ಬೆಂಗಳೂರು:ರಾಜ್ಯ ಸಹಕಾರ ಮಾರಾಟ ಮಹಾಮಂಡಳವು 2019-20ನೇ ಸಾಲಿನಲ್ಲಿ 31.22 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಮಹಾಮಂಡಳ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಕೊಡವ ಸಮಾಜದಲ್ಲಿ ನಡೆದ ಮಹಾಮಂಡಳದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ 3,124 ಕೋಟಿ ರೂ. ವ್ಯವಹಾರ ನಡೆಸಿ 31.22 ಕೋಟಿ ರೂ. ಲಾಭ ಗಳಿಸಿದೆ. 2020ರ ನವೆಂಬರ್ ಅಂತ್ಯದವರೆಗೆ 370 ಕೋಟಿ ರೂ. ಮೌಲ್ಯದ ಮೂರು ಲಕ್ಷ ಮೆ. ಟನ್ ರಸಗೊಬ್ಬರಗಳನ್ನು ಮಾರಾಟ ಮಾಡಲಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ದಾವಣಗೆರೆಯಲ್ಲಿ 12.50 ಲಕ್ಷ ಮೆ.ಟನ್ ಸಾಮರ್ಥ್ಯದ ಗ್ರೀನ್‌ಫೀಲ್ಡ್ ಯೂರಿಯಾ ಉತ್ಪಾದನಾ ಘಟಕ ಪ್ರಾರಂಭಿಸಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದು, ಶೀಘ್ರವೇ ಅನುಮತಿ ಸಿಗುವ ಸಾಧ್ಯತೆ ಇದೆ. ಲಾಜಿಸ್ಟಿಕ್ ವೇರ್‌ಹೌಸ್, ವಾಣಿಜ್ಯ ಕಟ್ಟಡಗಳ ನಿರ್ಮಾಣ, ರೈತರ ಅನುಕೂಲಕ್ಕಾಗಿ ಇ-ಮಾರ್ಕೆಟ್ ಘಟಕಗಳ ಸ್ಥಾಪಿಸಲು ಉದ್ದೇಶಿಸಲಾಗಿದೆ. ರಾಜ್ಯದ 50 ಸ್ಥಳಗಳಲ್ಲಿ ರಸಗೊಬ್ಬರ, ಕ್ರಿಮಿನಾಶಕ ಹಾಗೂ ಕೃಷಿ ಉತ್ಪನ್ನಗಳ ಮಾರಾಟ ಮಳಿಗೆಗಳ ಪೈಕಿ 10 ಚಿಲ್ಲರೆ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಲಾಗಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಆರ್. ಶ್ರೀಧರ್, ಉಪಾಧ್ಯಕ್ಷ ಬಸಗೌಡ ರಾಮಗೌಡ ಪಾಟೀಲ, ನಿರ್ದೇಶಕ ಎಸ್.ಎಲ್. ಧರ್ಮೇಗೌಡ, ಶಾಸಕ ಕೆ.ಶ್ರೀನಿವಾಸಗೌಡ ಮತ್ತಿತರಿದ್ದರು.
ಕೋವಿಡ್ ನಿಯಮ ಉಲ್ಲಂಘನೆಗೆ 1 ಲಕ್ಷ ರೂ.ವರೆಗೆ ದಂಡ: ಮಾಲೀಕರು, ಆಯೋಜಕರೇ ಭರಿಸಬೇಕು
ಕರೊನಾ ಲಸಿಕೆ ಇವರಿಗೇ ಮೊದಲು ಬೇಕಂತೆ; ಪ್ರಧಾನಿಗೆ ಪತ್ರ ಬರೆದು ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 1 =
Remember me
