ಬೆಂಗಳೂರು:ರಾಜ್ಯದ ಕೋಟ್ಯಂತರ ರೈತರ ಬದುಕು ಹಸನಾಗಿಸುತ್ತಿರುವ ಕರ್ನಾಟಕ ಹಾಲು ಮಹಾಮಂಡಳಿಗೆ (ಕೆಎಂಎಫ್​​​) ವರನಟ ಡಾ.ರಾಜ್‌ಕುಮಾರ್ ಹಾಗೂ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಎರಡು ಕಣ್ಣುಗಳಿದ್ದಂತೆ ಎಂದು ನಟ ಶಿವರಾಜ್‌ಕುಮಾರ್ ಬಣ್ಣಿಸಿದರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ, ಕೆಎಂಎ್ ನೌಕರರ ಕಲ್ಯಾಣ ನಿಧಿ ಟ್ರಸ್ಟ್ ಸಹಯೋಗದಲ್ಲಿ ಕೆಎಂಎಫ್​​ ಕಲಾವೇದಿಕೆ ಸಂಸ್ಥೆ ಜಯನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಕನ್ನಡ ರಾಜ್ಯೋತ್ಸವ’ ಮತ್ತು ಡಾ.ವರ್ಗೀಸ್ ಕುರಿಯನ್ ಜನ್ಮದಿನೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಎಂಎಫ್​​​​​​​​ಗೆ ನನ್ನನ್ನು ರಾಯಭಾರಿಯಾಗಿ ಮಾಡಿದ್ದಕ್ಕೆ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಸಹ ಕೆಎಂಎಫ್​​ಗೆ ಮೂರನೇ ಕಣ್ಣು ಇದ್ದಂತೆ. ಆದರೂ ಎಂದಿಗೂ ನನ್ನ ತಂದೆಯೇ ಈ ಸಂಸ್ಥೆಗೆ ರಾಯಭಾರಿ. ರೈತರು ಎಂದಾಕ್ಷಣ ಅಪ್ಪಾಜಿ ಮರು ಮಾತನಾಡದೆ ಕೆಎಂಎ್ ರಾಯಬಾರಿ ಆದವರು. ನಾನೂ ಆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೆ. ಗಾಜನೂರಿನಲ್ಲಿರುವಾಗ ಹಸು ಸಾಕಿದ್ದವು. ನಾನು ಕೂಡ ಹಸು ಹಾಲು ಕರೆದು ಮೇವು ಹಾಕಿದ್ದೇನೆ. ಈಗ ನಿಮ್ಮಲ್ಲೂ ಒಬ್ಬನಾಗಿರುವುದು ಸಂತಸವಾಗಿದೆ ಎಂದರು. ಕೆಎಂಎ್ ನಿರ್ದೇಶಕರಾದ ಎಚ್.ಜಿ.ಹಿರೇಗೌಡ, ಸಿ.ವೀರಭದ್ರ ಬಾಬು, ಆನಂದ್‌ಕುಮಾರ್, ಎಂ. ನಂಜುಂಡಸ್ವಾಮಿ, ಕೆಎಂಎಫ್​​ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ:ಮುನಿಸಿಪಾಲಿಕಾ ಸಮ್ಮೇಳನದಲ್ಲಿ ಗಮನ ಸೆಳೆಯುತ್ತಿದೆ ಮ್ಯಾನ್‌ಹೋಲ್ ಸ್ವಚ್ಛತೆಯ ರೋಬೋಟ್
ಭಾರತ ರತ್ನ ಸಿಗಬೇಕಿತ್ತು:ದೇಶದಲ್ಲಿ ದೊಡ್ಡ ಕ್ಷೀರ ಕ್ರಾಂತಿ ಮಾಡಿದ್ದ ಭಾರತೀಯ ಹೈನುಗಾರಿಕೆ ಪಿತಾಮಹ ವರ್ಗೀಸ್ ಕುರಿಯನ್ ಅವರಿಗೆ ಭಾರತ ರತ್ನ ಸಿಗಬೇಕಿತ್ತು ಎಂದು ಶಿವರಾಜ್ಕುಮಾರ್ ಹೇಳಿದರು. ದೇಶದಲ್ಲಿ ಹಾಲು ಒಕ್ಕೂಟ ಬೆಳೆಯಲು ಕಾರಣೀಭೂತರಾಶದವರು. ರೈತರ ಏಳಿಗೆಗಾಗಿ ಹಗಲಿರುಳು ದುಡಿದಿದ್ದವರು. ಗುಜರಾತಿನ ಅಮೂಲ್, ಕರ್ನಾಟಕ ಕೆಎಂಎ್ ಸೇರಿ ದೇಶದ ಹಲವು ಹಾಲು ಒಕ್ಕೂಟಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣರಾದವರು. ಇಂಥ ಮಹಾನ್ ಸಾಧನೆ ಮಾಡಿದ ಇವರಿಗೆ ದೇಶದ ಅತ್ಯುನ್ನತ ಪ್ರಶಸ್ತಿ ದೊರೆಯಬೇಕಿತ್ತು ಎಂದರು.
ಹಿಂದೆ ಕೆಲವರು ಕನ್ನಡ ಬಗ್ಗೆ ಹಗುರವಾಗಿ ಮಾತುಗಳನ್ನಾಡಿದ್ದರು. ಎಷ್ಟೇ ಸವಾಲುಗಳು ಎದುರಾದರೂ ಕನ್ನಡ ಭಾಷೆ ಉಳಿಯುವಂತಾಗಬೇಕು. ಕರ್ನಾಟಕ ಏಕೀಕರಣಕ್ಕೆ ಶಕ್ತಿ ತಂದು ಕೊಟ್ಟವರು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರು. ನಾಲ್ಕು ದಶಕಗಳಲ್ಲಿ ಯಾವ ರಾಜರು ಮಾಡದಂಥ ಅಭಿವೃದ್ಧಿ ಕಾರ್ಯಗಳನ್ನು ಮಾಡಿದವರು.–ಹಂಸಲೇಖ, ಸಂಗೀತ ನಿರ್ದೇಶಕ
ಶಿವರಾಜ್‌ಕುಮಾರ್ ಕೆಎಂಎಫ್​​ಗೆ ನೂತನ ರಾಯಭಾರಿ ಆಗಿದ್ದಕ್ಕೆ ಖುಷಿಯಾಗಿದೆ. ರೈತರು ಬಹಳ ಕಷ್ಟದಲ್ಲಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ದರದಲ್ಲಿ ಹಾಲು ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರ ಅಭ್ಯುದಯಕ್ಕಾಗಿ ನಮ್ಮ ಸರ್ಕಾರ ಒಳ್ಳೆಯ ಕಾರ್ಯ ಮಾಡಲಿದೆ. ನಮ್ಮ ಸರ್ಕಾರ ಬಂದ ಬಳಿಕ ರೈತರಿಂದ ಖರೀದಿಸುವ ಹಾಲಿನ ದರವನ್ನು ಹೆಚ್ಚಿಸಲಾಗಿತ್ತು. ರೈತರ ಅಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.– ಭೀಮನಾಯ್ಕ, ಕೆಎಂಎಫ್​​ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 6 =
Remember me
