| ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕಾನಾಥ್
ಜಗತ್ತಿಗೆ ಬೆಳಕು ನೀಡುವ ಸೂರ್ಯನು ಉತ್ತರಾಯಣ ಮುಗಿಸಿ ಗುರುವಾರದಿಂದ ದಕ್ಷಿಣ ದಿRನತ್ತ ಪ್ರಯಾಣ ಆರಂಭಿಸುತ್ತಾನೆ. ಪುಣ್ಯಕರವಾದ ಏಕಾದಶಿ ದಿನದಂದು, ದತ್ತಾತ್ರೇಯ ದೇವರ ದಿನವಾದ ಗುರುವಾರವೇ ಸಂಕ್ರಮಣ ನಡೆಯುತ್ತಿದೆ. ಶುದ್ಧ ಏಕಾದಶಿಯನ್ನು ಶಯನ ಏಕಾದಶಿ ಎಂತಲೂ ಕರೆಯುತ್ತಾರೆ. ಶಯನೋತ್ಸವದಲ್ಲಿದ್ದು ಭಕ್ತರ ಸೇವೆಗಳನ್ನು ಸ್ವೀಕರಿಸುವ ದೇವತೆಗಳು ಮತ್ತೆ ಕಾರ್ತಿಕ ಶುದ್ಧ ಏಕಾದಶಿಯಿಂದ ಸಂಚಾರ ಆರಂಭಿಸುತ್ತಾರೆ. ಶ್ರಾವಣ ಮಾಸದಲ್ಲಿ ಆರಂಭವಾಗುವ ಸಾಲುಸಾಲು ಹಬ್ಬ-ಹರಿದಿನಗಳಲ್ಲಿ ಭಕ್ತರ ಆಶಯಗಳನ್ನು ಈಡೇರಿಸುವ ಅತ್ಯಂತ ಶುಭಪ್ರದ ಸಮಯ ಇದಾಗಿದೆ. ಗೃಹಸ್ತಾಶ್ರಮದಲ್ಲಿರುವವರು ಮನೆಯಲ್ಲಿ ಜಪ, ತಪಾನುಷ್ಠಾನಗಳನ್ನು ಶ್ರದ್ಧೆಯಿಂದ ಆಚರಿಸಿ ಪುಣ್ಯ ಸಂಪಾದಿಸುವ ಸುಸಂದರ್ಭ ಇದು.
ಹಿಂದೆಯೇ ಅನೇಕ ಬಾರಿ ಹೇಳಿರುವಂತೆ, ‘ಪ್ರಜಾಪಾಪಂ ರಾಜಪಾಪಂ’. ಅಂದರೆ ಪ್ರಜೆಗಳು ಮಾಡಿದ ಪಾಪದ ಸಂಪೂರ್ಣ ಹೊರೆಯನ್ನು ರಾಜನೇ ಹೊರಬೇಕಾಗುತ್ತದೆ. 138 ಕೋಟಿ ಜನರು ತಮ್ಮೆಲ್ಲ ಪಾಪಗಳನ್ನು ಒಬ್ಬ ಪ್ರಧಾನಿ ಮೇಲೆ ಹೊರಿಸಿದರೆ ಹೇಗೆ ನಿಭಾಯಿಸುವುದು? ಮುಂಬರುವ ಅನೇಕ ವ್ರತಗಳು, ಹಬ್ಬಗಳು ಪುಣ್ಯ ಸಂಪಾದನೆಯ ಅವಕಾಶ ಕಲ್ಪಿಸುತ್ತವೆ. ಹಿರಿಯರನ್ನು ನೆನೆದು, ಅವರ ಜನ್ಮ ಪುನರಾವರ್ತನೆಯಾಗದಂತೆ ಶಾಶ್ವತ ವೈಕುಂಠವಾಸಿಯಾಗಲಿ ಎಂಬ ಕಾರಣಕ್ಕೆ ಪಿತೃಶ್ರಾದ್ಧ ನೆರವೇರಿಸಲಾಗುತ್ತದೆ. ಒಂದು ಪಕ್ಷ ದೇವರ ಪೂಜೆಯಲ್ಲಿ ಕಡಿಮೆಯಾದರೂ ತೊಂದರೆಯಿಲ್ಲ, ಪಿತೃಕಾರ್ಯದಲ್ಲಿ ಲೋಪವಾಗಬಾರದು. ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರಯಾಣಿಸುವ ಸೂರ್ಯನು ಪಿತೃದೇವತೆಗಳಿಗೆ ಸ್ವರ್ಗ ಕಲ್ಪಿಸಲು ಬರುತ್ತಾನೆ. ಅದಕ್ಕೆ ಅನುಗುಣವಾಗಿ ನಾವೆಲ್ಲರೂ ಪುಣ್ಯ ಸಂಪಾದನೆ ಕಾರ್ಯದಲ್ಲಿ ಮಗ್ನರಾಗಬೇಕು. 2019ರ ಡಿಸೆಂಬರ್​ನಲ್ಲಿ ಸಂಭವಿಸಿದ ಸೂರ್ಯಗ್ರಹಣದಿಂದ ಆರಂಭವಾದ ಕರೊನಾ ಎಂಬ ಸೋಂಕಿನ ಭಯ 2020ರ ಜೂನ್​ನಲ್ಲಿ ಘಟಿಸಿದ ಗ್ರಹಣ ಕಳೆದರೂ ಮುಂದುವರಿದಿದೆ. ಇದು ಮನುಷ್ಯ ತನ್ನ ವಿನಾಶಕ್ಕೆ ತಾನೇ ಮಾಡಿಕೊಂಡ ವ್ಯಾಧಿ ಎಂದರೆ ತಪ್ಪಾಗಲಾರದು. ಈ ಸಂಕ್ರಮಣದಲ್ಲಿ ಸೂರ್ಯನು ಮಿಥುನದಿಂದ ಒಂದು ಮನೆ ಕೆಳಗಿಳಿಯುತ್ತಾನೆ. ನಮ್ಮ ರಾಷ್ಟ್ರವನ್ನು ಆವರಿಸಿರುವ ಕರೊನಾ ವ್ಯಾಧಿಯ ಅವನತಿ ಆರಂಭವಾಗುತ್ತದೆ. ಸೂರ್ಯ ನಾರಾಯಣನೇ ಪರಿಹಾರ ಒದಗಿಸುತ್ತಾನೆ ಎಂಬ ನಂಬಿಕೆ ಎಲ್ಲರಲ್ಲಿರಲಿ. ಆದರೆ ವ್ಯಾಧಿ ಕಡಿಮೆಯಾದದ್ದು ಸೆಪ್ಟೆಂಬರ್ 20ರ ವೇಳೆಗಷ್ಟೇ ಗೋಚರವಾಗುತ್ತದೆ.
ಸೂರ್ಯನಿಗೆ ನಮಸ್ಕರಿಸುವುದರಿಂದ ಸಕಲ ಕಷ್ಟಗಳೂ ಪರಿಹಾರವಾಗುತ್ತವೆ. ಈ ಹಿಂದೆ ಎಸ್.ಎಂ. ಕೃಷ್ಣ ಅವರು ಮದ್ದೂರಿನಲ್ಲಿ ಚುನಾವಣೆಯಲ್ಲಿ ಸೋತ ಸಂದರ್ಭದಲ್ಲಿ ನಮ್ಮ ಮನೆಯಲ್ಲೇ ನಡೆಸಿದ್ದ ಸೂರ್ಯ ನಮಸ್ಕಾರ ಫಲ ಕೊಟ್ಟು ಅವರ ರಾಜಕೀಯ ಜೀವನ ಪ್ರಜ್ವಲಿಸಿತ್ತು. ಧರ್ಮದ ವಿಚಾರದಲ್ಲಿ ನಂಬಿಕೆ ಅತಿ ಮುಖ್ಯ. ಜ್ಯೋತಿಷಿಗಳು ವಿಜ್ಞಾನ, ಭೂಗೋಳ, ಗಣಿತವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಮಾರ್ಗವನ್ನು ಸೂಚಿಸಬಹುದು ಅಷ್ಟೆ. ಎಲ್ಲ ಆಸ್ತಿಕರೂ ಮನೆಯಲ್ಲೇ ಸೂರ್ಯನಾರಾಯಣ ಸ್ತೋತ್ರ ಪಠಣ ನಿರಂತರ ಮಾಡಬೇಕು. ಭಯ ನಿವಾರಣೆಯಿಂದಲೇ ಬಹುತೇಕ ಸೋಂಕು ನಿವಾರಣೆಯಾಗುತ್ತದೆ.
