ಬೆಂಗಳೂರು:ವೃಷಭಾವತಿ ಕಣಿವೆ ಏತ ನೀರಾವರಿ ಯೋಜನೆಯಡಿ ಕೆರೆಗಳ ಭರ್ತಿ ಕಾಮಗಾರಿ ತ್ವರಿತವಾಗಿ ಜಾರಿಗೊಳಿಸಲು ಕ್ರಮವಹಿಸಲಾಗಿದೆ. ಮೂರು ಹಂತದಲ್ಲಿ ಯೋಜನೆ ಕಾಮಗಾರಿ ಕೈಗೆತ್ತಿಕೊಂಡು ಎರಡು ವರ್ಷಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾಹಿತಿ ನೀಡಿದರು.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಶನಿವಾರ ಕರೆದಿದ್ದ ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಸಮಕ್ಷಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಣ್ಣ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದ ವೃಷಭಾವತಿ ವ್ಯಾಲಿ ಏತ ನೀರಾವರಿಯಿಂದ ಪ್ರತಿದಿನ 243 ದಶಲಕ್ಷ ಲೀಟರ್ ನೀರು ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬುವುದು ಯೋಜನೆ ಉದ್ದೇಶವಾಗಿದೆ.
ಯೋಜನೆಯಡಿ ಒಟ್ಟು 259 ಕೆರೆಗಳ ಭರ್ತಿ ಮಾಡಲಿದ್ದು, ಒಟ್ಟು 1081 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಮೊದಲ ಹಂತದಲ್ಲಿ 70 ಕೆರೆಗಳ ಭರ್ತಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರವೇ ಕೆಲಸದ ಆದೇಶ ನೀಡಿ ಕಾಮಗಾರಿಗೆ ಚಾಲನೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಎರಡನೇ ಹಂತದಲ್ಲಿ 67 ಹಾಗೂ ಮೂರನೇ ಹಂತದಲ್ಲಿ 122 ಕೆರೆಗಳನ್ನು ತುಂಬಬೇಕೆಂದಿದೆ. ಒಟ್ಟು ಯೋಜನಾ ವೆಚ್ಚಕ್ಕೆ ಬಜೆಟ್‌ನಲ್ಲಿ ಅನುಮೋದನೆ ಲಭಿಸಿದೆ. ಯೋಜನೆ ಪೂರ್ಣಗೊಳಿಸಲು ಎರಡು ವರ್ಷಗಳ ಕಾಲಮಿತಿ ವಿಧಿಸಲಾಗಿದೆ ಎಂದರು.
ಎಚ್.ಎನ್.ವ್ಯಾಲಿ ಏತ ನೀರಾವರಿ ಯೋಜನೆಯಡಿ ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ 65 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದ್ದು, ಕಾಮಗಾರಿ ಚುರುಕುಗೊಳಿಸಲು ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ.
ಕೆ.ಸಿ.ವ್ಯಾಲಿಯಡಿ ಮೊದಲ ಹಂತದಲ್ಲಿ 126 ಎರಡನೇ ಹಂತದಲ್ಲಿ 272 ಕೆರೆಗಳ ಭರ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಮೊದಲ ಹಂತದ ಕಾಮಗಾರಿ ಮುಗಿದು ಕೆರೆಗಳನ್ನು ತುಂಬಲಾಗಿದೆ.ಎರಡನೇ ಹಂತದಡಿ ಹೆಬ್ಬಾಳ-ನಾಗವಾರ ವ್ಯಾಪ್ತಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಕೆರೆಗಳ ಭರ್ತಿ ಮಾಡಿದ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಕೆರೆಗೆ ತುಂಬಿದ ನೀರಿನ ಬಗ್ಗೆ ವಿಜ್ಞಾನಿಗಳಿಂದ ರೈತರ ಸಮಕ್ಷಮ ಪರೀಕ್ಷೆ ಮಾಡಿಸಿ ಸಂಶಯ ನಿವಾರಿಸಲಾಗಿದೆ ಎಂದು ಎನ್.ಎಸ್.ಬೋಸರಾಜು ತಿಳಿಸಿದರು.
ಬೆಂಗಳೂರಿನ ಕೊಳಚೆ ನೀರು ಎರಡು ಹಂತದಲ್ಲಿ ಸಂಸ್ಕರಿಸಿ ಕೆರೆಗಳ ಭರ್ತಿ ಯೋಜನೆಯು ನದಿಗಳ ಮೂಲವಿಲ್ಲದ ಬಯಲುಸೀಮೆ ಜಿಲ್ಲೆಗಳಲ್ಲಿ ವರದಾನವಾಗಿದೆ ಎಂದು ಸಚಿವ ಮುನಿಯಪ್ಪ ಹೇಳಿದರು.
ವೃಷಭಾವತಿ ವ್ಯಾಲಿಯಡಿ ಬೆಂಗಳೂರು ನಗರ, ಗ್ರಾಮಾಂತರ, ಭಾಗಶಃ ತುಮಕೂರು ಜಿಲ್ಲೆಗಳ 70 ಕೆರೆಗಳು ಮೊದಲ ಹಂತದಲ್ಲಿ ಭರ್ತಿಯಾಗಲಿವೆ. ಕೆ.ಸಿ.ವ್ಯಾಲಿ ಹಾಗೂ ಎಚ್.ಎನ್.ವ್ಯಾಲಿ ಏತ ನೀರಾವರಿ ಯೋಜನೆಯಡಿ ಕೆರೆಗಳ ಭರ್ತಿ ಉತ್ತಮ ಫಲಿತಾಂಶ ನೀಡಿದೆ. ಅಂತರ್ಜಲ 50 ವರ್ಷಗಳ ಹಿಂದಿದ್ದಮಟ್ಟಕ್ಕೆ ಮರಳಿರುವುದು ಸಮಾಧಾನ ತಂದಿದೆ ಎಂದರು.
ಅಂತರ್ಜಲಮಟ್ಟ ಹೆಚ್ಚಳಕ್ಕಾಗಿಯೇ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ನಗರ ಮತ್ತು ತುಮಕೂರು ಜಿಲ್ಲೆಗಳ ಬಯಲು ಸೀಮೆ ಕೆರೆಗಳು ಭರ್ತಿಯಾಗುತ್ತಿವೆ. ಆದರೆ ಈ ನೀರು ನೇರವಾಗಿ ಕೃಷಿಗೆ ಬಳಸಲು ಅವಕಾಶವಿಲ್ಲ.
ಇದರಿಂದಾಗಿ ನಿರೀಕ್ಷೆಗೆ ಮೀರಿದ ಫಲಿತಾಂಶ ದೊರೆತಿದೆ. ಅಂತರ್ಜಲ ಕುಸಿದು 1200 ಅಡಿಗಳವರೆಗೆ ಕೊಳವೆ ಬಾವಿ ಕೊರೆದರೂ ನೀರು ಬರುತ್ತಿದ್ದಿಲ್ಲ. ಈಗ 300 ಅಡಿಗಳಿಗೆ ನೀರು ಲಭ್ಯವಾಗುತ್ತಿದ್ದು, ರೈತರು ಖುಷಿಯಾಗಿದ್ದಾರೆ ಎಂದು ಮುನಿಯಪ್ಪ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
