ಬೆಂಗಳೂರು:ರಾಜ್ಯಾದ್ಯಂತ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯ ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್​ ರೂಂನಲ್ಲಿ ಭದ್ರವಾಗಿದ್ದು, ನ.10ರಂದು ಫಲಿತಾಂಶ ಹೊರಬೀಳಲಿದೆ. ಇದಕ್ಕೂ ಮುನ್ನ ಮತದಾನೋತ್ತರ ಸಮೀಕ್ಷೆಯ ಫಲಿತಾಂಶ ಬಯಲಾಗಿದೆ.
ಉಪಸಮರಲ್ಲಿ ಬಿಜೆಪಿ, ಜೆಡಿಎಸ್​, ಕಾಂಗ್ರೆಸ್​ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟಿದ್ದು, ಪ್ರತಿಷ್ಠೆಯ ಕಣವಾಗಿ ಪರಿಣಮಿಸಿತ್ತು. ಶಿರಾ ಮತ್ತು ಆರ್​ ಆರ್​ ನಗರ ಕ್ಷೇತ್ರದ ಮತದಾರರು ನ.3ರಂದು ಅಭ್ಯರ್ಥಿಗಳ ಹಣೆಬರಹ ಬರೆದಿದ್ದು, ಬಹುತೇಕ ಮತದಾರರ ಒಲವು ಯಾರ ಕಡೆ ಇತ್ತು? ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು? ಎರಡೂ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಜಯ ಸಿಗಲಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಅಂದಾಜಿನ ಉತ್ತರ ನೀಡುವ ಪ್ರಯತ್ನವನ್ನು ದಿಗ್ವಿಜಯ ನ್ಯೂಸ್​ ಮಾಡಿದೆ. ನಿಮ್ಮ “ದಿಗ್ವಿಜಯ 24×7​ ನ್ಯೂಸ್ ” ಮತದಾರರ ನಾಡಿಮಿಡಿತಗಳನ್ನು ಅರಿಯುವ ಪ್ರಯತ್ನ ಮಾಡಿದ್ದು, ಮತದಾನೋತ್ತರ ಸಮೀಕ್ಷೆಯ ವರದಿ ಹೀಗಿದೆ.
ಶಿರಾ ಕ್ಷೇತ್ರದ ಜೆಡಿಎಸ್​ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಬೈ ಎಲೆಕ್ಷನ್​ನಲ್ಲಿ ಜೆಡಿಎಸ್​ನಿಂದ ಸತ್ಯನಾರಾಯಣರ ಪತ್ನಿ ಅಮ್ಮಾಜಮ್ಮ, ಬಿಜೆಪಿಯಿಂದ ಡಾ.ರಾಜೇಶ್​ಗೌಡ, ಕಾಂಗ್ರೆಸ್​ನಿಂದ ಟಿ.ಬಿ.ಜಯಚಂದ್ರ ಸ್ಪರ್ಧಿಸಿದ್ದರು. ದಿಗ್ವಿಜಯ ನ್ಯೂಸ್​ ಮತಗಟ್ಟೆ ಸಮೀಕ್ಷೆ ಪ್ರಕಾರ ಈ ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್​ಗೆ ಬಿಜೆಪಿ ತೀವ್ರ ಪೈಪೋಟಿ ನಿಡಿದೆಯಾದರೂ 2ನೇ ಸ್ಥಾನಕ್ಕೆ ಬರಲಿದೆ ಎಂದು ತಿಳಿದುಬಂದಿದೆ.
ಜಿದ್ದಾಜಿದ್ದಿಯ ಕ್ಷೇತ್ರವಾಗಿ ಪರಿಣಮಿಸಿದ್ದ ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್​ನಿಂದ ದಿವಗಂತ ಡಿ.ಕೆ.ರವಿ ಪತ್ನಿ, ಜೆಡಿಎಸ್​ನಿಂದ ಕೃಷ್ಣಮೂರ್ತಿ, ಬಿಜೆಪಿಯಿಂದ ಮುನಿರತ್ನ ಅಖಾಡಕ್ಕಿಳಿದಿದ್ದರು. ಈ ಕ್ಷೇತ್ರದಲ್ಲಿ ಮುನಿರತ್ನಗೆ ತೀವ್ರ ಪೈಪೋಟಿ ನೀಡಿರುವ ಕಾಂಗ್ರೆಸ್​ನ ಕುಸುಮಾ 2ನೇ ಸ್ಥಾನಕ್ಕೆ ಬರಲಿದ್ದು, ಮುನಿರತ್ನ ಜಯಭೇರಿ ಬಾರಿಸಲಿದ್ದಾರೆ ಎಂದು ಸಮೀಕ್ಷೆಯ ವರದಿ ಹೇಳುತ್ತಿದೆ.
ಇನ್ನು ಸಿ-ವೋಟರ್​ ಸಮೀಕ್ಷೆಯಲ್ಲೂ ಶಿರಾ ಮತ್ತು ಆರ್ ಆರ್​ ನಗರ ಕ್ಷೇತ್ರಗಳಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿದೆ. ಇದರ ಪ್ರಕಾರ 3ನೇ ಬಾರಿಯೂ ಮುನಿರತ್ನ ಜಯ ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆರ್​ ಆರ್​ ನಗರದಲ್ಲಿ ಕುಸುಮಾ ಶೇ.31.1ರಷ್ಟು ಮತ ಪಡೆಯುತ್ತರಾದರೂ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತೆ ಎಂದು ಸಮೀಕ್ಷೆಯ ವರದಿ ಹೇಳಿದೆ. ಮುನಿರತ್ನಗೆ ಶೇ.37.8ರಷ್ಟು ಮತ ಸಿಗಲಿದ್ದು, ಗೆಲುವು ಸಾಧಿಸುವ ಸಾಧ್ಯತೆ ಇದೆ. ಜೆಡಿಎಸ್​ನ ಕೃಷ್ಣಮೂರ್ತಿಗೆ ಶೇ. 14 ಮತ, ಇತರರಿಗೆ ಶೇ. 17.2 ಮತಗಳು ಬಿದ್ದಿವೆ ಎಂದು ಸಮೀಕ್ಷೆಯ ವರದಿ ಹೇಳಿದೆ.
ಶಿರಾದಲ್ಲಿ ಬಿಜೆಪಿಯ ರಾಜೇಶ್​ಗೌಡಗೆ 36.6ರಷ್ಟು ಮತ, ಕಾಂಗ್ರೆಸ್​ನ ಜಯಚಂದ್ರಗೆ ಶೇ. 32.5 ಮತ, ಜೆಡಿಎಸ್​ನ ಅಮ್ಮಾಜಮ್ಮಗೆ ಶೇ. ಮತ, ಇತರರಿಗೆ ಶೇ. 13.5 ಮತಗಳು ಬರುವ ಸಾಧ್ಯತೆ ಇದೆ ಎಂದು ಸಿ ವೋಟರ್​ನ ಸಮೀಕ್ಷೆ ಹೇಳಿದೆ.
ಈ ದೃಶ್ಯ ನೋಡಿದ್ರೆ ನಿಮ್ಮ‌ ಮೈ ಜುಮ್ ಅನ್ನೋದು ಗ್ಯಾರಂಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 17 =
Remember me
