ಬೆಂಗಳೂರು:ಅರ್ಧರಾಜ್ಯವನ್ನು ಸಂಕಷ್ಟದಲ್ಲಿ ಮುಳುಗಿಸಿರುವ ಮಳೆರಾಯ ಶನಿವಾರ ಕೊಂಚ ಬಿಡುವು ನೀಡಿದ್ದಾನೆ. ಇದರ ಹೊರತಾಗಿಯೂ ನದಿಗಳು ತುಂಬಿ ಹರಿಯುತ್ತಿರುವುದರಿಂದ ಜಲಾಶಯಗಳ ಒಳಹರಿವು ಹೆಚ್ಚಳಗೊಂಡು ಹಲವೆಡೆ ಪ್ರವಾಹ ಸ್ಥಿತಿ ಮುಂದುವರಿದಿದೆ. ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದರೂ ಒಳಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಕೃಷ್ಣಾ ನದಿ ತೀರದ ನೂರಾರು ಗ್ರಾಮಗಳು, ರಾಯಚೂರು ಜಿಲ್ಲೆಯ ಕೆಲವು ತಾಲೂಕುಗಳಿಗೆ ಪ್ರವಾಹದ ಆತಂಕ ಕಾಡುತ್ತಿದೆ. ವೇದಗಂಗಾ, ಧೂದಗಂಗಾ ನದಿ ವ್ಯಾಪ್ತಿಯಲ್ಲೂ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಗ್ರಾಮಗಳಿಗೆ ಮುಳುಗಡೆ ಭೀತಿ ಕಾಡುತ್ತಿದೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಆಸ್ತಿಪಾಸ್ತಿ, ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ತುಂಗಭದ್ರಾ ಜಲಾಶಯಕ್ಕೆ 1 ಲಕ್ಷ ಕ್ಯೂಸೆಕ್ ಒಳಹರಿವಿರುವುದರಿಂದ ಹರಪನಹಳ್ಳಿ, ಹೂವಿನ ಹಡಗಲಿ, ಸಿರಗುಪ್ಪ, ಹೊಸಕೋಟೆ, ಕಂಪ್ಲಿಯಲ್ಲಿ ನೆರೆ ಭೀತಿ ಕಾಡುತ್ತಿದೆ. ಉತ್ತರ ಕನ್ನಡದಲ್ಲಿ ಕಾನೇರಿ, ಕದ್ರಾ ವ್ಯಾಪ್ತಿಯಲ್ಲಿ ನೆರೆಯಿಂದಾಗಿ ನೂರಾರು ಮನೆ, ಸೇತುವೆ ಜಲಾವೃತವಾಗಿವೆ.
ಮಲೆನಾಡಿನಲ್ಲಿ ಮಳೆ ಕೊಂಚ ವಿರಾಮ ನೀಡಿದೆ. ಭದ್ರಾ ಜಲಾಶಯ, ತುಂಗಾ ಜಲಾಶಯ ತುಂಬಿವೆ. ವರದಾ ಉಕ್ಕಿ ಹರಿಯುತ್ತಿರುವುದರಿಂದ ಭತ್ತದ ಗದ್ದೆಗಳು ಜಲಾವೃತವಾಗಿವೆ. ದಕ್ಷಿಣ ಕನ್ನಡದಲ್ಲಿ ನೇತ್ರಾವತಿ ಮತ್ತು ಅದರ ಉಪನದಿಗಳು ತುಂಬಿ ಹರಿಯುತ್ತಿವೆ. ಕುಮಾರಧಾರಾ ಅಪಾಯದ ಮಟ್ಟ ಮೀರಿ ಉಕ್ಕುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸ್ನಾನಘಟ್ಟ ನಾಲ್ಕೈದು ದಿನಗಳಿಂದ ಮುಳುಗಡೆ ಸ್ಥಿತಿಯಲ್ಲೇ ಇದೆ. ಕೊಡಗಿನಲ್ಲಿ ಮಳೆ ಕಡಿಮೆಯಾಗಿದ್ದರೂ ಕೆಆರ್​ಎಸ್, ಕಬಿನಿ ಜಲಾಶಯದ ಒಳಹರಿವು ಹೆಚ್ಚಾಗಿದೆ. ಕಪಿಲಾ ನದಿ ಉಕ್ಕಿ ಹರಿಯುತ್ತಿರುವುದರಿಂದ ನಂಜನಗೂಡು ಸುತ್ತಮುತ್ತ ನೂರಾರು ಮನೆ, ದೇಗಲ ಜಲಾವೃತವಾಗಿವೆ.
