ಬೆಂಗಳೂರು:ಮುಂದಿನ ಒಂದು ವಾರ ಸಾಧಾರಣೆ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.ಬುಧವಾರ ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಸೆಪ್ಟೆಂಬರ್ 20ರ ವರೆಗೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾದರೆ, ಉತ್ತರ ಮತ್ತು ದಕ್ಷಿಣ ಒಳನಾಡಿನ ಭಾಗದಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬರದಿಂದ ಬೆಳೆ ಪರಿಸ್ಥಿತಿಯೂ ಆಶಾದಾಯಕವಾಗಿಲ್ಲ. ಕೆಲವು ಕಡೆ ಬೆಳೆ ಚಿಗುರಿದೆ, ಆದರೆ ಇಳುವರಿ ಬರಲಿದೆಯೇ ಎಂಬ ಖಾತ್ರಿ ಇಲ್ಲ. ಈ ಕಾರಣಕ್ಕೆ ವೈಜ್ಞಾನಿಕ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯ ಮತ್ತು ಒಂದು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಲು ಸಂಪುಟ ಉಪ ಸಮಿತಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.ಕಂದಾಯ ಸಚಿವರ ನೇತೃತ್ವದ ಸಂಪುಟ ಉಪ ಸಮಿತಿ ಸಭೆ ಬುಧವಾರ ನಡೆದಿದ್ದು, ರಾಜ್ಯದಲ್ಲಿ ಕಳೆದೊಂದು ವಾರದಲ್ಲಿ ನಡೆಸಿದ್ದ ತಳಮಟ್ಟದ ಸಮೀಕ್ಷೆ ವರದಿ ಆಧರಿಸಿ 195 ತಾಲೂಕಲ್ಲಿ ಬರ ಇದೆ ಎಂದು ಘೋಷಣೆ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದೆ.ಜತೆಗೆ ಬರ ಘೋಷಣೆ ಬಳಿಕ ಮುಂದೆ ಮಾಡಬೇಕಾದ ತಯಾರಿ ಕುರಿತಂತೆಯೂ ಹಲವು ಶಿಫಾರಸುಗಳನ್ನು ಮಾಡಿದ್ದು, ಅದನ್ನು ತಡಮಾಡದೇ ಜಾರಿ ಮಾಡುವ ನಿಟ್ಟಿನಲ್ಲಿಯೂ ಸಲಹೆ ನೀಡಿದೆ. ಈ ಸರ್ಕಾರದ ವಾಡಿಕೆಯಂತೆ ಗುರುವಾರ ಸಂಪುಟ ಸಭೆ ನಡೆಯಬೇಕಿತ್ತು, ವಿವಿಧ ಕಾರಣದಿಂದ ಈ ವಾರ ಸಂಪುಟ ಸಭೆ ನಡೆಯುವುದಿಲ್ಲ, ಹೀಗಾಗಿ ಮುಖ್ಯಮಂತ್ರಿಯವರೆ ಸಂಪುಟ ಉಪ ಸಮಿತಿ ಸಭೆಯ ಶಿಾರಸು ಆಧರಿಸಿ ಗುರುವಾರ ಬರ ತಾಲೂಕುಗಳ ೋಷಣೆ ಮಾಡಲಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen − ten =
Remember me
