ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಂಪುಟ ವಿಸ್ತರಣೆ ಕಗ್ಗಂಟಾಗಿದೆ. ಸಚಿವ ಸ್ಥಾನಕ್ಕೆ ಹಲವರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಶೀಘ್ರವೇ ಮಂತ್ರಿಯನ್ನಾಗಿ ಮಾಡಿ ಎಂದು ಸಿಎಂಗೆ ದುಂಬಾಲು ಬಿದ್ದಿದ್ದಾರೆ. ಈ ನಡುವೆ ಅವರಿಗೆ ಮನ್ನಣೆ ನೀಡಿ, ಇವರಿಗೆ ಕೊಡಬೇಡಿ ಎಂಬ ಒತ್ತಡವೂ ಸಿಎಂ ಮೇಲಿದೆ. ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್​ ವಿಚಾರದಲ್ಲೂ ಇದು ಮರುಕಳಿಸಿದೆ.
ಯೋಗೇಶ್ವರ್​ರನ್ನು ಸಚಿವರನ್ನಾಗಿ ಮಾಡುವ ಅವಶ್ಯಕತೆ ಇಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವ ಶಾಸಕ ರಾಜುಗೌಡ, ‘ಯೋಗೇಶ್ವರ್​ರ ಆಸ್ತಿಯನ್ನು ನಾವ್ ತಗೊಂಡಿಲ್ಲ. ನಮ್ ಆಸ್ತಿಯನ್ನು ಯೋಗೇಶ್ವರ್ ತಗೊಂಡಿಲ್ಲ. ಯೋಗೇಶ್ವರ್ ಮೇಲೆ ನಮಗೆ ದ್ವೇಷವೂ ಇಲ್ಲ. ಆದ್ರೆ ಸೋತವರಿಗೆ ಸಚಿವ ಸ್ಥಾನ ಕೊಡೋದು ಬೇಡ ಅಂತ ಸಿಎಂಗೆ ಮನವಿ ಮಾಡಿದ್ದೇವೆ ಎಂದರು.
ಶನಿವಾರ ರಮೇಶ್​ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ನಿವಾಸದಿಂದ ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜುಗೌಡ, ಸೋತವರ ಬದಲು ಶಾಸಕರಿಗೆ ಸಚಿವ ಸ್ಥಾನ ಕೊಡಿ ಅಂದಿದ್ದೇವೆ. ಎಂಟಿಬಿ, ವಿಶ್ವನಾಥ್, ಶಂಕರ್ ಅವರು ಪಕ್ಷಕ್ಕೆ ತ್ಯಾಗ ಮಾಡಿ ಬಂದವರು. ಈ ಮೂವರಿಗೂ ಸಚಿವ ಸ್ಥಾನ ಕೊಡಲಿ, ನಮ್ಮ ಆಕ್ಷೇಪ ಇಲ್ಲ. ಆದ್ರೆ ಯೋಗೇಶ್ವರ್ ವಿಚಾರದಲ್ಲಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ ಎಂದರು.
ಯೋಗೇಶ್ವರ್​ರನ್ನು ಮಂತ್ರಿ ಮಾಡೇ ಮಾಡ್ತೀವಿ ಅಂದ್ರೆ ಮಾಡಲಿ. ಹೈಕಮಾಂಡ್ ಮತ್ತು ಸಿಎಂ ನಿರ್ಧಾರಕ್ಕೆ ನಾವು ಬದ್ಧ. ಆದ್ರೆ ಸೋತವರ ಬದಲು ಗೆದ್ದವರಿಗೆ ಅವಕಾಶ ಕೊಟ್ಟರೆ ಉತ್ತಮ ಎಂದರು.
ರಾಜುಗೌಡ ವಿರೋಧದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಸಿ.ಪಿ.ಯೋಗೇಶ್ವರ್ ಭೇಟಿ ನೀಡಿ ಕೆಲಕಾಲ ಮಾತುಕತೆ ನಡೆಸಿದರು.
ನಿಖಿಲ್​-ಪ್ರಜ್ವಲ್ ಒಟ್ಟಾಗಿ ಯುದ್ಧಕ್ಕೆ ಹೋಗಲಿ..! ಚಿಕ್ಕಪ್ಪ-ದೊಡ್ಡಪ್ಪನ ಎದುರಲ್ಲೇ ಸವಾಲು

ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
