ಬೆಂಗಳೂರು:ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ನ.22ರಿಂದ ರಾಜ್ಯದಲ್ಲಿ ಮತ್ತೆ ಮಳೆ ಬೀಳುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಬೆಂ.ಗ್ರಾಮಾಂತರ, ಕೋಲಾರ, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಬೆಳಗಾವಿ, ವಿಜಯಪುರ ಹಾಗೂ ಹಾವೇರಿ ಸೇರಿ ಇತರ ಜಿಲ್ಲೆಗಳಲ್ಲಿ ನ.22ರಿಂದ ಮುಂದಿನ ಮೂರು ದಿನ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮೂನ್ಸೂಚನೆ ನೀಡಿದೆ.
ನೆರೆಯ ತಮಿಳುನಾಡು, ಕೇರಳ, ಪುದುಚೇರಿ, ದಕ್ಷಿಣ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಭಾರಿ ಮಳೆಯಾಗಲಿದೆ. ಗಂಟೆಗೆ 45 ಕಿ.ಮೀ.ನಿಂದ 55 ಕಿ.ಮೀ.ವರೆಗೆ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರದಲ್ಲಿ ಇಳಿಯದಂತೆ ಐಎಂಡಿ ಎಚ್ಚರಿಕೆ ನೀಡಿದೆ.
ತಾಪಮಾನದಲ್ಲೂ ಇಳಿಕೆ: ರಾಜ್ಯದಲ್ಲಿ ಚಳಿ ಇನ್ನಷ್ಟು ಹೆಚ್ಚಿದೆ. ಕೆಲ ಜಿಲ್ಲೆಗಳಲ್ಲಿ ಹಗಲು ಮತ್ತು ರಾತ್ರಿ ವೇಳೆ ತಂಪಾದ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಚಳಿ ಕಾಣಿಸಿಕೊಂಡಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಸರಾಸರಿ 6-9 ಡಿಗ್ರಿ ಉಷ್ಣಾಂಶ ಇಳಿಕೆಯಾಗಿದೆ. ಭಾನುವಾರ ರಾಜ್ಯದಲ್ಲೇ ಬೀದರ್‌ನಲ್ಲಿ ಕನಿಷ್ಠ ತಾಪಮಾನ 8.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೀದರ್ ಮತ್ತು ವಿಜಯಪುರ ತಲಾ 9, ಬಾದಾಮಿ 8, ರಾಯಚೂರು, ಚಿತ್ರದುರ್ಗ, ಧಾರವಾಡ ಮತ್ತು ಗದಗದಲ್ಲಿ ತಲಾ 8, ಬೆಳಗಾವಿ 4, ಬೆಂಗಳೂರು, ಕಲಬುರಗಿ, ಕಾರವಾರ ಮತ್ತು ಗೋಕಾರ್ಣದಲ್ಲಿ ಕನಿಷ್ಠ ತಾಪಮಾನದಲ್ಲಿ ತಲಾ 3 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ. ಅಲ್ಲದೆ, ವಾಯುಭಾರ ಕುಸಿತದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿದೆ.
ನನ್ಗೆ ಸುಳ್ಳು ಹೇಳುವ ಚಟವಿಲ್ಲ, ನನ್ನ ಜತೆ ಎಚ್​ಡಿಕೆ ಫೋನ್​ ಸಂಪರ್ಕದಲ್ಲಿದ್ದಾರೆ… ಎನ್ನುತ್ತಲೇ ಅಂತೆ-ಕಂತೆಗೆ ತೆರೆ ಎಳೆದ ರಮೇಶ್ ಜಾರಕಿಹೊಳಿ​

ಮಂಗಳೂರಿನಲ್ಲಿ ಆಟೋ ಸ್ಫೋಟ: ಪ್ರಯಾಣಿಕನೇ ತನಿಖೆಯ ಮೂಲ ವ್ಯಕ್ತಿ! ಅನುಮಾನ ಹುಟ್ಟಿಸಿದೆ ಪಂಪ್‌ವೆಲ್​ಗೆ ಪ್ರಯಾಣ

ಮಂಗಳೂರಿನಲ್ಲಿ ಆಟೋ ಸ್ಫೋಟ ಪ್ರಕರಣ: ತುಮಕೂರಿನ ರೈಲ್ವೆ ಸಿಬ್ಬಂದಿ ಹೆಸರಲ್ಲಿ ಆಧಾರ್​ ಕಾರ್ಡ್ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − seven =
Remember me
