ಬೆಂಗಳೂರು:ಮೈದುಂಬಿ ಹರಿಯುತ್ತಿವೆ ಜಲಾಶಯಗಳು, ಭೋರ್ಗರೆಯುತ್ತಿರುವ ಜಲಪಾತಗಳು, ಕಣ್ಮನ ಸೆಳೆಯುತ್ತಿವೆ ನದಿಗಳ ನೀರಿನ ಝರಿ, ಭೂಲೋಕದ ಸ್ವರ್ಗದಂತೆ ಕಾಣುತ್ತಿರುವ ಗಿರಿಧಾಮಗಳು… ಇದು ವರುಣಾರ್ಭಟದಿಂದ ರಾಜ್ಯದ ಬಹುತೇಕ ಜಲಾಶಯಗಳು, ಜಲಪಾತಗಳು, ನದಿಗಳು ಹಾಗೂ ಕೆರೆ ಕುಂಟೆಗಳು ಮೈದುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕಣ್ಣಿಗೆ ಕಾಣುತ್ತಿರುವ ನಯನ ಮನೋಹರ ದೃಶ್ಯಗಳಿವು.
ಕೆಆರ್‌ಎಸ್, ಕಬಿನಿ, ತುಂಗಭದ್ರಾ, ಆಲಮಟ್ಟಿ, ಭದ್ರಾ, ಘಟಪ್ರಭಾ, ಮಲಪ್ರಭಾ, ಹೇಮಾವತಿ, ವರಾಹಿ, ಹಾರಂಗಿ, ಲಿಂಗನಮುಕ್ಕಿ, ಸೂಪಾ ಮತ್ತು ನಾರಾಯಣಪುರ ಸೇರಿ ಇತರೆ ಜಲಾಶಯಗಳು ಭರ್ತಿಯಾಗಿದ್ದು, ಇವುಗಳ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ವಿಶ್ವ ಪ್ರಸಿದ್ಧ ಜೋಗ್ ಜಲಪಾತ, ಕುಂಚಿಕಲ್, ಹಿಡ್ಲುಮನೆ, ದಬ್ಬೆ, ಬರ್ಕಣ, ಅಚಕನ್ಯ, ಬಾಳೆಬರೆ, ಕೊಡಗು ಜಿಲ್ಲೆಯ ಮಲಳ್ಳಿ ಜಲಪಾತ, ಇರ್ಪು, ಅಬ್ಬೆ, ಚೇಲಾವರ, ಮಾದಂಡಹಬ್ಬಿ, ಚಿಕ್ಕಮಗಳೂರಿನ ಕಲ್ಲತಗಿರಿ, ಸಿರಿಮನೆ, ಹೆಬ್ಬೆ, ಮಾಣಿಕ್ಯಧಾರ, ಶಾಂತಿ, ಹನುಮಾನ್ ಗುಂಡಿ, ಉತ್ತರ ಕನ್ನಡ ಜಿಲ್ಲೆಯ ಮಾಗೋಡು, ಉಂಚಳ್ಳಿ, ಸಾತೋಡಿ,ಬೆಣ್ಣೆಹೊಳೆ, ಬುರುಡೆ ಜೋಗ, ವಿಭೂತಿ, ಶಿವಗಂಗೆ, ಲಾಲ್ಗುಳಿ, ಅಣಶಿ, ಅಪ್ಸರಕೊಂಡ, ಚಾಮರಾಜನಗರ ಮತ್ತು ಮಂಡ್ಯ ಗಡಿ ಭಾಗದಲ್ಲಿರುವ ಗಗನಚುಕ್ಕಿ ಮತ್ತು ಭರಚುಕ್ಕಿ, ಮೈಸೂರು ಜಿಲ್ಲೆಯ ಚುಂಚನಕಟ್ಟೆ, ಬೆಳಗಾವಿಯ ಗೋಕಾಕ ಜಲಪಾತ, ರಾಯಚೂರಿನ ಛಾಯ ಭಗವತಿ, ದಕ್ಷಿಣ ಕನ್ನಡದ ಬಂಡಾಜೆ ಸೇರಿ ಇತರೆ ಜಲಪಾತಗಳು ಭೋರ್ಗರೆಯುತ್ತಿವೆ. ರಮಣೀಯ ದೃಶ್ಯಗಳು ಕಣ್ಣಿಗೆ ರಾಚುತ್ತಿದ್ದು, ಜಲಪಾತಗಳು ಧುಮ್ಮಿಕ್ಕಿ ಹರಿಯುವುದನ್ನು ನೋಡಲು ದಿನದಿಂದ ದಿನಕ್ಕೆ ಪ್ರವಾಸಿಗರು ಸಂಖ್ಯೆ ಹೆಚ್ಚುತ್ತಿದೆ.
