ವಿಜಯನಗರ:ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತೆರಳಲಾಗದೇ ರೈಲ್ವೆ ಉದ್ಯೋಗಿ ಒಬ್ಬರು ದುರಂತ ಸಾವಿಗೀಡಾಗಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಬಸವರಾಜ ಮೃತ ರೈಲ್ವೆ ಉದ್ಯೋಗಿ. ಇವರು ಹೊಸಪೇಟೆಯ ಮುದ್ಲಾಪುರದ ನಿವಾಸಿ. ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎದೆ ನೋವು ಕಾಣಿಸಿಕೊಂಡ ಬೆನ್ನಲ್ಲೇ ಗ್ರಾಮದಿಂದ ಕುಟುಂಬ ಸದಸ್ಯರೊಂದಿಗೆ ಆಸ್ಪತ್ರೆಗೆ ಹೋಗುತ್ತಿದ್ದರು.
ಮುದ್ಲಾಪುರ ಬಳಿ ರೈಲ್ವೆ ಗೇಟ್‌ ಹಾಕಲಾಗಿತ್ತು. ರೈಲುಗಳು ತಡವಾಗಿ ಬಂದದ್ದರಿಂದ ಬಸವರಾಜು ಆಸ್ಪತ್ರೆಗೆ ತಲುಪಲು ವಿಳಂಬವಾಗಿದೆ. ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತುರ್ತು ಚಿಕಿತ್ಸೆಗೆ ಹೋಗುವವರಿಗೆ ಮಾನವೀಯ ನೆಲೆಗಟ್ಟಿನಲ್ಲಿ ರೈಲ್ವೆ ಗೇಟ್‌ ತೆಗೆದು ಅವಕಾಶ ಮಾಡಿಕೊಡಬಹುದಿತ್ತು. ಹೀಗೆ ಮಾಡದ ಕಾರಣ ಬಸವರಾಜು ಅವರು ಜೀವ ಕಳೆದುಕೊಳ್ಳಬೇಕಾಯಿತು.
ಬಸವರಾಜು ಸಾವಿಗೆ ರೈಲ್ವೆ ಇಲಾಖೆಯವರೇ ಹೊಣೆಗಾರರು ಎಂದು 2 ನೇ ವಾರ್ಡ್​ನ ನಗರಸಭೆ ಸದಸ್ಯ ಜೀವರತ್ನಂ ಆರೋಪಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಟ್ವಿಟರ್​ನ ಹೊಸ ನಿಯಮ ಘೋಷಿಸಿದ ಎಲಾನ್​ ಮಸ್ಕ್​: ದ್ವೇಷದ ಟ್ವೀಟ್​ಗಳಿಗೆ ಬೀಳಲಿದೆ ಕಡಿವಾಣ

ಅವರ ಧರ್ಮಕ್ಕೆ ವಿರುದ್ಧವಾಗಿ ಅದನ್ನು ಮಾಡ್ತಾರಾ?; ಟಿಪ್ಪು ಪ್ರತಿಮೆ ವಿಚಾರವಾಗಿ ಸಚಿವ ಮಾಧುಸ್ವಾಮಿ ಪ್ರಶ್ನೆ

ದತ್ತಾಂಶ ಕಳವು ಅಸಾಧ್ಯ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 5 =
Remember me
