ಬೆಂಗಳೂರು :ಅನ್ನದಾತರ ಅನುಭವ ಹಂಚಿಕೊಂಡು, ಕಷ್ಟ-ಕಾರ್ಪಣ್ಯಗಳ ಅಧ್ಯಯನ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ‘ರೈತರೊಂದಿಗೆ ಒಂದು ದಿನ, ವಿನೂತನ ಕಾರ್ಯಕ್ರಮ’ ಹಮ್ಮಿಕೊಳ್ಳಲಿದ್ದು, ತಮ್ಮ ಜನ್ಮದಿನವಾದ ನ.14ರಿಂದ ಪ್ರಾರಂಭಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ನಿರ್ಧರಿಸಿದ್ದಾರೆ.
ಸಿಎಂ, ವರಿಷ್ಠರ ವಿವೇಚನೆಗೆ ಬಿಟ್ಟದ್ದು
ಪಕ್ಷದ ಎಲ್ಲ ಶಾಸಕರು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವರಿಷ್ಠರ ವಿವೇಚನೆಗೆ ಬಿಟ್ಟದ್ದು. ಇಂತಹವರಿಗೆ ಸ್ಥಾನ ನೀಡಿ ಎಂದು ಹೇಳುವಷ್ಟು ದೊಡ್ಡವನು ನಾನಲ್ಲವೆಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಡಿ.ಜೆ.ಹಳ್ಳಿ ಪ್ರಕರಣದಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನೆರವಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿಲ್ಲಬೇಕಿತ್ತು. ಮುಸ್ಲಿಂರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಕೈಬಿಟ್ಟಿರುವುದು ತಪ್ಪು ಎಂದು ಟೀಕಿಸಿದರು.
ವಿಕಾಸಸೌಧದಲ್ಲಿ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಸುಸ್ಥಿರ ಕೃಷಿ, ತಂತ್ರಜ್ಞಾನ ಬಳಕೆಗೆ ಉತ್ತೇಜನ ನೀಡುವುದು. ಪ್ರಗತಿಪರ ರೈತರ ಜತೆಗೆ ಚರ್ಚೆ, ಸನ್ಮಾನ ಹಾಗೂ ರೈತರ ಬೇಡಿಕೆಗಳನ್ನು ಆಲಿಸಿ ಅನುಕೂಲತೆ ಕಲ್ಪಿಸುವುದು ಇತ್ಯಾದಿ ಚಟುವಟಿಕೆಗಳನ್ನು ಕಾರ್ಯಕ್ರಮ ಒಳಗೊಂಡಿದೆ ಎಂದರು.
ಪ್ರತಿ ತಿಂಗಳು 2-3 ಜಿಲ್ಲೆಗಳ ತಲಾ ಒಂದು ಹಳ್ಳಿಯಲ್ಲಿ ಇಂತಹ ಕಾರ್ಯಕ್ರಮ ನಡೆಯಲಿದ್ದು, ರೈತರ ಹೊಲ-ತೋಟಗಳಿಗೆ ಭೇಟಿ ನೀಡಿ ವಿಚಾರ-ವಿನಿಮಯ ನಡೆಸಲಾಗುವುದು. ಅದೇ ಹಳ್ಳಿಯಲ್ಲಿ ವಾಸ್ತವ್ಯ ಹೂಡಿ ಅನ್ನದಾತರ ಅನುಭವಗಳನ್ನು ಹಂಚಿಕೊಂಡು ಸರ್ಕಾರದ ಯೋಜನೆಗಳಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಆತ್ಮನಿರ್ಭರ್ ಭಾರತ ಪರಿಕಲ್ಪನೆ, ರೈತರ ಆದಾಯ ವೃದ್ಧಿ, ಹಳ್ಳಿಯೆಡೆಗೆ ವಾಪಸ್ಸಾಗಿರುವ ಯುವ ಜನತೆಗೆ ಕೃಷಿಯಲ್ಲಿ ಆಸಕ್ತಿ ಬೆಳೆಸುವುದು ಹೀಗೆ ಬಹುಮುಖಿ ಆಯಾಮವನ್ನು ವಿನೂತನ ಕಾರ್ಯಕ್ರಮ ಒಳಗೊಂಡಿದೆ ಎಂದು ಬಿ.ಸಿ.ಪಾಟೀಲ್ ವಿವರಿಸಿದರು.
ಮಂಡ್ಯ ಜಿಲ್ಲೆಯಲ್ಲಿ ನ.14ಕ್ಕೆ ಚಾಲನೆ :ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ನ.14ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಪ್ರಗತಿಪರ ರೈತ ಮಹಿಳೆ ರಾಯಚೂರು ಜಿಲ್ಲೆಯ ಕವಿತಾ ಮಿಶ್ರ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದು, ಸಾಧಕ ರೈತರಿಗೆ ಸನ್ಮಾನಿಸಿ ಗೌರವಿಸಲಾಗುವುದು. ಮಂಡ್ಯ ಜಿಲ್ಲೆಯ ರೈತರಿಗೆ ಉತ್ತರ ಕರ್ನಾಟಕದ ಊಟ ಉಣಬಡಿಸುವುದು ಈ ಕಾರ್ಯಕ್ರಮದ ಮತ್ತೊಂದು ವಿಶೇಷವಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಮಂಡ್ಯಕ್ಕೆ ಶುಕ್ರವಾರ ಸಂಜೆಯೇ ತೆರಳಿ, ಹಿರಿಯ ರಾಜಕೀಯ ನೇತಾರ ಹಾಗೂ ಮಾಜಿ ಸಂಸದ ಜಿ.ಮಾದೇಗೌಡರನ್ನು ಸನ್ಮಾನಿಸಲು ತೀರ್ಮಾನಿಸಿರುವೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
ಹಣಕಾಸಿನ ಅಕ್ರಮ- ದೀಪಕ್​ ಕೊಚ್ಚಾರ್​ ಜಾಮೀನು ಅರ್ಜಿ ತಿರಸ್ಕೃತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + fifteen =
Remember me