ಕೊಡಗಲ್ಲಿ ಮೃತದೇಹ ಪತ್ತೆ
ಬ್ರಹ್ಮಗಿರಿ ಬೆಟ್ಟಗಳ ಸಾಲಿನಲ್ಲಿರುವ ಗಜಗಿರಿ ಬೆಟ್ಟ ಕುಸಿದು ಭೂಸಮಾಧಿಯಾಗಿರುವ ಐವರ ಪೈಕಿ ಆನಂದತೀರ್ಥ ಸ್ವಾಮೀಜಿ (86) ಮೃತದೇಹ ಶನಿವಾರ ಪತ್ತೆಯಾಗಿದೆ.
ಎಲ್ಲೆಲ್ಲಿ ಪ್ರವಾಹ ಸ್ಥಿತಿ?
ಪರಿಹಾರ ಪರಿಷ್ಕಾರ
ಬೆಂಗಳೂರು: ನೆರೆ ಸಂತ್ರಸ್ತರಿಗೆ ಪರಿಷ್ಕೃತ ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ವನಿಸಿದೆ. ಬಟ್ಟೆ,-ಬರೆ, ದಿನಬಳಕೆ ವಸ್ತುಗಳು ಹಾಗೂ ಮನೆ ಹಾನಿಗೆ ಪರಿಷ್ಕೃತ ಪರಿಹಾರ ಪ್ರಕಟಿಸಿದೆ. ಸಂತ್ರಸ್ತರ ಬಟ್ಟೆ-ಬರೆ, ದಿನಬಳಕೆ ವಸ್ತುಗಳಿಗೆ ಕೇಂದ್ರ ಸರ್ಕಾರ 3,800 ರೂ. ನಿಗದಿಪಡಿಸಿದರೆ, ರಾಜ್ಯ ಸರ್ಕಾರ 6,200 ರೂ.ಹೆಚ್ಚುವರಿ ಸೇರಿಸಿ 10 ಸಾವಿರ ರೂ. ಪರಿಹಾರ ನೀಡಲಿದೆ. ಮನೆ ಸಂಪೂರ್ಣ ಹಾನಿಗೆ 5 ಲಕ್ಷ: ಶೇ.75ಕ್ಕಿಂತ ಹೆಚ್ಚು ಅಥವಾ ಸಂಪೂರ್ಣ ಹಾನಿಯಾಗಿದ್ದಲ್ಲಿ ಹಾಗೂ ಶೇ.25 ರಿಂದ ಶೇ.75 ಹಾನಿಯಾಗಿ ಕೆಡವಿ ಹೊಸದಾಗಿ ನಿರ್ವಿುಸಲು ಕೇಂದ್ರ ಸರ್ಕಾರದ ಮಾರ್ಗಸೂಚಿ ದರ 95,100 ರೂ.ಆಗಿದೆ. ಇವಕ್ಕೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಪ್ರಕಟಿಸಿದೆ. ಶೇ.25 ರಂದ ಶೇ.75 ರವರೆಗೆ ಮನೆ ಹಾನಿಯಾಗಿದ್ದು ದುರಸ್ತಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ದರ 95,100 ರೂ. ಇದ್ದರೆ, ರಾಜ್ಯ ಸರ್ಕಾರ 3 ಲಕ್ಷ ರೂ. ನೀಡಲಿದೆ. ಶೇ.15 ರಿಂದ ಶೇ.25 ಅಲ್ಪಸ್ವಲ್ಪ ಮನೆ ಹಾನಿಯಾಗಿದ್ದಲ್ಲಿ ಕೇಂದ್ರ 5,200 ರೂ. ದರ ನಿಗದಿಪಡಿಸಿದರೆ, ರಾಜ್ಯ ಸರ್ಕಾರ 50 ಸಾವಿರ ರೂ. ನೀಡುವುದಾಗಿ ಆದೇಶ ಹೊರಡಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − one =
Remember me
