ಬೆಂಗಳೂರು: ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸ್ವಾಮಿ ವಿವೇಕಾನಂದ ಸಂಘ ರಚನೆಗೆ ಹಿಂದಿನ ಸರ್ಕಾರ ಪ್ರಯತ್ನಿಸಿತ್ತು. ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ ರಾಜೀವ್​ ಗಾಂಧಿ ಯುವ ಶಕ್ತಿ ಸಂಘ ಸ್ಥಾಪನೆಗೆ ಮುಂದಾಗಿದೆ.
ರಾಜ್ಯದ ಪ್ರತಿ ಪಂಚಾಯಿತಿಯಲ್ಲೂ ರಾಜೀವ್ ಗಾಂಧಿ ಯುವ ಶಕ್ತಿ ಕೇಂದ್ರವನ್ನು ಪುನರಾರಂಭಿಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ರಾಜೀವ್ ಗಾಂಧಿ ಯುವ ಶಕ್ತಿ ಕೇಂದ್ರವನ್ನು ಪ್ರತಿ ಪಂಚಾಯಿತಿಯಲ್ಲಿ ಸ್ಥಾಪನೆ ಮಾಡಿಸಿದ್ದೆ. ಬೇರೆ ಸರ್ಕಾರಗಳು ರಾಜೀವ್ ಗಾಂಧಿ ಅವರ ಹೆಸರು ಇದೆ ಎಂದು ಈ ಯೋಜನೆ ಮುಂದುವರೆಸಲಿಲ್ಲ ಎಂದರು.
ಈಗ ಈ ಕೇಂದ್ರಗಳನ್ನು ಪುನಾರಂಭಿಸಿ ಯುವಶಕ್ತಿಯನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತೇವೆ ಎಂದ ಅವರು ರಾಜೀವ್ ಗಾಂಧಿ ಎನ್ನುವುದು ಕೇವಲ ಹೆಸರಲ್ಲ. ದೇಶದ ಯುವ ಆಲೋಚನೆಯ ಶಕ್ತಿ ಎಂದು ಹೇಳಿದರು.
ಪಂಚಾಯಿತಿಯಿಂದ ಪಾರ್ಲಿಮೆಂಟಿನ ತನಕ ನಾಯಕರು ಬೇಕು ಎಂಬ ಆಲೋಚನೆ ಅವರದು. ನಾಯಕರುಗಳನ್ನು ಗುರುತಿಸಲು ಅನುವಾಗುವಂತೆ ಸಂವಿಧಾನದ 73 ಮತ್ತು 74 ನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದು ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದರು. ಯುವ ನಾಯಕತ್ವದ ಬಗ್ಗೆ ಅವರಿಗೆ ಇದ್ದ ದೂರದೃಷ್ಟಿಯ ಫಲದಿಂದ ನಾವೆಲ್ಲಾ ರಾಜಕಾರಣದಲ್ಲಿ ಬೆಳೆಯುವಂತಾಯಿತು ಎಂದರು.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಕೆ.ಜೆ ಜಾರ್ಜ್, ಬೋಸರಾಜ್, ಮಧು ಬಂಗಾರಪ್ಪ, ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್, ಕಾರ್ಯಧ್ಯಕ್ಷರಾದ ಸಲೀಮ್ ಅಹ್ಮದ್, ಚಂದ್ರಪ್ಪ, ಮಾಜಿ ಸಚಿವ ರೇವಣ್ಣ ಹಾಜರಿದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × 2 =
Remember me
