ಬೆಂಗಳೂರು:ಈ ಬಾರಿ ಮುಂಗಾರು ಆಶಾದಾಯಕವಾಗಿದ್ದರೂ ಕಳೆದ 17 ದಿನಗಳಲ್ಲಿ ವಾಡಿಕೆಗಿಂತ ಶೇ.48 ಕಡಿಮೆ ಮಳೆಯಾಗಿದೆ. ಆ.1ರಿಂದ ಆ.17ರವರೆಗೆ ರಾಜ್ಯಾದ್ಯಂತ ಒಟ್ಟಾರೆ 139 ಮಿಮೀ ಮಳೆ ಬದಲಾಗಿ 73 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.48 ಕಡಿಮೆ ಮಳೆ ಸುರಿದಿದೆ. ಈ ಅವಧಿಯಲ್ಲಿ ರಾಮನಗರ ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗಿದೆ.
ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.23, ಉತ್ತರ ಒಳನಾಡಲ್ಲಿ ಶೇ.55, ಮಲೆನಾಡಲ್ಲಿ ಶೇ.49 ಹಾಗೂ ಕರಾವಳಿಯಲ್ಲಿ ಶೇ.48 ಕಡಿಮೆ ಮಳೆ ಬಿದ್ದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.
ಶೇ.8ಕೊರತೆ:ಜೂ.1ರಿಂದ ಆ.17ರವರೆಗೆ ರಾಜ್ಯಾದ್ಯಂತ ಒಟ್ಟಾರೆ 609 ಮಿಮೀ ಮಳೆಯಾಗುವ ಬದಲು 561 ಮಿಮೀ ಮಳೆ ಸುರಿದಿದ್ದು, ಶೇ.8 ಕುಂಠಿತವಾಗಿದೆ. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗದಲ್ಲಿ ವಾಡಿಕೆಗಿಂತ ಶೇ.17, ಹಾಸನದಲ್ಲಿ ಶೇ.14, ಕೊಡಗಿನಲ್ಲಿ ಶೇ.28, ಚಿಕ್ಕಮಗಳೂರಿನಲ್ಲಿ ಶೇ.20, ಕರಾವಳಿಯ ದಕ್ಷಿಣಕನ್ನಡದಲ್ಲಿ ಶೇ.33, ಉಡುಪಿಯಲ್ಲಿ ಶೇ. 24, ಉತ್ತರ ಕನ್ನಡದಲ್ಲಿ ಶೇ.10 ಹಾಗೂ ದಕ್ಷಿಣ ಒಳನಾಡಿನ ಮೈಸೂರಿನಲ್ಲಿ ಶೇ. 19 ಕಡಿಮೆ ಮಳೆ ಬಿದ್ದಿದೆ.
ದಕ್ಷಿಣ ಒಳನಾಡಿನ ಮೈಸೂರು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ವಾಡಿಕೆಕ್ಕಿಂತ ಹೆಚ್ಚು ಮಳೆಯಾಗಿದೆ. ಜೂನ್ ಮತ್ತು ಜುಲೈನಲ್ಲಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಆದರೆ, ಆಗಸ್ಟ್‌ನಲ್ಲಿ ಮಾರುತಗಳು ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದರು.
ಮದ್ವೆಯಾಗಿ 8 ವರ್ಷಗಳಾದ್ರೂ ಮಕ್ಕಳಾಗಿಲ್ಲ ಎಂದು ವಿಷ ಕುಡಿದ ಮಹಿಳೆ; 2 ದಿನ ಆಸ್ಪತ್ರೆಯಲ್ಲಿ ಒದ್ದಾಡಿ ಸಾವು…

ಕಳೆದು ಹೋದ ಮೊಬೈಲ್​ಫೋನ್​ಗಾಗಿ ಗುಂಪು ಕಟ್ಟಿಕೊಂಡು ಬಂದು ಹಲ್ಲೆ; ಫೋನ್​ ಕಳ್ಕೊಂಡವನೊಬ್ಬ, ಪ್ರಾಣ ಕಳ್ಕೊಂಡಿದ್ದು ಮತ್ತೊಬ್ಬ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
