ಬೆಂಗಳೂರು:ಶಿರಾ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಶನಿವಾರ ಹಲವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಚುನಾವಣಾ ಅಖಾಡಕ್ಕೆ ಸಜ್ಜಾಗಿದೆ. ಮೂರು ಬಾರಿ ಸಂಸದರಾಗಿದ್ದ ಮೂಡಲಗಿರಿಯಪ್ಪ ಅವರ ಪುತ್ರ, ಡಾ.ರಾಜೇಶ್​ಗೌಡ ಅವರ ಜತೆೆ ನಾದೂರು ಹಾಗೂ ಮದಲೂರು ಜಿಪಂ ಸದಸ್ಯೆಯರ ಪತಿಯರು ಬಿಜೆಪಿ ಸೇರ್ಪಡೆಯಾಗಿದ್ದು, ಅವರನ್ನು ಶನಿವಾರ ಬಿಜೆಪಿ ಅಧ್ಯಕ್ಷ ನಳಿನ್​ಕುಮಾರ್ ಕಟೀಲ್ ಪಕ್ಷದ ಬಾವುಟ ನೀಡುವ ಮೂಲಕ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಇದೇ ಸಂದರ್ಭದಲ್ಲಿ ತಾಪಂ ಸದಸ್ಯರು, ನಗರಸಭಾ ಮಾಜಿ ಸದಸ್ಯರು ಸೇರಿ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು. ಸ್ಥಳದಲ್ಲಿಯೇ ಪ್ರಾಥಮಿಕ ಸದಸ್ಯತ್ವ ನೀಡಲಾಯಿತು. ಸ್ಥಳದಲ್ಲಿಯೇ ರಸೀದಿ ಹಾಕಿ ಪ್ರಾಥಮಿಕ ಸದಸ್ಯತ್ವ ನೀಡಲಾಯಿತು.
ಇದೇ ಸಂದರ್ಭದಲ್ಲಿ ತಾಪಂ ಸದಸ್ಯರು, ಮಾಜಿ ನಗರಸಭಾ ಸದಸ್ಯರು ಸೇರಿದಂತೆ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು. ಸ್ಥಳದಲ್ಲಿಯೇ ರಸೀದಿ ಹಾಕಿ ಪ್ರಾಥಮಿಕ ಸದಸ್ಯತ್ವ ನೀಡಲಾಯಿತು.
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಡಾ.ರಾಜೇಶ್ ಗೌಡ, ನಮ್ಮ ದೇಶದಲ್ಲಿ ಕಟ್ಟಕಡೆಯ ಪ್ರಜೆಗೂ ಒಳ್ಳೆಯ ಜೀವನ ಸಿಗಲು ಒಳ್ಳೆಯ ರಾಜಕೀಯ ವೇದಿಕೆ ಅಗತ್ಯ. ನಾನೊಬ್ಬ ವೈದ್ಯ, ಇದುವರೆಗೆ ಯಾವುದೇ ಪಕ್ಷ ಸೇರಿರಲಿಲ್ಲ. ನಾನು ಮೊದಲಿಂದಲೂ ಬಿಜೆಪಿ ಬೆಂಬಲಿಸುತ್ತಿದ್ದೆ. ಇವತ್ತು ಬಿಜೆಪಿ ಸೇರುತ್ತಿರುವುದು ಸಂತಸ ತಂದಿದೆ ಎಂದರು.
ನನ್ನ ತಂದೆ (ಮೂಡಲಗಿರಿಯಪ್ಪ) 3 ಬಾರಿ ಸಂಸದ, ಒಮ್ಮೆ ಶಿರಾ ಕ್ಷೇತ್ರದ ಶಾಸಕರಾಗಿದ್ದರು. ನನಗೂ ರಾಜಕೀಯಕ್ಕೆ ಬರುವಂತೆ ಕ್ಷೇತ್ರದ ಜನತೆಯ ಒತ್ತಾಯ ಇತ್ತು. ನಾನು ಪಕ್ಷ ಸೇರಿದರೆ ಅದು ಬಿಜೆಪಿಯೇ ಆಗಿರಬೇಕು ಅಂದುಕೊಂಡಿದ್ದೆ. ಶಿರಾ ಕ್ಷೇತ್ರದಲ್ಲಿ ನಾವೆಲ್ಲ ಬಿಜೆಪಿ ವಿಜಯದ ಪತಾಕೆ ಹಾರಿಸುತ್ತೇವೆ ಎಂದು ಹೇಳಿದರು.
ಟಿಕೆಟ್ ಪಕ್ಷಕ್ಕೆ ಬಿಟ್ಟ ವಿಷಯ
ಇವತ್ತು ಕಾರ್ಯಕರ್ತನಾಗಿ ಸೇರ್ಪಡೆ ಆಗಿದ್ದೇನೆ. ಟಿಕೆಟ್ ವಿಚಾರದಲ್ಲಿ ಪಕ್ಷ ತೀರ್ಮಾನ ಮಾಡಲಿದೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನಾನು ನಾಯಕತ್ವಕ್ಕೆ ಮೆಚ್ಚಿ ಸೇರ್ಪಡೆ ಆಗಿದ್ದೇನೆ ಎಂದು ಡಾ.ರಾಜೇಶ್ ಗೌಡ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + eight =
Remember me
