ಬೆಂಗಳೂರು:ರಾಜ್ಯದ ಕೆಲ ಜಿಲ್ಲೆಗಳಲ್ಲಿ ರೇವತಿ ಮಳೆ ಆರ್ಭಟ ಮುಂದು ವರಿದಿದ್ದು, ಬಿರುಗಾಳಿ ಸಹಿತ ಮಳೆಗೆ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆ, ಮನೆಗಳಿಗೆ ಹಾನಿಯಾಗಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಿವಿಧೆಡೆ ಅಡಕೆ, ತೆಂಗು, ಬಾಳೆ ಸೇರಿ ವಿವಿಧ ಬೆಳೆಗಳಿಗೆ ಹಾನಿಯಾಗಿದ್ದು, ಚಳ ಮಡು-ಹುಲಗಲಕುಂಟೆ ಗ್ರಾಮದಲ್ಲಿ ಗುಡಿಸಲು, ಸೀಟು ಮನೆಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ, ಬೀರೂರು ಭಾಗದಲ್ಲಿ ಧಾರಾಕಾರ ಮಳೆ ಬಿದ್ದರೆ, ಆಲ್ದೂರು-ಕಳಸ ಹಾಗೂ ಬೆಂಗಳೂರು ನಗರದಲ್ಲಿ ಉತ್ತಮ ವರ್ಷಧಾರೆಯಾಗಿದೆ.
ಕಡೂರು ತಾಲೂಕಿನ ಹಳೇಪೇಟೆಯಲ್ಲಿ 3 ಸಾವಿರ ಬಾಳೆ ಗಿಡಗಳು ಗಾಳಿ-ಮಳೆಗೆ ಗೊನೆಸಹಿತ ನೆಲಕ್ಕುರುಳಿವೆ. ಮುಂಡರಗಿ ಪಟ್ಟಣದಲ್ಲೂ ಗಾಳಿ-ಮಳೆಗೆ ಅನೇಕ ಕಡೆ ಬಾಳೆ ಗಿಡಗಳು ಮುರಿದುಬಿದ್ದಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಲಾಕ್​ಡೌನ್​ ನಿಯಮ ಗಾಳಿಗೆ ತೂರಿ ಬೇಕಾಬಿಟ್ಟಿ ಓಡಾಡುತ್ತಿದ್ದವರಿಗೆ ಗೃಹ ಸಚಿವರು, ಪೊಲೀಸ್​ ಆಯುಕ್ತರಿಂದ ಶಾಕ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
