವೆಚ್ಚದ ಸಾರಿಗೆ ಸೇವೆಯಾದ ರೈಲ್ವೆ ಕೂಡ ಶೀಘ್ರದಲ್ಲಿ ದುಬಾರಿಯಾಗಲಿದೆ. ಹೆಚ್ಚು ಜನಸಂದಣಿ ಇರುವ ರೈಲು ನಿಲ್ದಾಣಗಳಿಂದ ಹೊರಡುವ ಮತ್ತು ಬರುವ ಪ್ರಯಾಣಿಕರಿಂದ ಬಳಕೆದಾರರ ಶುಲ್ಕ ವಸೂಲಿಗೆ ರೈಲ್ವೆ ಮಂಡಳಿ ಸಿದ್ಧತೆ ನಡೆಸಿದೆ. ಈವರೆಗೆ ವಿಮಾನ ನಿಲ್ದಾಣಗಳಲ್ಲಿ ಟಿಕೆಟ್ ದರದ ಜತೆಗೆ ಬಳಕೆದಾರರ ಶುಲ್ಕ ವಸೂಲಿ ಮಾಡಲಾಗುತ್ತಿತ್ತು.
ಸಾವಿರ ನಿಲ್ದಾಣಗಳಿಗೆ ಅನ್ವಯ:ರೈಲ್ವೆ ಮಂಡಳಿ ನಿರ್ಧರಿಸಿರುವಂತೆ ಹೆಚ್ಚು ಜನರು ಬಂದು ಹೋಗುವ ನಿಲ್ದಾಣಗಳಿಗೆ ಮಾತ್ರ ಬಳಕೆದಾರರ ಶುಲ್ಕ ಅನ್ವಯಿಸುತ್ತದೆ. ದೇಶದಲ್ಲಿ 7 ಸಾವಿರ ರೈಲು ನಿಲ್ದಾಣಗಳಿದ್ದು, ಅದರಲ್ಲಿ ಶೇ.10ರಿಂದ 15 ನಿಲ್ದಾಣಗಳಿಗೆ ಹೆಚ್ಚಿನ ಜನರು ಬರುತ್ತಾರೆ. ಅಂದರೆ ದೇಶಾದ್ಯಂತ ಇರುವ 1 ಸಾವಿರ ನಿಲ್ದಾಣಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಆ ನಿಲ್ದಾಣಗಳಿಗೆ ಬರುವ ಮತ್ತು ಹೋಗುವ ಪ್ರಯಾಣಿಕರು ಟಿಕೆಟ್ ಖರೀದಿಸುವಾಗ ಬಳಕೆದಾರರ ಶುಲ್ಕ ವಿಧಿಸಲಾಗುತ್ತದೆ. ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ, ಮೈಸೂರು ಸೇರಿ ಇನ್ನಿತರ ನಿಲ್ದಾಣಗಳಿಗೆ ನೂತನ ಆದೇಶ ಅನ್ವಯವಾಗಲಿದೆ. ಪ್ರಯಾಣಿಕರಿಂದ ವಸೂಲಿ ಈ ಶುಲ್ಕವನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ. ಆಯಾ ನಿಲ್ದಾಣಗಳ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದ್ದು, ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಕಾಮಗಾರಿ ನಡೆಸಲು ಬಳಸಲಾಗುತ್ತದೆ.
ಕಾರವಾರ:ಕೊಂಕಣ ರೈಲ್ವೆ ಕಾರ್ಪೆರೇಶನ್ ಎರಡು ಡೆಮು ರೈಲುಗಳನ್ನು ನೇಪಾಳ ರೈಲ್ವೆ ಇಲಾಖೆಗೆ ಶುಕ್ರವಾರ ಪೂರೈಸಿದೆ. ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಚೆನ್ನೈನ ಕೋಚ್ ಫ್ಯಾಕ್ಟರಿಯಲ್ಲಿ ಸಿದ್ಧವಾದ ಎರಡು ಡೀಸೆಲ್ ಮಲ್ಟಿಪಲ್ ಯುನಿಟ್ (ಡಿಎಂಯು) ರೈಲುಗಳನ್ನು 52.46 ಕೋಟಿ ರೂ. ವೆಚ್ಚದಲ್ಲಿ ನೇಪಾಳದ ಜನಕಪುರಿಗೆ ತಲುಪಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. ಎರಡೂ ರೈಲುಗಳು ತಲಾ ಒಂದೊಂದು ಡೀಸೆಲ್ ಪವರ್ ಇಂಜಿನ್, ಡೀಸೆಲ್ ಟ್ರೇಲರ್ ಬೋಗಿಗಳನ್ನು ಹೊಂದಿವೆ.
ರೈತರ ಕಣ್ಣಲ್ಲಿ ರಕ್ತ ಸುರಿಯುವಂತೆ ಮಾಡುತ್ತಿದೆ ಮೋದಿ ಸರ್ಕಾರ: ರಾಹುಲ್​ ಗಾಂಧಿ ಟ್ವೀಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