‘ಧ್ಯೇಯಸ್ಸದಾ ಸವಿತೃಮಂಡಲ ಮಧ್ಯವರ್ತೀ ನಾರಾಯಣಸ್ಸರಸಿಜಾಸನ ಸನ್ನಿವಿಷ್ಟಃ
ಕೇಯೂರವಾನ್ಮಕರಕುಂಡಲವಾನ್ಕಿರೀಟೀ ಹಾರೀ ಹಿರಣ್ಮಯವಪುದೃತ ಶಂಖಚಕ್ರಃ
ನಮಸ್ಸವಿತ್ರೇ ಜಗದೇಕಚಕ್ಷುಷೇ/ ಜಗತ್ಪ್ರಸೂತಿಸ್ಥಿತಿನಾಶಹೇತವೇ
ತ್ರಯೀಮಯಾಯ ತ್ರಿಗುಣಾತ್ಮಧಾರಿಣೇ/ ವಿರಿಂಚಿ ನಾರಾಯಣಶಂಕರಾತ್ಮನೇ
ಕಾಲಾತ್ಮಾ ಸರ್ವಭೂತಾತ್ಮಾ ವೇದಾತ್ಮಾ ವಿಶ್ವತೋಮುಖಃ / ಜನ್ಮಮೃತ್ಯುಜರಾವ್ಯಾಧಿ ಸಂಸಾರಭಯನಾಶನಃ
ಬ್ರಹ್ಮಸ್ವರೂಪಮುದಯೇ, ಮದ್ಯಾಹ್ನೇತು ಮಹೇಶ್ವರಃ /ಅಸ್ತಮಾನೇ ಸ್ವಯಂ ವಿಷ್ಣುಃ ತ್ರಯೀಮೂರ್ತಿ ದಿವಾಕರಃ’
ಎಲ್ಲರೂ ಈ ಸ್ತೋತ್ರವನ್ನು ಪಠಿಸಬೇಕು. ಇದರಿಂದ ಒಳಿತಾಗುತ್ತದೆ. ಇಷ್ಟೆಲ್ಲದರ ನಂತರವೂ ಸೆಪ್ಟೆಂಬರ್​ನಿಂದ ಡಿಸೆಂಬರ್ ಅವಧಿಯಲ್ಲಿ ದೇಶದಲ್ಲಿ ಅನೇಕ ಸಂಕಷ್ಟ ಎದುರಾಗುತ್ತವೆ. 2021ರ ಏಪ್ರಿಲ್ 5ರವರೆಗೂ ವ್ಯಾಧಿಯ ಹಾಗೂ ಇತರ ಸಂಕಷ್ಟಗಳ ವಾತಾವರಣ ಇದ್ದೇ ಇರುತ್ತದೆ.
