ಬೆಂಗಳೂರು:ದೇಶದಲ್ಲಿ ಮಳೆ ಕೊರತೆ ಮುಂದುವರಿದಿದ್ದು, ಅಕ್ಟೋಬರ್‌ನಲ್ಲೂ ಕಡಿಮೆ ಮಳೆಯಾಗಿದೆ. ವಾಡಿಕೆಯಂತೆ 75.4 ಮಿಮೀ ಮಳೆಯಾಗಬೇಕಿತ್ತು. ಆದರೆ, 50.8 ಮಿಮೀ ಮಳೆಯಾಗಿದ್ದು, ಶೇ.33 ಕೊರತೆ ಉಂಟಾಗಿದೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ 152.3 ಮಿಮೀಗೆ ಬದಲಾಗಿ 61.8 ಮಿಮೀ ಮಳೆ ಸುರಿದಿದ್ದು, ಇದು 5ನೇ ಬಾರಿ ಅತ್ಯಂತ ಕಡಿಮೆ ಮಳೆಯಾಗಿದೆ. 1918ರಲ್ಲಿ 47.9 ಮಿಮೀ, 1965ರಲ್ಲಿ 53.9 ಮಿಮೀ ಹಾಗೂ 1988ರಲ್ಲಿ 50.6 ಮೀಮೀ, 2016ರಲ್ಲಿ 55.1 ಮಿಮೀ ಮಳೆ ಸುರಿದಿತ್ತು. ದೇಶದಲ್ಲಿ ಅ.19ರಂದು ನೈಋತ್ಯ ಮಾನ್ಸೂನ್ ಕೊನೆಗೊಂಡಿದೆ. ಅ.21ರಿಂದ ದಕ್ಷಿಣ ಭಾರತದಲ್ಲಿ ಈಶಾನ್ಯ ಮಾನ್ಸೂನ್ ಪ್ರಾರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮಾಹಿತಿ ನೀಡಿದೆ.
ರಾಜ್ಯದಲ್ಲಿ ಈ ಬಾರಿ ನೈಋತ್ಯ ಮಾನ್ಸೂನ್ ತೀವ್ರವಾಗಿ ಕೈಕೊಟ್ಟಿತ್ತು. ಅ.1ರಿಂದ ಆರಂಭವಾಗಿರುವ ಈಶಾನ್ಯ ಮಾನ್ಸೂನ್ ದುರ್ಬಲಗೊಂಡ ಪರಿಣಾಮ ವಾಡಿಕೆ ಮಳೆ 131 ಮಿಮೀ ಬದಲಾಗಿ 41 ಮಿಮೀ ಮಳೆ ಬಿದ್ದಿದ್ದು, ಶೇ.67 ಮಳೆ ಕೊರತೆ ಉಂಟಾಗಿದೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಶೇ.90, ಕರಾವಳಿ ಜಿಲ್ಲೆಗಳಲ್ಲಿ ಶೇ.32 ಮಳೆ ಕೊರತೆಯಾದರೆ ದಕ್ಷಿಣ ಕರ್ನಾಟಕದಲ್ಲಿ ವಾಡಿಕೆಯಷ್ಟೇ ವರ್ಷಧಾರೆಯಾಗಿದೆ.
ಇದನ್ನೂ ಓದಿ:ಕೆ.ಎನ್.​ ರಾಜಣ್ಣ ಸಿಎಂ ಬದಲಾವಣೆ ಹೇಳಿಕೆಗೆ ಸಿದ್ದರಾಮಯ್ಯ ರಿಯಾಕ್ಷನ್​!
ಮೂರು ದಿನ ವ್ಯಾಪಕ ಮಳೆ:ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ವ್ಯಾಪಕವಾಗಿ ಮಳೆಯಾಗಲಿದೆ. ಕೊಡಗಿನಲ್ಲಿ ನ.4ರಿಂದ ನ.6ರವರೆಗೆ, ಚಾಮರಾಜನಗರ, ರಾಮನಗರ, ಮೈಸೂರಿನಲ್ಲಿ ನ.5 ಮತ್ತು ನ.6ರಂದು, ಚಿಕ್ಕಮಗಳೂರು, ಹಾಸನದಲ್ಲಿ ನ.6ರಂದು ಬಿರುಸಾಗಿ ಮಳೆ ಸುರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮುಂದಿನ 4 ದಿನ ಗುಡುಗು ಮಿಂಚು ಸಹಿತ ಸಾಧಾರಣ ಮಳೆ ಸುರಿಯಲಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳ ಮುಂದಿನ ಮೂರು ದಿನ ಹಗುರದಿಂದ ಕೂಡಿದ ತುಂತುರು ವರ್ಷಧಾರೆಯಾಗಲಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 + fifteen =
Remember me
