ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಜಲಾಶಯಗಳ ಸ್ಥಿತಿ ಉತ್ತಮವಾಗಿದೆ. 564 ಮೀಟರ್ ಗರಿಷ್ಠ ಸಂಗ್ರಹಣೆ ಸಾಮರ್ಥ್ಯ ಹೊಂದಿರುವ ಕಾಳಿ ಜಲ ವಿದ್ಯುತ್ ಯೋಜನೆಯ ಪ್ರಮುಖ ಜಲಾಶಯ ಸೂಪಾದಲ್ಲಿ ಈಗಾಗಲೇ 540 ಮೀಟರ್ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 532.88 ಮೀಟರ್ ನೀರಿತ್ತು. ಕಾಳಿ ಯೋಜನೆಯ ಕೊಡಸಳ್ಳಿ ಜಲಾಶಯದಲ್ಲಿ 75.50 ಮೀ., 34.50 ಮೀಟರ್ ಗರಿಷ್ಠ ಸಂಗ್ರಹಣೆ ಸಾಮರ್ಥ್ಯವಿರುವ ಕದ್ರಾ ಜಲಾಶಯದಲ್ಲಿ ಇದುವರೆಗೆ 31.11 ಮೀಟರ್ ನೀರು ಸಂಗ್ರಹವಾಗಿದೆ. ಕದ್ರಾದಲ್ಲಿ ಕಳೆದ ವರ್ಷ ಈ ಅವಧಿಗೆ 30.05 ಮೀಟರ್ ನೀರಿತ್ತು. ಶರಾವತಿ ಜಲವಿದ್ಯುತ್ ಯೋಜನೆಗೆ ಸೇರಿದ ಗೇರುಸೊಪ್ಪ ಜಲಾಶಯದಲ್ಲಿ ಗರಿಷ್ಠ 55 ಮೀಟರ್ ನೀರು ಸಂಗ್ರಹಣೆಯ ಸಾಮರ್ಥ್ಯವಿದ್ದು, ಇದುವರೆಗೆ 50.44 ಮೀಟರ್ ನೀರು ತುಂಬಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಾ ಜಲಾಶಯಗಳಲ್ಲಿ ಈ ಬಾರಿ ಕಳೆದ ವರ್ಷದ ಇದೇ ಅವಧಿಗಿಂತ ಉತ್ತಮವಾಗಿದೆ. ಮುಂಗಾರು ಪೂರ್ವ ಮಳೆ ಹೆಚ್ಚಾಗಿದ್ದು ಹಾಗೂ ಮುಂಗಾರು ಮಳೆ ಸಮರ್ಪಕವಾಗಿ ಬೀಳುತ್ತಿರುವ ಪರಿಣಾಮ ಜಲಾಶಯದ ನೀರಿನ ಸಂಗ್ರಹದಲ್ಲೂ ಏರಿಕೆಯಾಗಿದೆ. ಕಳೆದ ವರ್ಷ ಲಿಂಗನಮಕ್ಕಿಯಲ್ಲಿ 1,766 ಅಡಿ ನೀರಿತ್ತು. ಈ ವರ್ಷ ಜಲಾಶಯದ ನೀರಿನ ಸಂಗ್ರಹ 1,788.10 ಅಡಿಗೆ ತಲುಪಿದೆ. ಗಾಜನೂರಿನ ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, 41 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಕಳೆದ ವರ್ಷದ ಈ ಅವಧಿಯಲ್ಲೂ ಜಲಾಶಯ ಭರ್ತಿಯಾಗಿತ್ತು. ಭದ್ರಾ ಜಲಾಶಯದ ಸ್ಥಿತಿ ಕಳೆದ ವರ್ಷಕ್ಕಿಂತಲೂ ಉತ್ತಮವಾಗಿದ್ದು, ಕಳೆದ ವರ್ಷ 148 ಅಡಿ ನೀರು ಸಂಗ್ರಹವಾಗಿತ್ತು. ಪ್ರಸ್ತುತ ಜಲಾಶಯದ ನೀರಿನ ಸಂಗ್ರಹ 159 ಅಡಿಗೆ ಏರಿಕೆಯಾಗಿದೆ.