ಚೀನಾಕ್ಕೆ ಹೆದರುವ ಅಗತ್ಯವಿಲ್ಲ
ನೇಪಾಳ ಸೇರಿ ನೆರೆ ದೇಶಗಳನ್ನು ಸಾಲದ ಸುಳಿಯಲ್ಲಿ ಮುಳುಗಿಸಿ ಚೀನಾ ಆಟವಾಡುತ್ತಿದೆ. ಆದರೆ ದೈವ ಭೂಮಿ ಭಾರತವನ್ನು ಏನೂ ಮಾಡಲಾಗದು. ಗೋವನ್ನು ಹಿಂಸಿಸುವ ಚೀನಾ ದೇಶ ತನ್ನದೇ ಪಾಪದ ಕೂಪದಲ್ಲಿ ಮುಳುಗಲಿದೆ. ಇಡೀ ಪ್ರಪಂಚವೇ ಅದರ ವಿರುದ್ಧ ನಿಲ್ಲುತ್ತದೆ. ಅಮೆರಿಕ ಸೇರಿ ಇಡೀ ವಿಶ್ವ ಭಾರತದ ಬೆನ್ನಿಗಿರುತ್ತದೆ. 70 ವರ್ಷದ ಆಡಳಿತದಲ್ಲಿ ಅನೇಕ ಲೋಪಗಳಾಗಿವೆ. ಹಾಗೆಂದು ಹಿಂದೆ ಆಡಳಿತ ನಡೆಸಿದವರೆಲ್ಲ ಕೆಟ್ಟವರೆಂದಲ್ಲ. ಆ ಎಲ್ಲ ಲೋಪಗಳನ್ನು ಮೋದಿ ಸರಿಪಡಿಸುತ್ತಾರೆ. ಚೀನಾ ಚಿಂತೆ ಮರೆತು ಚಿನ್ನದಂಥ ದೇಶ ಕಟ್ಟಲು ಮುಂದಾಗುತ್ತಾರೆ. ಈ ನಡುವೆ ಉತ್ತರ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಂಭವವಿರುವುದರಿಂದ, ಆಹಾರ ಸುರಕ್ಷತೆ ಕುರಿತು ಮೈಮರೆಯಬಾರದು. ರಾಜಕೀಯವಾಗಿ ಪ್ರತಿಪಕ್ಷದಿಂದ ಆಪಾಯಗಳು, ಎದುರಾಳಿಗಳು ಇಲ್ಲ. ಆದರೆ ಸ್ವಂತ ಪಕ್ಷದಲ್ಲೇ ಪ್ರತಿಸ್ಪರ್ಧಿಗಳು ಹುಟ್ಟಿಕೊಳ್ಳಬಹುದು. ಇದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಗೂ ಅನ್ವಯ.
ಅಪರಾಧ ಸುಧಾರಣೆ ಸಮಿತಿ ವಿಸರ್ಜಿಸಿ
ದೇಶದ ಅಪರಾಧ ಕಾನೂನುಗಳನ್ನು ಸುಧಾರಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಧರ್ಮ ಪಾಲನೆಯ ಕಾರ್ಯವನ್ನು ಸ್ವತಃ ಶನಿಮಹಾತ್ಮ ನೆರವೇರಿಸುತ್ತಾನೆ. ಕರ್ನಾಟಕದಲ್ಲಿ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಅವರಂತಹ ಮಹಾನ್ ಕಾನೂನು ತಜ್ಞರಿದ್ದಾರೆ. ಆದರೆ ಅಂತಹ ಘನತೆಯುಳ್ಳವರು ಸಮಿತಿಯಲ್ಲಿಲ್ಲ. ಕರೊನಾ ಸಂಕಷ್ಟದ ಸಮಯದಲ್ಲಿ ಇಂಥ ಮಹತ್ವದ ಸುಧಾರಣೆ ಕಾರ್ಯವನ್ನು ಕೈಬಿಡುವುದು, ಸಮಿತಿಯನ್ನು ವಿಸರ್ಜಿಸಬೇಕು. ಕರೊನಾ ನಂತರ ಚರ್ಚೆಗಳನ್ನು ನಡೆಸಿ ಪುನಃ ಚಾಲನೆ ನೀಡುವುದು ಉತ್ತಮ. ಆರ್ಥಿಕ ಅಪರಾಧ ಎಸಗಿ ದೇಶ ತೊರೆದಿರುವ ಯಾರೇ ಆದರೂ ಸ್ವಯಂ ಆಗಿ ಮುಂದೆ ಬಂದರೆ ಅಂಥವರಿಂದ ಹಣವನ್ನು ಪಡೆಯುವುದೊಳಿತು. ನಂತರದಲ್ಲಿ ಅಪರಾಧದ ವಿಚಾರಣೆ ನಡೆಯಲಿ. ರಾಹು-ಕೇತು ಬದಲಾವಣೆಯ ಸಮಯದಲ್ಲಿ ಸಾಲ ವಸೂಲಿಗೆ ಸೂಕ್ತ ಕಾಲ.
ಸಿಬಿಎಸ್​ಇ ಫಲಿತಾಂಶ: ಅಭಿನಂದನೆ ಸಲ್ಲಿಸಿ…ಆತ್ಮವಿಶ್ವಾಸವನ್ನೂ ತುಂಬಿದ ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + sixteen =
Remember me
