ಬಾಗಲಕೋಟೆ:ತೆಂಗಿನ ಕಾಯಿ ಮಾರಾಟ ಮಾಡಿದ ಖುಷಿಯಲ್ಲಿ ಹಣದೊಂದಿಗೆ ಮನೆಗೆ ವಾಪಸ್ ಆಗುತ್ತಿದ್ದ ರೈತನೊಬ್ಬ ಮಾರ್ಗಮಧ್ಯೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇನ್ನೂ ಪತ್ತೆಯಾಗಿಲ್ಲ.
​ರಾಜ್ಯಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಹಳ್ಳ-ಕೊಳ್ಳ, ಸೇತುವೆ, ನದಿಗಳು ತುಂಬಿಹರಿಯುತ್ತಿವೆ. ಕೃಷಿ ಜಮೀನು, ನದಿ ಪಾತ್ರದ ಗ್ರಾಮಗಳು ಜಲಾವೃತವಾಗಿದ್ದು, ಹಲವಡೆ ಜನಜೀವನ ಮೂರಬಟ್ಟೆಯಾಗಿದೆ. ಈ ನಡುವೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ರೈತ ಬಾಪುಗೌಡ ಸಾಲಿಗೌಡ್ರ (40) ಮಲಪ್ರಭಾ ನದಿ ನೀರಿಲ್ಲಿ ಕೊಚ್ಚಿಹೋಗಿದ್ದಾರೆ.
ಇದನ್ನೂ ಓದಿರಿVIDEO| ಮಳೆ ಸುರಿಯುತ್ತಿದ್ದರೂ ನಂದಿಬೆಟ್ಟಕ್ಕೆ ಲಗ್ಗೆ ಇಟ್ಟ ಪ್ರವಾಸಿಗರು
ಬಾಪುಗೌಡ ಸಾಲಿಗೌಡ್ರ ಅವರು ತೆಂಗಿನಕಾಯಿ ಮಾರಾಟ ಮಾಡಲು ಕೊಣ್ಣೂರಿನಿಂದ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮಕ್ಕೆ ಬಂದಿದ್ದರು. ಕಾಯಿ ಮಾರಾಟ ಮಾಡಿ ಸ್ವಗ್ರಾಮಕ್ಕೆ ವಾಪಸ್​ ಹೋಗುತ್ತಿದ್ದರು. ಇವರ ಜತೆಗೆ ಮತ್ತೊಬ್ಬರು ಇದ್ದರು. ಈ ವೇಳೆ ಗೋವನಕೊಪ್ಪ-ಕೊಣ್ಣೂರು ಕಿರು ಸೇತುವೆ ದಾಟುವಾಗ ತುಂಬಿ ಹರಿಯುತ್ತಿದ್ದ ಮಲಪ್ರಭಾ ನದಿ ನೀರಲ್ಲಿ ನೋಡನೋಡುತ್ತಿದ್ದಂತೆ ಬಾಪುಗೌಡ ಸಾಲಿಗೌಡ್ರ‌ ಕೊಚ್ಚಿಕೊಂಡು ಹೋಗಿದ್ದಾರೆ.
ಸ್ಥಳಕ್ಕೆ ಬಾದಾಮಿ ತಹಸೀಲ್ದಾರ್ ಸುಹಾಸ್ ಇಂಗಳೆ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೀರಿನಲ್ಲಿ ನಾಪತ್ತೆಯಾಗಿರುವ ರೈತ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದೆ.
ಹಿಂದು ಎಂಬುದು ಧರ್ಮವೇ ಅಲ್ಲ; ಮತ್ತೊಂದು ವಿವಾದದ ಕಿಡಿ ಹಚ್ಚಿದ ಪ್ರೊ.ಭಗವಾನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 3 =
Remember me