ಕೆಆರ್​ಎಸ್ ಅಣೆಕಟ್ಟೆಯಲ್ಲಿ ಕಳೆದ ವರ್ಷ ಹೋಲಿಸಿದರೆ ಈ ಬಾರಿ ಸುಮಾರು 15 ಅಡಿ ನೀರಿನ ಕೊರತೆ ಇದೆ. 124.80 ಅಡಿ ಗರಿಷ್ಠ ನೀರು ಸಂಗ್ರಹದ ಡ್ಯಾಂನಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ 104.46 ಅಡಿ ನೀರಿನ ಸಂಗ್ರಹವಿತ್ತು. ಈ ವರ್ಷ ಪ್ರಸ್ತುತ 93.30 ಅಡಿ ನೀರಿನ ಸಂಗ್ರಹವಿದೆ. ಈಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಆಗಲಿಲ್ಲ. ಪರಿಣಾಮ ನೀರಿನ ಕೊರತೆ ಇದೆ. ಕಳೆದ ಮೂರ್ನಾಲ್ಕು ದಿನದಿಂದ ಉತ್ತಮ ಮಳೆಯಾಗುತ್ತಿದ್ದು, ಡ್ಯಾಂಗೆ ಹೆಚ್ಚಿಗೆ ಅಲ್ಲದಿದ್ದರೂ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿವು ಬರುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆ ಇದೆ. ಉಳಿದಂತೆ 2,859 ಅಡಿ ನೀರು ಸಂಗ್ರಹ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ, ಪ್ರಸ್ತುತ 2857.36 ಅಡಿ ಇದೆ. ಕಳೆದ ವರ್ಷ ಇದೇ ದಿನ 2851.52 ಅಡಿ ಇತ್ತು. 2922 ಅಡಿ ನೀರು ಸಂಗ್ರಹ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ 2891.62 ಅಡಿ ನೀರಿತ್ತು. ಪ್ರಸ್ತುತ 2901.45 ಅಡಿ ನೀರಿದೆ. ಇನ್ನು 2284 ಅಡಿ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯ ಭರ್ತಿಗೆ 4 ಅಡಿ ಬಾಕಿ ಇದೆ. ಕಳೆದ ವರ್ಷ ಇದೇ ದಿನ 2270.90 ಅಡಿ ನೀರಿತ್ತು.
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 100.855 ಟಿಎಂಸಿ ಇದ್ದು, ಸದ್ಯ 36.916 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ 13 ಟಿಎಂಸಿ ಹೆಚ್ಚು ನೀರು ಸಂಗ್ರಹವಾಗಿದೆ. ಒಳ ಹರಿವು ಹೀಗೆಯೇ ಮುಂದುವರಿದರೆ ಕಳೆದ ವರ್ಷಕ್ಕಿಂತ ಬೇಗ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
ಮುಂಗಾರು ವರ್ಷಧಾರೆ ಸತತವಾಗಿ ಮಹಾರಾಷ್ಟ್ರ ಕಣಿವೆ ಪ್ರದೇಶದಲ್ಲಿ ಬೀಳುತ್ತಿರುವ ಹಿನ್ನೆಲೆ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಹರಿವು ಅಧಿಕವಾಗಿದೆ. 519.60 ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 517.69 ಮೀಟರ್​ನಷ್ಟಿದೆ. ಒಳ ಹರಿವು 51,024, ಹೊರ ಹರಿವು 32,552 ಕ್ಯೂಸೆಕ್​ನಷ್ಟಿದೆ. 123.081 ಟಿಎಂಸಿಯ ಒಟ್ಟು ಸಾಮರ್ಥ್ಯ ಜಲಾಶಯದಲ್ಲಿ 93.258 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯದ ನೀರಿನ ಮಟ್ಟ ಕಳೆದ ವರ್ಷ ಇದೇ ದಿನಕ್ಕೆ ಹೋಲಿಸಿದರೆ 517.50 ಮೀಟರ್​ನಷ್ಟಿತ್ತು. ಯಾದಗಿರಿ ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿದ್ದು, ಸಂಗ್ರಹ ಮಟ್ಟ ಕಾಯ್ದುಕೊಂಡು ಕ್ರಸ್ಟ್​ಗೇಟ್​ಗಳ ಮೂಲಕ ಕೃಷ್ಣೆ ಒಡಲಿಗೆ ನೀರು ಹರಿಬಿಡಲಾಗುತ್ತಿದೆ. 492.252 ಮೀ. ಗರಿಷ್ಠ ಮಟ್ಟದ ಬಸವಸಾಗರದಲ್ಲಿ 491.48 ಮೀ. ನೀರಿದೆ.
