
ಬೆಂಗಳೂರು:ನಾಡಿನೆಲ್ಲಡೆ ಮಳೆರಾಯ ತಂಪೆರೆದ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆಯೂ ತಗ್ಗಿದೆ. ಕಳೆದ ಎರಡು ತಿಂಗಳಿಂದ ಏರು ಮುಖದಲ್ಲಿಯೇ ಸಾಗಿದ್ದು ವಿದ್ಯುತ್ ಬೇಡಿಕೆ 12 ಸಾವಿರ ಮೆವಾ ಆಜುಬಾಜಿಗೆ ಬಂದಿದೆ.ಮಳೆ ಕೈ ಕೊಟ್ಟಿದ್ದರಿಂದ ಪಂಪ್ ಸೆಟ್‌ಗಳನ್ನು ರೈತರು ವ್ಯಾಪಕವಾಗಿ ಬಳಸುತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಬೇಸಿಗೆ ವಾತಾವರಣ ನಿರ್ಮಾಣಗೊಂಡಿದ್ದ ಪರಿಣಾಮ ವಿದ್ಯುತ್ ಬೇಡಿಕೆ 15 ಸಾವಿರ ಮೆವಾ ದಾಟಿ ಹೋಗಿತ್ತು. ಜಲಾಶಯಗಳಲ್ಲಿಯೂ ನೀರಿಲ್ಲದ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆಗೆ ದೊಡ್ಡ ಸಮಸ್ಯೆಯೇ ಎದುರಾಗಿ ಅನಿಯಮಿತ ಪವರ್ ಕಟ್ ಅನಿವಾರ್ಯವಾಗಿತ್ತು.ಕಳೆದ ವರ್ಷ ವಿದ್ಯುತ್ ಬೇಡಿಕೆ 12,500 ಸಾವಿರ ಮೆವಾ ದಾಟಿ ಹೋಗಿದ್ದು ಅಪರೂಪ. ಆದರೆ ಈ ವರ್ಷ ಕನಿಷ್ಠ 2 ಸಾವಿರದಿಂದ 3 ಸಾವಿರ ಮೆವಾ ಬೇಡಿಕೆ ದಿಡೀರ್ ಹೆಚ್ಚಾಗಿದ್ದು ವಿದ್ಯುತ್ ಸರಬರಾಜು ನಿಭಾಯಿಸಲು ಇಂಧನ ಇಲಾಖೆ ಹರಸಾಹಸ ಮಾಡಿತು.ಬೆಸ್ಕಾಂನಲ್ಲಿ ಅತಿ ಹೆಚ್ಚು ಬೇಡಿಕೆ 4400 ಮೆವಾ, ಕಡಿಮೆ ವಿದ್ಯುತ್ ಬೇಡಿಕೆ ಮೆಸ್ಕಾಂನಲ್ಲಿ 753 ಮೆವಾ ದಾಖಲಾಗಿದೆ.
ಆಧಾರ್ ಲಿಂಕ್ ಮಾಡಲು ಸೂಚನೆರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡುತ್ತಿದ್ದು, ಅದರ ಆಡಿಟ್ ಆಗಬೇಕು ಎಂದು ಕೆಇಆರ್‌ಸಿ ಆದೇಶದಲ್ಲಿ ತಿಳಿಸಿದೆ. ಅದಕ್ಕೂ ಮೊದಲು ಎಲ್ಲಾ ಪಂಪ್ ಸೆಟ್ ಬಳಕೆದಾರರ ಆಧಾರ್ ನಂಬರ್ ಲಿಂಕ್ ಮಾಡಬೇಕು ಸೂಚಿಸಲಾಗಿದೆ. ಇದರ ಮೊದಲ ಕ್ರಮವಾಗಿ ಪಂಪ್ ಸೆಟ್ ಬಳಕೆದಾರರ ಮೀಟರ್ ನಂಬರ್‌ಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಮೀಟರ್ ಅಳವಡಿಕೆ ಬಗ್ಗೆ ಇನ್ನೂ ಯಾವುದೇ ಸೂಚನೆ ಬಂದಿಲ್ಲ ಎಂದು ಎಸ್ಕಾಂಗಳ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + nine =
Remember me