ಪ್ರಾಕೃತಿಕ ಸೊಬಗು:ಕಾವೇರಿ, ಗೋದಾವರಿ, ಕೃಷ್ಣಾ, ಉತ್ತರ ಪಿನಾಕಿ, ದಕ್ಷಿಣ ಪಿನಾಕಿನಿ, ಪಾಲಾರ, ಘಟಪ್ರಭಾ, ಅರ್ಕಾವತಿ, ಮಲಪ್ರಭಾ, ಗುರುಪುರ ನದಿ, ವೇದಾವತಿ, ನೇತ್ರಾವತಿ, ಎತ್ತಿನಹೊಳೆ, ಭದ್ರಾ, ಶಿಂಶಾ, ಭೀಮ, ಸುವರ್ಣವತಿ, ಮಹಾದಾಯಿ, ಕಾಳೀ, ಗಂಗವಳ್ಳಿ, ಚಕ್ರಾ, ವರಾಹಿ, ಮಂಜಿರಾ ಹಾಗೂ ಕಾಗಿನಿ ನದಿಗಳು ತುಂಬಿ ಹರಿಯುತ್ತಿವೆ. ನದಿಗಳ ನೀರಿನ ಝರಿ ಎಲ್ಲರ ಕಣ್ಮನ ಸೆಳೆಯುತ್ತಿವೆ. ಮಲೆನಾಡು ಮತ್ತು ಕರಾವಳಿ ಪ್ರದೇಶಗಳ ಪ್ರಕೃತಿ ಸೌಂದರ್ಯ ತಾಣಗಳು ಭೂಲೋಕದ ಸ್ವರ್ಗದಂತೆ ಕಾಣುತ್ತಿವೆ. ಮಳೆಯನ್ನೂ ಲೆಕ್ಕಿಸದೆ ಕೆಲ ಪ್ರವಾಸಿಗರು ಪ್ರಾಕೃತಿಕ ಸೊಬಗನ್ನು ಸವಿಯಲು ಕೊಡಗು, ಮುಳ್ಳಯ್ಯನಗಿರಿ, ಕುದುರೆಮುಖ, ಆಗುಂಬೆ, ನಂದಿ ಬೆಟ್ಟ ಮತ್ತು ಕೊಡಚಾದ್ರಿ ಸೇರಿ ಇತರೆ ಗಿರಿಧಾಮಗಳಿಗೆ ಭೇಟಿ ನೀಡುತ್ತಿದ್ದಾರೆ.
ಮಕ್ಕಳ ಬಗ್ಗೆ ಎಚ್ಚರ:ನದಿಗಳು, ಜಲಾಶಯಗಳು ಹಾಗೂ ಕೆರೆಕುಂಟೆಗಳು ಭರ್ತಿಯಾದ ಹಿನ್ನೆಲೆಯಲ್ಲಿ ಪಾಲಕರು ತಮ್ಮ ಮಕ್ಕಳ ಬಗ್ಗೆ ಎಚ್ಚರಿಸಬೇಕು. ನದಿ ತೀರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ಪ್ರವಾಹ ಬಗ್ಗೆ ಜಾಗೃತಿವಹಿಸಬೇಕು. ಅಧಿಕಾರಿಗಳ ಹೊರಡಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಬಗ್ಗೆ ಪ್ರವಾಸಿಗರೂ ಎಚ್ಚರವಹಿಸುವುದು ಸೂಕ್ತ. ಅಪಾಯ ಸ್ಥಳಗಳಿಗೆ ತೆರಳಬಾರದು.
ಇನ್ನೂ 5 ದಿನ ಮಳೆ:ರಾಜ್ಯದ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂದಿನ 5 ದಿನ ಮುಂದುವರಿಯಲಿದೆ. ಭಾನುವಾರ ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಭಾಗಗಳಲ್ಲಿ ಭಾರಿ ವರ್ಷಧಾರೆಯಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಕೊಟ್ಟಿದೆ. ಅಲ್ಲದೆ, ಈ ಭಾಗಗಳಲ್ಲಿ ಆ.10 ಮತ್ತು ಆ.11ರಂದು ಯೆಲ್ಲೋ ಅಲರ್ಟ್ ಇರಲಿದೆ. ಬೆಳಗಾವಿ, ಕಲಬುರಗಿ, ಬೀದರ್‌ನಲ್ಲಿ ಆ.8, 9ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಅಗಾಗ್ಗೆ ಚದುರಿದಂತೆ ಮಳೆ ಬೀಳಲಿದೆ. ಸಮುದ್ರದಲ್ಲಿ ಮೀನುಗಾರಿಕೆ ತೆರಳದಂತೆ ಮೀನುಗಾರರಿಕೆ ಇಲಾಖೆ ಎಚ್ಚರಿಕೆ ನೀಡಿದೆ.
ಮಬ್ಬು ಕವಿದ ಮಾರ್ಗ, 35 ಪ್ರಯಾಣಿಕರಿದ್ದ ಬಸ್​ ಪಲ್ಟಿ​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 6 =
Remember me