ಸತತ ಮಳೆಯಿಂದ ಬೆಳಗಾವಿ ಜಿಲ್ಲೆಯ ಘಟಪ್ರಭಾ ಮತ್ತು ಮಲಪ್ರಭಾ ಜಲಾಶಯಗಳ ಒಳಹರಿವು ಪ್ರಮಾಣ ಹೆಚ್ಚುತ್ತಿದ್ದು, 48 ಗಂಟೆಗಳ ಅವಧಿಯಲ್ಲಿ ಎರಡೂ ಜಲಾಶಯಗಳಿಗೆ ಬರೋಬ್ಬರಿ ಐದು ಟಿಎಂಸಿ ನೀರು ಹರಿದು ಬಂದಿದೆ. ಘಟ ಪ್ರಭಾ ನದಿಯ ಹಿಡಕಲ್ ಜಲಾಶಯ 51 ಟಿಎಂಸಿ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಜಲಾಶಯದಲ್ಲಿ 26.96 ಟಿಎಂಸಿ (2139.88 ಅಡಿ) ನೀರು ಸಂಗ್ರಹವಿದೆ. ಭರ್ತಿಗೆ 25 ಟಿಎಂಸಿ (36 ಅಡಿ)ಬಾಕಿ ಇದೆ. ಮಲಪ್ರಭಾ ನದಿಯ ನವಿಲುತೀರ್ಥ ಜಲಾಶಯ 37.73 ಟಿಎಂಸಿ ಸಾಮರ್ಥ್ಯ ಹೊಂದಿದೆ. ಪ್ರಸ್ತುತ 19.98 ಟಿಎಂಸಿ (2,064 ಅಡಿ) ನೀರು ಸಂಗ್ರಹವಿದೆ. ಭರ್ತಿಗೆ 17.75 ಟಿಎಂಸಿ (15.5 ಅಡಿ) ಬಾಕಿ ಉಳಿದಿದೆ.
7.69 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಬೀದರ್ ಜಿಲ್ಲೆಯ ಕಾರಂಜಾ ಜಲಾಶಯದಲ್ಲಿ 6.10 ಟಿಎಂಸಿ ನೀರಿದೆ. ಕಳೆದೊಂದು ವಾರದಲ್ಲೇ 1 ಟಿಎಂಸಿ ನೀರು ಹರಿದುಬಂದಿದೆ. ಜಲಾಶಯ ಮೇಲ್ಭಾಗದ ತೆಲಂಗಾಣದ ಕೋಹಿರ್ ವ್ಯಾಪ್ತಿಯಲ್ಲಿ ಮಳೆ ಬರುತ್ತಿದ್ದರಿಂದ ಅಧಿಕ ನೀರು ಬರುತ್ತಿದೆ. ಕೋಹಿರ್ ಹತ್ತಿರದ ಅಣೆಕಟ್ಟಿನಿಂದ ನದಿಗೆ ಹರಿಬಿಡುವ ನೀರು ಕಾರಂಜಾ ಒಡಲು ಸೇರುತ್ತಿದೆ. ಮೂರ್ನಾಲ್ಕು ದಿನದಲ್ಲಿ ಕಾರಂಜಾ ಭರ್ತಿಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಈ ಅವಧಿಯಲ್ಲಿ ಜಲಾಶಯದಲ್ಲಿ ಕೇವಲ 2 ಟಿಎಂಸಿ ನೀರಿತ್ತು. ಆದರೆ ಅಕ್ಟೋಬರ್​ನಲ್ಲಿ ಅತಿವೃಷ್ಟಿಯಿಂದಾಗಿ ಭರ್ತಿಯಾಗಿತ್ತು.
ಇನ್ನು ಸ್ಮಾರ್ಟ್​ಫೋನ್​ ಇಲ್ಲದೆ ವಾಟ್ಸ್​ಆ್ಯಪ್​ ಬಳಸಬಹುದು; ಬೀಟಾ ಯೂಸರ್ಸ್​ಗೆ ಹೊಸ ಆಪ್ಷನ್​!

ವಿದ್ಯಾರ್ಥಿಗಳೇ.. ಧೈರ್ಯವಾಗಿ ಎಸ್​​ಎಸ್​​ಎಲ್​ಸಿ ಪರೀಕ್ಷೆ ಎದುರಿಸಿ; ಪಾಲಕರೇ ನಿಶ್ಚಿಂತೆಯಿಂದ ಮಕ್ಕಳನ್ನು ಎಕ್ಸಾಮ್​ಗೆ ಕಳಿಸಿ…

ಪ್ರತಿಭಾ ಪ್ರದರ್ಶನದ ವೇದಿಕೆ, ಆರನೇ ವಿಶ್ವ ನಾವಿಕ ಕನ್ನಡ ಸಮಾವೇಶ; ಅದಕ್ಕೂ ಮುನ್ನ ನಡೆಯಲಿದೆ ಪೂರ್ವಭಾವಿ ಸ್ಪರ್ಧೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × one =
Remember me
